ದಕ್ಷಿಣ ಭಾರತದ ಜಿಲ್ಲೆಗಳ ಪೈಕಿ ಬೆಂಗಳೂರು ಜಿಲ್ಲೆಯಲ್ಲಿಅತಿ ಹೆಚ್ಚು ಮಂದಿಯ ಬಳಿ ಪಾಸ್‌ಪೋರ್ಟ್‌ ಇದೆ.

ಬೆಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ರಾಜಧಾನಿಯ ಪ್ರತಿ ಮೂರು ಮಂದಿಯಲ್ಲಿ ಒಬ್ಬರು (ಬೆಂಗಳೂರಿನ ಯೋಜಿತ ಜನಸಂಖ್ಯೆಯು ಸುಮಾರು 1.31 ಕೋಟಿ ಎಂದು ಊಹಿಸಿದರೆ) ಪಾಸ್‌ಪೋರ್ಟ್‌ ಹೊಂದಿದ್ದಾರೆ.ದೇಶದ ಐಟಿ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರು ಅತಿ ಹೆಚ್ಚು ಪಾಸ್‌ಪೋರ್ಟ್‌ವುಳ್ಳ ವ್ಯಕ್ತಿಗಳನ್ನು ಒಳಗೊಂಡಿರುವ ದೇಶದ ನಗರಗಳ ಪೈಕಿ 3ನೇ ಸ್ಥಾನದಲ್ಲಿದೆ. ಕೇಂದ್ರವು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ 34,63,405 ಮಂದಿ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಹೊಸದಿಲ್ಲಿಯ 39,06,063 ಮಂದಿಗೆ ಮತ್ತು ಮುಂಬೈನ 35,56,067 ಮಂದಿಯ ಬಳಿ ಪಾಸ್‌ಪೋರ್ಟ್‌ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

2 ಲಕ್ಷ ರೂ ಸುಲಿಗೆ ಕಾನ್ಸ್‌ಟೆಬಲ್‌ ಬಂಧನ!

Wed Dec 21 , 2022
ಚಿನ್ನಾಭರಣ ವ್ಯಾಪಾರಿಯ ಕೆಲಸಗಾರನಿಂದ ಎರಡು ಲಕ್ಷ ರೂ. ಸುಲಿಗೆ ಮಾಡಿದ್ದ ಕಾನ್ಸ್‌ಟೆಬಲ್‌ವೊಬ್ಬರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜನಗರ ಠಾಣೆಯ ಕಾನ್ಸ್‌ಟೆಬಲ್‌ ಆನಂದ್‌ ಕುಮಾರ್‌ ಬಂಧಿತ.ಸುಣಕಲ್‌ ಪೇಟೆಯ ಚಿಕ್ಕ ಅಣ್ಣಮ್ಮ ಗಲ್ಲಿಯಲ್ಲಿ ರಾಜುರಾಮ್‌ ಎಂಬಾತ ಡಿ.7 ರಂದು ಸಾಯಂಕಾಲ 10 ಲಕ್ಷ ರೂ. ನಗದನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಆತನನ್ನು ಅಡ್ಡಗಟ್ಟಿದ್ದ ಆನಂದ್‌, ತನ್ನ ಪೊಲೀಸ್‌ ಐಡಿ ಕಾರ್ಡ್‌ ತೋರಿಸಿದ್ದ. ‘ಹವಾಲ ಹಣ ಸಾಗಿಸುತ್ತೀದ್ದೀಯಾ’? ಎಂದು […]

Advertisement

Wordpress Social Share Plugin powered by Ultimatelysocial