ಕೈ ಹಿಡಿದ ಕುಕ್ಕುಟೋದ್ಯಮ: ಕೋಳಿ ಸಾಕಣೆಯಿಂದ ಕೈ ತುಂಬಾ ಆದಾಯಗಳಿಸುತ್ತಿರುವ ಹಾವೇರಿ ವ್ಯಕ್ತಿ

ಹಾವೇರಿ, ಹಾನಗಲ್ ಮತ್ತು ಶಿರಸಿಗೆ ಹೊಂಕಣದಿಂದ ನಿತ್ಯ ಅರ್ಗಾನಿಕ್ ಮೊಟ್ಟೆ ಪೂರೈಸಲಾಗುತ್ತಿದೆ. ನೂರು ಕೋಳಿಗಳಿಂದ ಸುರೇಶ್​ ಪ್ರತಿ ತಿಂಗಳು 10 ಸಾವಿರ ರೂ. ಆದಾಯಗಳಿಸುತ್ತಿದ್ದಾರೆ. ಕೋಳಿಗಳ ಸಂಖ್ಯೆ 500 ಮಾಡಿದರೇ ತಿಂಗಳಿಗೆ 50 ಸಾವಿರ ರೂ. ಆದಾಯಗಳಿಸಬಹುದು ಎನ್ನುತ್ತಾರೆ ಸುರೇಶ್​​.

ಹಾವೇರಿ: ಇವರ ಹೆಸರು ಸುರೇಶ್‌. ಹಾವೇರಿ ಜಿಲ್ಲೆಯ ಹಾನಗಲ್‌ನ ಹೊಂಕಣ ನಿವಾಸಿ. ಸ್ವಂತ ಜಮೀನು ಇರದ ಸುರೇಶ್, ಜೀವನೋಪಾಯಕ್ಕೆ ಕಟಮಾ (ಟಂಟಂ) ವಾಹನದಲ್ಲಿ ಶ್ರೀರಾಮ ಟ್ರಾನ್ಸ್​​​ಪೋರ್ಟ್​ ಆರಂಭಿಸಿದರು. ಅದರಲ್ಲಿ ಹಾನಿಯಾದ ನಂತರ ಟಾಟಾ ಏಸ್ ವಾಹನ ಖರೀದಿಸಿದರು. ಅದೂ ಕೂಡ ಕೈ ಹಿಡಿಯಲಿಲ್ಲ. ಇದರಿಂದ ಬೇಸತ್ತ ಸುರೇಶ್ ಮುಖ ಮಾಡಿದ್ದು ಕೋಳಿ ಸಾಕಣೆಯತ್ತ.ಕೈ ಹಿಡಿದ ಕುಕ್ಕುಟೋದ್ಯಮ: ಕೈ ತುಂಬಾ ಆದಾಯಗಳಿಸುತ್ತಿರುವ ಹಾವೇರಿಯ ವ್ಯಕ್ತಿಹೌದು. ಎಲ್ಲರಂತೆ ಸುರೇಶ್ ಫಾರ್ಮ ಅಥವಾ ಬಾಯ್ಲರ್ ಕೋಳಿ ಸಾಕಾಣಿಕೆ ಕಡೆ ವಾಲಲಿಲ್ಲ. ಬದಲಿಗೆ ಕೇರಳದಲ್ಲಿ ಕಂಡು ಹಿಡಿದಿದ್ದ ‘ಅರ್ಗಾನಿಕ್ ಬಿವಿ 380 ಕೋಳಿ ಸಾಕಾಣಿಕೆ’ಯತ್ತ ಮುಖಮಾಡಿದರು. ಈ ಕೋಳಿ ನಾಟಿ ಕೋಳಿಯಂತೆ ಮೊಟ್ಟೆ ಇಡುತ್ತದೆ. ಇದರ ಮಾಂಸ ನಾಟಿ ಕೋಳಿ ರೀತಿ ಇರುವ ಕಾರಣ ಈ ತಳಿಯ ಕೋಳಿ ಸಾಕಣೆಗೆ ಸುರೇಶ್ ಮುಂದಾದರು.ಈ ಕೋಳಿ ಮೊಟ್ಟೆಗಳು ತಿಂಗಳುಗಟ್ಟಲೇ ಹಾಳಾಗುವುದಿಲ್ಲ ಮತ್ತು ಸಾಮಾನ್ಯ ಕೋಳಿಗಳ ಮೊಟ್ಟೆಗಳಿಗಿಂತ ದೊಡ್ಡದಾಗಿರುತ್ತವೆ. ಈ ಕೋಳಿ ಒಮ್ಮೆ ಮೊಟ್ಟೆ ಇಡಲು ಆರಂಭಿಸಿದರೆ 380 ದಿನಗಳ ಕಾಲ ಮೊಟ್ಟೆ ಇಡುತ್ತದೆ. ಮೊಟ್ಟೆ ಹಾಕುವ ಅವಧಿ ಮುಗಿದ ನಂತರ ಈ ಕೋಳಿಗಳನ್ನ ನಾಟಿಕೋಳಿಗಳಂತೆ ತಿನ್ನಲು ನೀಡಬಹುದಾಗಿದೆ. 100 ಕೋಳಿಗಳ ಸಾಕಣೆಯನ್ನ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದರೆ ನಿತ್ಯ 90 ಮೊಟ್ಟೆ ಪಡೆಯಬಹುದು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೇವಲ 100 ಕೋಳಿಗಳನ್ನು ಸಾಕಲು ಲಕ್ಷ ರೂ. ಬಂಡವಾಳ ಹೂಡಿದ್ದ ಸುರೇಶ್​​ ಅವರಿಗೆ ಆರಂಭದಲ್ಲಿ ಹಲವು ಸಮಸ್ಯೆಗಳು ಎದುರಾದವು. ಉತ್ಪಾದನೆ ಅಧಿಕವಿದ್ದರೂ ಬೇಡಿಕೆಯಿರಲಿಲ್ಲ. ಸುರೇಶ್​​ ಈ ಕುರಿತಂತೆ ಕರಪತ್ರ ಮಾಡಿ ಜನರಿಗೆ ಅರಿವು ಮೂಡಿಸಿದರು. ಇದಾದ ನಂತರ ಸುರೇಶ್‌ ಅವರ ಲಕ್‌ ಬದಲಾಗಿದೆ. ಮೊಟ್ಟೆಗಳಿಗೆ ಭಾರಿ ಬೇಡಿಕೆ ಬರಲಾರಂಭಿಸಿದೆ. ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಸಲು ಅವರಿಗೆ ಸಾಧ್ಯವಾಗುತ್ತಿಲ್ಲವಂತೆ.ಹಾವೇರಿ, ಹಾನಗಲ್ ಮತ್ತು ಶಿರ್ಶಿಗೆ ಹೊಂಕಣದಿಂದ ನಿತ್ಯ ಅರ್ಗಾನಿಕ್ ಮೊಟ್ಟೆ ಪೂರೈಸಲಾಗುತ್ತಿದೆ. ನೂರು ಕೋಳಿಗಳಿಂದ ಸುರೇಶ್​​ ಪ್ರತಿ ತಿಂಗಳು 10 ಸಾವಿರ ರೂ.ಆದಾಯ ಗಳಿಸುತ್ತಿದ್ದಾರೆ. ಕೋಳಿಗಳ ಸಂಖ್ಯೆ 500 ಮಾಡಿದರೆ, ತಿಂಗಳಿಗೆ 50 ಸಾವಿರ ರೂಪಾಯಿ ಆದಾಯಗಳಿಸಬಹುದು ಎನ್ನುತ್ತಾರೆ ಸುರೇಶ್​​.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೀನೋಮಿಕ್ ಇನ್ಸ್ಟಿಟ್ಯೂಟ್: ಓಪನ್ ಸ್ಕೂಲ್ ಆಲ್ ಇಂಡಿಯಾ ವೇವ್ ಡಿಪ್ ಫೆಬ್ರವರಿ ಆರಂಭದಲ್ಲಿ ಹೇಳಲಿದೆ;

Sat Jan 29 , 2022
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಲೈವ್ ಈವೆಂಟ್‌ನಲ್ಲಿ ಮಾತನಾಡುತ್ತಾ, ದೆಹಲಿ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿಯ ನಿರ್ದೇಶಕ ಡಾ ಅನುರಾಗ್ ಅಗರವಾಲ್, ಕನಿಷ್ಠ ಕೋವಿಡ್ ಕರ್ವ್ ಹೋಗಲು ಪ್ರಾರಂಭಿಸಿದ ಪ್ರದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲು ಬಲವಾದ ವಾದವನ್ನು ಮಾಡಿದರು. ಕನಿಷ್ಠ ಕೋವಿಡ್ ಕರ್ವ್ ಕಡಿಮೆಯಾಗಲು ಪ್ರಾರಂಭಿಸಿದ ಪ್ರದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲು ಬಲವಾದ ವಾದವನ್ನು ಮಂಡಿಸುತ್ತಾ, ಸಾಂಕ್ರಾಮಿಕ ರೋಗವು ಈಗ ಪ್ರವೇಶಿಸುತ್ತಿದೆ ಎಂದು ದೆಹಲಿ ಮೂಲದ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ […]

Related posts

Advertisement

Wordpress Social Share Plugin powered by Ultimatelysocial