NETWORK:ಕೆಲವೊಂದು ಪ್ರದೇಶದಲ್ಲಿ ಇಂದಿಗೂ ನೆಟ್​ವರ್ಕ್ ಸಮಸ್ಯೆಯಿದೆ;

ದಶಕಗಳ ಹಿಂದೆಯೇ ಫೋನ್ (Phone)​ ಕಂಡು ಹಿಡಿದರು. ಆದರೆ ಅದಕ್ಕೆ ಸಂಬಂಧಿಸಿದ ನೆಟ್​ವರ್ಕ್​ ಸಮಸ್ಯೆ (Network Issue) ಇಂದಿಗೂ ಇದೆ. ಭಾರತದಲ್ಲಿ (India) ಬಹುತೇಕ ಜನರು ಸ್ಮಾರ್ಟ್​ಫೋನ್ (Smartphone)​ ಬಳಸುತ್ತಾರೆ. ಆದರೆ ಕೆಲವೊಂದು ಪ್ರದೇಶದಲ್ಲಿ ಇಂದಿಗೂ ನೆಟ್​ವರ್ಕ್ ಸಮಸ್ಯೆಯಿದೆ.
ಈ ಸಮಸ್ಯೆಯನ್ನು ಹೋಗಲಾಡಿಸಲು ಟೆಲಿಕಾಂ ಕಂಪನಿಗಳು (Telecom Company) ಶತ ಪ್ರಯತ್ನವನ್ನು ಮಾಡುತ್ತಿದೆ. ದೇಶದಾದ್ಯಂತ ನೆಟ್​ ವರ್ಕ್​ ಒದಗಿಸುವ ಕಾರ್ಯಕ್ರವನ್ನು ಮಾಡುತ್ತಿವೆ.

ಸ್ಮಾರ್ಟ್​ಫೋನ್​ ಇಂದು ಬಹುಮುಖ್ಯ ಸಾಧನವಾಗಿದೆ. ಹಿಂದಿನ ಕಾಲದಲ್ಲಿ ಒಂದು ಸಂದೇಶವನ್ನು ತಲುಪಿಸಲು 1 ವಾರ ಅಥವಾ ಒಂದು ತಿಂಗಳು ಹಿಡಿಯುತ್ತಿತ್ತು ಮತ್ತು ಶ್ರಮವು ವ್ಯರ್ಥವಾಗುತ್ತಿತ್ತು. ಆದರೆ ಫೋನ್​ ಬಂದ ನಂತರ 1 ನಿಮಿಷದಲ್ಲಿ ಎಲ್ಲಾ ಕೆಲಸವು ಸಾಧ್ಯ. ವಿದೇಶಗಳಿಗೂ ಕರೆ ಮಾಡಿ ಸಂದೇಶ ತಿಳಿಸಬಹುದಾಗಿದೆ.

ಭಾರತವು 6ಜಿ ಕಡೆಗೆ ಮುಖ ಮಾಡಿದೆ. ಆದರೆ ಭಾರತದಲ್ಲಿ ಇಂದಿಗೂ ನೆಟ್​ವರ್ಕ್​ ಸಮಸ್ಯೆಯಿದೆ. ಕೊರೋನಾ ಕಾಲಘಟ್ಟದಲ್ಲಿ ವರ್ಕ್​ ಫ್ರಂ ಹೋಮ್ ಮತ್ತು ಆನ್​ಲೈನ್​ ತರಗತಿಯನ್ನು ಎದುರಿಸಿದ ವಿದ್ಯಾರ್ಥಿಗಳಿಗೆ ನೆಟ್​ವರ್ಕ್​ ಸಮಸ್ಯೆ ದೊಡ್ಡ ತಲೆನೋವಾಗಿತ್ತು. ಮಾತ್ರವಲ್ಲದೆ. ಭಾರತದಲ್ಲಿ ನೆಟ್​ವರ್ಕ್​ ಸಮಸ್ಯೆ ಇಂದಿಗೂ ಹೋಗಿಲ್ಲ ಎಂಬುದು ಗೊತ್ತಾಗಿದೆ.

ಸ್ಮಾರ್ಟ್​ಫೋನ್​ ಬಳಕೆದಾರರಿಗೆ ನೆಟ್​ವರ್ಕ್​ ಬೇಕೆ ಬೇಕು. ಸಿಗ್ನಲ್​ ಇಲ್ಲದಿದ್ದರೆ ಕರೆ ಸ್ವೀಕರಿಸಲು, ಸಂದೇಶ ರವಾನಿಸಲು ಸಾಧ್ಯವಾಗುವುದಿಲ್ಲ. ಆದರೆ ಅನೇಕ ಕಂಪನಿಗಳು ಈ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿವೆ, ಇಲ್ಲಿಯವರೆಗೆ ವಿಶೇಷವಾಗಿ ಏನೂ ಮಾಡಲಾಗಿಲ್ಲ. ಆದರೀಗ ನೆಟ್​ವರ್ಕ್​ ಸಮಸ್ಯೆಯನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ವಿಶೇಷ ಸ್ಟಿಕ್ಕರ್ ಅನ್ನು ಪರಿಚಯಿಸಲಾಗಿದೆ. ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಟಿಕ್ಕರ್​ ಫೋನ್‌ನ ನೆಟ್‌ವರ್ಕ್ ಅನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಈ ಸ್ಟಿಕ್ಕರ್ ಬಗ್ಗೆ ತಿಳಿಯೋಣ.

ನೆಟ್‌ವರ್ಕ್ ಬೂಸ್ಟರ್ ಸ್ಟಿಕ್ಕರ್‌ಗಳು

ಈ ಉತ್ಪನ್ನದ ಹೆಸರು ನೆಟ್‌ವರ್ಕ್ ಬೂಸ್ಟರ್ ಸ್ಟಿಕ್ಕರ್. ಇದನ್ನು ಸ್ಮಾರ್ಟ್‌ಫೋನ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಇದು ಸಾಮಾನ್ಯ ಸ್ಟಿಕ್ಕರ್​ನಂತೆ ಕಾಣುತ್ತದೆ. ಇದನ್ನು ವಿಶೇಷ ಚಿಪ್​ನಿಂದ ತಯಾರಿಸಲಾಗಿದೆ, ಇದು ಸ್ಮಾರ್ಟ್​ಫೋನ್​ಗೆ ಸಂಕೇತಗಳನ್ನು ನೀಡುತ್ತದೆ. ಗ್ರಾಹಕರು ಈ ಸ್ಟಿಕ್ಕರ್ ಅನ್ನು ಫೋನ್‌ನ ಹಿಂಭಾಗದಲ್ಲಿ ಅಂಟಿಸಿ. ಇದರ ನಂತರ, ಕರೆ ಅಥವಾ ಸಂದೇಶವನ್ನು ಮಾಡಲು ಪ್ರಯತ್ನಿಸಿದಾಗ ಸ್ಟಿಕ್ಕರ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

ನೆಟ್‌ವರ್ಕ್ ಬೂಸ್ಟರ್ ಸ್ಟಿಕ್ಕರ್ ಅನ್ನು ಆನ್‌ಲೈನ್‌ನಲ್ಲಿ ಹೆಚ್ಚು ಚರ್ಚಿಸಲಾಗಿದೆ

ಇದು ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ, ಆದರೆ ಅದರ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ಚರ್ಚೆಗಳಿವೆ. ಈ ಸ್ಟಿಕ್ಕರ್ ಅನ್ನು ಹಲವು ವೆಬ್‌ಸೈಟ್‌ಗಳಲ್ಲಿ ಪಟ್ಟಿ ಮಾಡಿವೆ. ನೀವು ಅದನ್ನು ಖರೀದಿಸಿದರೆ ಅದರ ಮೂಲಕ ನೆಟ್​ವರ್ಕ್​ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ, ಮಾತ್ರವಲ್ಲದೆ, ಈ ಸ್ಟಿಕ್ಕರ್ ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತಾಗಿದೆ.

ಬೆಲೆ ಎಷ್ಟು

ಬೆಲೆಯ ಬಗ್ಗೆ ಹೇಳುವುದಾದರೆ, ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ, ಆನ್​ಲೈನ್​ ಮಾರುಕಟ್ಟೆಯ ಮೂಲಕ ಅದನ್ನು ಸುಲಭವಾಗಿ ಖರೀದಿಸಬಹುದು ಮತ್ತು ಪರೀಕ್ಷಿಸಬಹುದು.

ಸದ್ಯ ಮಾರುಕಟ್ಟೆಯಲ್ಲಿ ಈ ವಿಶೇಷ ಸ್ಟಿಕ್ಕರ್​ ಬಗ್ಗೆ ಸುದ್ದಿಯಾಗಿದೆ. ಆದರೆ ಇದು ನಿಜವೇ? ಅಥವಾ ಇದರಿಂದ ಪೂರ್ತನಿ ನೆಟ್​ವರ್ಕ್​ ಸಿಗಲಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ ಹಳ್ಳಿಗಾಡಿನ ಪ್ರದೇಶದಲ್ಲಿ ಇಂದಿಗೂ ನೆಟ್​ವರ್ಕ್​ ಅಥವಾ ಸಿಗ್ನಲ್​ ಸಮಸ್ಯೆಯಿಂದ ಬಳಲುವ ಅನೇಕರಿದ್ದಾರೆ. ಅವರಿಗೆ ಇದು ಬಹಳ ಉಪಯುಕ್ತವಾಗಲಿದೆ. ಜೊತೆಗೆ ನೆಟ್​ವರ್ಕ್​ ಸಮಸ್ಯೆಯನ್ನು ಹೋಗಲಾಡಿಸಿದಂತಾಗುತ್ತದೆ.

ಸದ್ಯ ಭಾರತ 5ಜಿ ಕಡೆಗೆ ಮುಖ ಮಾಡಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ ಮೊದಲಿಗೆ 5ಜಿ ಸೇವೆ ಸಿಗಲಿದೆ. ಈಗೀರುವ 4ಜಿ ಸೇವೆಯಿಂತ ಕೊಂಚ ಜಸತಿ ವೇಗದಲ್ಲಿ ಸೇವೆ ಸಿಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RECIPE:ಮಟನ್ ಖೈಮ;

Mon Jan 24 , 2022
ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಮಟನ್ ಖೀಮಾ ಮಾಡಿ ಸೇವನೆ ಮಾಡಬಹುದು. ನೀವು ಮಾಡುವ ಮಟನ್ ಖೀಮಾ ಚಳಿಗಾಲಕ್ಕೆ ಹಾಗೂ ನಿಮ್ಮ ಭಾನುವಾರದ ಬಾಡೂಟಕ್ಕೆ ಬೆಸ್ಟ್ ರೆಸಿಪಿ ಆಗಿರಲಿದೆ. ಬೇಕಾಗುವ ಸಾಮಗ್ರಿಗಳು * ಮಟನ್ ಖೀಮಾ- ಅರ್ಧ ಕೆಜಿ * ಲಿವರ್- ಕಾಲು ಕೆಜಿ * ಈರುಳ್ಳಿ- 3 * ಬೆಳ್ಳುಳ್ಳಿ-1 * ಶುಂಠಿ – ಸ್ವಲ್ಪ * ಹಸಿಮೆಣಸಿನ ಕಾಯಿ-1 * ಜೀರಿಗೆ- 1 ಚಮಚ […]

Advertisement

Wordpress Social Share Plugin powered by Ultimatelysocial