ಮೈಸೂರಿನ ಟಿ.ನರಸೀಪುರದಲ್ಲಿ ಮುಂದುವರೆದ ಚಿರತೆ ದಾಳಿ!

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿಯಲ್ಲಿ ಮತ್ತೆ ಚಿರತೆ ದಾಳಿ ಮುಂದುವರೆದಿದೆ. ನರಭಕ್ಷಕ ಚಿರತೆಯೊಂದು ಕಬ್ಬಿನ ಗದ್ದೆ ಕೆಲಸದಲ್ಲಿ ತೊಡಗಿದ್ದಂತ ರೈತನ ಮೇಲೆ ದಾಳಿ ನಡೆಸಿರೋದಾಗಿ ಇಂದು ತಿಳಿದು ಬಂದಿದೆ.ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಈಗಾಗಲೇ ಹಲವು ಬಾರಿ ಜನರ ಮೇಲೆ ಚಿರತೆ ದಾಳಿ ನಡೆಸಿತ್ತು. ಇಂದು ಕೂಡ ಚಿರತೆ ದಾಳಿ ಮುಂದುವರೆದಿದೆ. ಗೊರವನಹಳ್ಳಿಯಲ್ಲಿ ಕಬ್ಬಿನ ಗದ್ದೆಯ ತರಗಿಗೆ ಬೆಂಕಿಯಿಡುವ ಕೆಲಸದಲ್ಲಿ ರೈತ ನಿಂಗೇಗೌಡ ತೊಡಗಿದ್ದರು. ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ.ಚಿರತೆ ದಾಳಿಯ ವೇಳೆಯಲ್ಲಿ ಕೈಯಲ್ಲಿದ್ದಂತ ಕುಡುಗೋಲಿನಿಂದ ರೈತ ಪ್ರತಿದಾಳಿ ನಡೆಸಿದ್ದಾನೆ. ಈ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿರತೆ ದಾಳಿಯಿಂದ ಗಾಯಗೊಂಡಿರುವಂತ ರೈತ ನಿಂಗೇಗೌಡನನ್ನು ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದಂತ ಆರಣ್ಯ ಇಲಾಖೆ ಸಿಬ್ಬಂದಿಗಳ ಪರಿಶೀಲನೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಭಾರತದ ಜಿಲ್ಲೆಗಳ ಪೈಕಿ ಬೆಂಗಳೂರು ಜಿಲ್ಲೆಯಲ್ಲಿಅತಿ ಹೆಚ್ಚು ಮಂದಿಯ ಬಳಿ ಪಾಸ್‌ಪೋರ್ಟ್‌ ಇದೆ.

Wed Dec 21 , 2022
ಬೆಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ರಾಜಧಾನಿಯ ಪ್ರತಿ ಮೂರು ಮಂದಿಯಲ್ಲಿ ಒಬ್ಬರು (ಬೆಂಗಳೂರಿನ ಯೋಜಿತ ಜನಸಂಖ್ಯೆಯು ಸುಮಾರು 1.31 ಕೋಟಿ ಎಂದು ಊಹಿಸಿದರೆ) ಪಾಸ್‌ಪೋರ್ಟ್‌ ಹೊಂದಿದ್ದಾರೆ.ದೇಶದ ಐಟಿ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರು ಅತಿ ಹೆಚ್ಚು ಪಾಸ್‌ಪೋರ್ಟ್‌ವುಳ್ಳ ವ್ಯಕ್ತಿಗಳನ್ನು ಒಳಗೊಂಡಿರುವ ದೇಶದ ನಗರಗಳ ಪೈಕಿ 3ನೇ ಸ್ಥಾನದಲ್ಲಿದೆ. ಕೇಂದ್ರವು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ 34,63,405 ಮಂದಿ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಹೊಸದಿಲ್ಲಿಯ […]

Advertisement

Wordpress Social Share Plugin powered by Ultimatelysocial