ಕೆ. ಮರುಳಸಿದ್ದಪ್ಪ ಅವರು ನಮ್ಮ ಕನ್ನಡ ನಾಡಿನ ಮಹತ್ವದ ವಿದ್ವಾಂಸರು.

ಹಿರಿಯರಾದ ಡಾ. ಕೆ. ಮರುಳಸಿದ್ದಪ್ಪ ಅವರು ನಮ್ಮ ಕನ್ನಡ ನಾಡಿನ ಮಹತ್ವದ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬರಹಗಾರರು.
ಮರುಳಸಿದ್ದಪ್ಪನವರು 1940ರ ಜನವರಿ 12ರಂದು ಜನಿಸಿದರು. ಅವರ ಊರು ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ.
ತಂದೆ ಉಜ್ಜನಪ್ಪ. ತಾಯಿ ಕಾಳಮ್ಮ.
ಮರುಳಸಿದ್ದಪ್ಪನವರು ‘ಆಧುನಿಕ ಕನ್ನಡ ನಾಟಕ ವಿಮರ್ಶೆ’ ಮಹಾಪ್ರಬಂಧ ಮಂಡಿಸಿ ಡಾಕ್ಟೊರೇಟ್ ಗೌರವ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಅನೇಕ ಪ್ರತಿಭೆಗಳನ್ನು ಬೆಳಗಿಸಿದರು.
ಮರುಳಸಿದ್ದಪ್ಪನವರಿಂದ ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ಸಲ್ಲುತ್ತಿದೆ. ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ ಸಹಾ ಅಪಾರ ಕೆಲಸ ಮಾಡಿದ್ದಾರೆ.
ಮರುಳಸಿದ್ದಪ್ಪನವರು ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಷಟ್ಪದಿ ಸಾಹಿತ್ಯ ಮೂಡಿಸಿದ್ದಾರೆ. ಅವರ ಹೆಸರಾಂತ ಸಂಪಾದನೆಗಳಲ್ಲಿ ಕನ್ನಡ ನಾಟಕ: ವಿಮರ್ಶೆ (೧೯೭೮), ಲಾವಣಿಗಳು (೧೯೭೨), ಶತಮಾನದ ನಾಟಕ(೨೦೦೩), ಒಡನಾಟ (೨೦೦೩), ವಚನ ಕಮ್ಮಟ ( ಇತರರೊಂದಿಗೆ), ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦) ಮುಂತಾದವು ಸೇರಿವೆ.
ಮರುಳಸಿದ್ದಪ್ಪನವರ ಅನುವಾದಗಳಲ್ಲಿಮೀಡಿಯಾ (ಯುರಿಪಿಡೀಸನ ನಾಟಕ), ಎಲೆಕ್ಟ್ರ (ಸಾಫೋಕ್ಲಿಸನ ನಾಟಕ), ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ), ಭಾರತೀಯ ಜಾನಪದ ಸಮೀಕ್ಷೆ ದುರ್ಗಾ ಭಾಗವತ್ ಕೃತಿ ಸೇರಿವೆ.
ಉಲ್ಲಾಸ (೨೦೧೩), ಲಂಕೇಶ ಬದುಕು ಬರಹ (೨೦೧೯), ಸಂಗಾತಿ ಮುಂತಾದ ಹಲವಾರು ಕೃತಿಗಳನ್ನೂ ಮೂಡಿಸಿದ್ದಾರೆ.
ನೋಟ ನಿಲುವು (೨೦೦೨) ಅವರ ಪ್ರವಾಸ ಕಥನ.
ಮರುಳಸಿದ್ದಪ್ಪನರು ಪ್ರತಿದಿನ ಫೇಸ್ಬುಕ್ಕಿನಲ್ಲಿ ನೀಡುತ್ತಿರುವ ವಚನ ಸಾಹಿತ್ಯದ ಒಳತಿರುಳನ್ನು ಸವಿಯುವ ಭಾಗ್ಯ ನಮದಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವಾಮಿ ವಿವೇಕಾನಂದರ ದಿವ್ಯ ವಾಣಿ

Fri Jan 13 , 2023
ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು, ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿಯಾದ ಭರತಭೂಮಿಯಲ್ಲಿ ಜನಿಸಿದರು. ನಮ್ಮ ಭರತ ಭೂಮಿಯಲ್ಲಿ ಅಂತದ್ದೇನಿದೆ ಎಂಬುದನ್ನು ಸ್ವಾಮಿ ವಿವೇಕಾನಂದರ ಮಾತುಗಳಲ್ಲೇ ಅರಿಯುವುದು ಶ್ರೇಷ್ಠವಾದುದು. ಅವರು ನುಡಿಯುತ್ತಾರೆ “ಜಗತ್ತಿನಲ್ಲಿ ಯಾವುದಾದರೂ ಒಂದು ದೇಶವು ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ, ಜೀವಿಗಳು ತಮ್ಮ ಬಾಳಿನ ಕೊನೆಯ ಕರ್ಮವನ್ನು ಸವೆಸಲು ಬರಬೇಕಾದ ಸ್ಥಳವೊಂದಿದ್ದರೆ, ಭಗವಂತನೆಡೆಗೆ ಸಂಚರಿಸುತ್ತಿರುವ ಪ್ರತಿಯೊಬ್ಬ ಜೀವಿಯೂ ತನ್ನ ಕೊನೆಯ ಯಾತ್ರೆಯನ್ನು ಪೂರೈಸುವುದಕ್ಕೆ […]

Advertisement

Wordpress Social Share Plugin powered by Ultimatelysocial