ಪ್ರವೀಣ ಜೈನ್ ಎಲ್ಲಿಯವರು?

ನರನ್ನು ಹಾಸ್ಯದ ಮೂಲಕ ರಂಜಿಸುವ ಕೆಲಸ ಕೇವಲ ಕಲಾವಿದನಿಗೆ ಮಾತ್ರ ಸಾಧ್ಯ. ಹಾಸ್ಯದ ಹೊನಲಿನಲ್ಲಿ ರಂಜಿಸಲು ಹಲವಾರು ಜನ ಪ್ರಯತ್ನ ಪಡುತ್ತಾರೆ. ಆದರೆ ಅದು ಎಲ್ಲರಿಂದ ಸಾಧ್ಯ ಆಗುವುದಿಲ್ಲ, ಕೆಲವರಿಂದ ಮಾತ್ರ ಸಾಧ್ಯ. ಅಂತವರಲ್ಲಿ ಪ್ರವೀಣ್ ಜೈನ್ ಕೂಡ ಒಬ್ಬರು.ಜೀವನದಲ್ಲಿ ಅನೇಕ ಅಡೆತಡೆ ಎದುರಾದರೂ ಅದೆಲ್ಲವನ್ನು ಮೆಟ್ಟಿ ನಿಂತು ಜೀವನದಲ್ಲಿ ಹೇಗಾದರೂ ಮುಂದೆ ಬರಬೇಕು ಎಂಬುವುದು ಇವರ ಆಸೆ.ಪ್ರವೀಣ್ ಜೈನ್ ಮೂಲತಃ ಚಂದ್ರ ನಿಲಯ ಜನತಾ ಕಾಲನಿ ಪಡ್ಡಂದಡ್ಕ ಮೂಡಬಿದಿರೆಯ ನಿವಾಸಿಯಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು ತಮ್ಮ ಪದವಿಯನ್ನು ದವಳ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಕಾಲೇಜಿನಲ್ಲಿ ಎನ್ ಎಸ್ ಎಸ್ ಯಲ್ಲಿ ಇವರು ಸೇವೆ ಸಲ್ಲಿಸುತ್ತಾ ಇರುವ ವೇಳೆ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕಗಳನ್ನು ಮಾಡುತ್ತಾ ಜನರನ್ನು ರಂಜಿಸುತ್ತ ಇದ್ದರು. ಇವರ ತಂದೆ ಧರ್ಣೇಂದ್ರ, ತಾಯಿ ಪ್ರಮೀಳಾ, ಅಣ್ಣ ಪ್ರಣೀತ್. ಪ್ರವೀಣ್ ತಾಯಿಯ ಗರ್ಭದಲ್ಲಿ ಇರಬೇಕಾದರೆ ಪ್ರವೀಣ್ ತಂದೆ ತಾಯಿಗೆ ಬಹಳ ಹಿಂಸೆ ನೀಡುತ್ತಿದ್ದರು, ಇದರಿಂದ ನೊಂದ ಪ್ರಮೀಳಾ ತಂದೆ ಇವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಸಾಕಿದ್ದರು.ಹುಟ್ಟುತ್ತಲೇ ತಂದೆಯಿಂದ ದೂರ ಇರುವ ಪ್ರವೀಣ್ ತನ್ನ ತಾಯಿಗೆ ಬಹಳ ಭಯ ಪಡುತ್ತಾರೆ. ತಂದೆ ಇದ್ದಿದ್ದರೂ ತಾಯಿಯ ಹಾಗೆ ಸಾಕಲು ಯಾರಿಂದಲೂ ಆಗದು ಎಂದು ಹೇಳುತ್ತಾರೆ ಪ್ರವೀಣ್. ಇನ್ನು ತಾಯಿ ಪ್ರಮೀಳಾ ಪ್ರವೀಣ್ ನನ್ನು ಉನ್ನತ ವಿದ್ಯಾಭ್ಯಾಸ ಮಾಡಿಸುವ ವೇಳೆ ಕಿವಿ ಒಲೆಯನ್ನು ಅಡವಿಟ್ಟು ಓದಿಸಿದ್ದರು.ಮಕ್ಕಳ ಭವಿಷ್ಯಕ್ಕೆ ಹಗಲಿರುಳು ದುಡಿದ ತಾಯಿಆ ದಿನದಿಂದ ಪ್ರವೀಣ ಮನದಲ್ಲಿ ಗಾಢವಾಗಿ ಒಂದು ವಿಚಾರ ಸ್ಪಷ್ಟ ಆಗಿತ್ತು.. ನನಗಾಗಿ ಇಷ್ಟು ಕಷ್ಟ ಪಡುತ್ತಿರುವ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುವುದು ಪ್ರವೀಣ್ ಮಹದಾಸೆ ಕೂಡ. ರಂಗ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು ಏನಾದರೂ ಮಾಡಿ ಸಾಧನೆ ಮಾಡಬೇಕು ಎಂದುಕೊಂಡು ಛಲ ಬಿಡದೆ ಕೆಲಸ ಮಾಡುತ್ತಾರೆ. ಅದೇ ರೀತಿ ಪ್ರವೀಣ್ ಗೆ ಒಂದು ಅವಕಾಶ ಸಿಗುತ್ತದೆ. ತುಳು ಭಾಷೆಯ ಪೆಟ್ ಕಮ್ಮಿ ಎನ್ನುವ ಚಿತ್ರಕ್ಕೆ ಪ್ರವೀಣ್ ಆಯ್ಕೆ ಆಗುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ಪ್ರವೀಣ್ ಗೆ ಆ ಸಿನಿಮಾದಲ್ಲಿ ನಟನೆ ಮಾಡಲು ಆಗುವುದಿಲ್ಲ.ಕಾಮಿಡಿ ಕಿಲಾಡಿ ಮೂಲಕ ಜನರನ್ನು ರಂಜಿಸಿದ ಪ್ರವೀಣಆ ಬಳಿಕ ಕಾಮಿಡಿ ಕಿಲಾಡಿಗಳು ಸೀಸನ್ ಎರಡರಕ್ಕೆ ಆಡಿಷನ್ ನೀಡುತ್ತಾರೆ. ಆದರೆ ಅದರಲ್ಲಿ ಸೆಲೆಕ್ಟ್ ಆಗದ ಕಾರಣ ಶಿಕ್ಷಣವನ್ನು ಪೂರೈಸಿಕೊಂಡು ಒಳ್ಳೆಯ ಉದ್ಯೋಗವನ್ನು ಮಾಡುತ್ತಾ ಇರುವ ವೇಳೆ ಪುನಃ ಕಾಮಿಡಿ ಕಿಲಾಡಿಗಳೂ ಸೀಸನ್ ತ್ರೀಗೆ ಆಡಿಷನ್ ಕೊಟ್ಟು ಸೆಲೆಕ್ಟ್ ಕೂಡ ಆಗುತ್ತಾರೆ. ಆ ಮೂಲಕ ಅವರು ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ನಲ್ಲಿ ಕೂಡ ಭಾಗಿ ಆಗುತ್ತಾರೆ. ಇನ್ನು ಪ್ರವೀಣ್ ಅವರಿಗೆ ನಟನೆ ಮಾಡಲು ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿದೆ. ಇದೀಗ ಪುಟ್ಟಕ್ಕನ ಮಕ್ಕಳು ಹಾಗೂ ಮನಸೆಲ್ಲ ನೀನೇ ಧಾರಾವಾಹಿಯಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿದೆ. ಜೊತೆಗೆ ಹಲವಾರು ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಪ್ರವೀಣ್ ಪಾಲಾಗಿದೆ.ಸಿನಿಮಾಗಳಲ್ಲಿ ಉತ್ತಮ ಪಾತ್ರ ಮಾಡುತ್ತಿರುವ ಪ್ರವೀಣ್ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬುವುದು ಪಾತ್ರಧಾರಿಯ ಕೆಲಸ ಕೂಡ. ಆ ಕೆಲಸವನ್ನು ಪ್ರವೀಣ್ ಮಾಡುತ್ತಾ ಬಂದಿದ್ದಾರೆ. ಪ್ರವೀಣ್ ತಾನು ಬೆಳೆಯುವುದರ ಜೊತೆಗೆ ತನ್ನ ಊರಿನ ಜನರಿಗೂ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಆಗಿಕಂ ಎಂಬ ಕಲಾ ತರಬೇತಿ ಕೇಂದ್ರದಿಂದ ಅದ್ಭುತ ಪ್ರತಿಭೆಗಳನ್ನು ತಯಾರು ಮಾಡುತ್ತಿದ್ದಾರೆ. ಧಾರವಾಹಿ, ಸಿನಿಮಾ ಕ್ಷೇತ್ರದಲ್ಲಿ ಹಾಸ್ಯ ನಟನಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಸ್ಯದ ಹೊನಲಿನಲ್ಲಿ ಜನರನ್ನು ತೇಲಾಡಿಸುತ್ತ ಇರುವ ಪ್ರವೀಣ ಜೈನ್ ಇನ್ನಷ್ಟು ಕಾಲ ರಂಗ ಕ್ಷೇತ್ರದಲ್ಲಿ ಬೆಳೆಯಲಿ ಎಂಬುವುದು ನಮ್ಮ ಆಶಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskanna

Please follow and like us:

Leave a Reply

Your email address will not be published. Required fields are marked *

Next Post

ಕತ್ತು ಕೊಯ್ದು ಬಡಗಿ ಭೀಕರ ಕೊಲೆ.

Thu Feb 23 , 2023
    ಬಡಗಿ (ಕಾರ್ಪೆಂಟರ್)ಯ ಕತ್ತು ಕೊಯ್ದು ಭೀಕರವಾಗಿ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿರುವ ದುರ್ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ದೊಡ್ಡಬಸ್ತಿ ಮುಖ್ಯರಸ್ತೆಯ ಸರ್ ಎಂವಿ ಲೇಔಟ್ ನ ನಿರ್ಜನ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಂಗನಹಳ್ಳಿಯ ವೀರಭದ್ರೇಶ್ವರ ಲೇಔಟ್‌ನ ಕಾರ್ಪೆಂಟರ್ ಜೊತೆಗೆ ಮನೆ ನಿವೇಶನ ತೋರಿಸುವ ಬ್ರೋಕರ್ ಆಗಿದ್ದ ದಿನೇಶ್ ಕುಮಾರ್(೪೬) ಕೊಲೆಯಾದವರು ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ದೊಡ್ಡಬಸ್ತಿ ಮುಖ್ಯರಸ್ತೆಯ ಸರ್ ಎಂವಿ ಲೇಔಟ್‌ನ ಫೆಡರಲ್ ಬ್ಯಾಂಕ್ […]

Advertisement

Wordpress Social Share Plugin powered by Ultimatelysocial