ಕೊರೊನಾ ಪರಿಸ್ಥಿತಿ ನಿಯಂತ್ರಣ ಕೈ ತಪ್ಪಿದೆ..!

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೋನಾ ಹಾವಳಿ ನಿಯಂತ್ರಣ ತಪ್ಪುತ್ತಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನಾವು ೧೦,೦೦೦ ಹಾಸಿಗೆಗಳಿಗೆ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ತಂಡವು ಇಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ತೆಗೆದುಕೊಂಡ ಕೆಲವು ನಿರ್ಧಾರಗಳಿಗೆ ಮೆಚ್ಚುಗೆಯನ್ನು ಸೂಚಿಸಿದೆ. ಅಲ್ಲದೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆಗಳನ್ನು ಸಹ ನೀಡಿದೆ. “ಕೊರೋನಾವೈರಸ್ ರೋಗಿಗಳಿಗೆ ತೊಂದರೆಯಾಗದAತೆ ಅವರನ್ನು ಕರೆದೊಯ್ಯಲು ಹೆಚ್ಚುವರಿ ಆಂಬ್ಯುಲೆನ್ಸ್ಗಳು ಬೇಕಾಗುತ್ತವೆ. ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ. ಜಿಲ್ಲಾಧಿಕಾರಿಗಳು ಹಗಲು ರಾತ್ರಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಶ್ರೀ ಪಿ.ಎಂ.ರಘುನಾಥ್‌ರನ್ನು ವಿಧಾನಪರಿಷತ್‌ಗೆ ನೇಮಕ ಮಾಡುವ ಬಗ್ಗೆ ಒತ್ತಾಯ

Thu Jul 9 , 2020
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಶ್ರೀ ಪಿ.ಎಂ.ರಘುನಾಥ್ ರವರನ್ನು ಕರ್ನಾಟಕ ವಿಧಾನಪರಿಷತ್ ಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂದು ಅಖಿಲ ಕರ್ನಾಟಕ ಗಾಣಿಗ ಮಹಾಸಭಾ(ರಿ) ಮತ್ತು ಅಖಿಲ ಕರ್ನಾಟಕ ಗಾಣಿಗರ ಒಕ್ಕೂಟ (ರಿ) ಒತ್ತಾಯಿಸುತ್ತದೆ. ಆರ್.ಎಸ್.ಎಸ್. ಸಂಘ ಪರಿವಾರದಲ್ಲಿ ಸಕ್ರಿಯರಾಗಿರುವ ಶ್ರೀ ಪಿ.ಎಂ.ರಘುನಾಥ್ ರವರು ಕೋಲಾರ ಜಿಲ್ಲೆಯಲ್ಲಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಶುದ್ಧ ಹಸ್ತರು, ಶಿಸ್ತಿನ ಸಿಪಾಯಿ […]

Advertisement

Wordpress Social Share Plugin powered by Ultimatelysocial