ಕೋವಿಡ್‌ ವಿಚಾರದಲ್ಲಿ ನಮ್ಮನ್ನು ದೂಷಿಸುವ ಮೂಲಕ ಅಮೆರಿಕಾ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ.

 

ವಿಶ್ವಕ್ಕೆ ಗೊತ್ತಿರುವಂತೆ ಕೋವಿಡ್ ಮಹಾಮಾರಿ (Corona Virus) ಜಗತ್ತಿನಾದ್ಯಂತ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಕೋಟಿ ಕೋಟಿ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗಿರೋದು ಮಾತ್ರವಲ್ಲದೇ, ಈ ಮಹಾಮಾರಿಗೆ ಲಕ್ಷಾಂತರ ಜನರು ವಿಶ್ವಾದ್ಯಂತ ಪ್ರಾಣ ತೆತ್ತಿದ್ದಾರೆ.ಆ ಸಂದರ್ಭದಲ್ಲೇ ಚೀನಾದ (China) ವುಹಾನ್ ಪ್ರಾಂತ್ಯದಲ್ಲಿ ವೈರಸ್ (Covid 19) ಪ್ರಯೋಗಾಲಯದಿಂದ ಕೋವಿಡ್ ಸ್ಫೋಟಗೊಂಡಿದೆ ಎಂಬ ಸುದ್ದಿ ಬಲವಾಗಿ ಹರಿದಾಡಿದ್ದವು.ಆ ನಂತರ ವಿಶ್ವ ಆರೋಗ್ಯ ಸಂಸ್ಥೆ ಮಧ್ಯ ಪ್ರವೇಶಿಸಿ ಆ ರೀತಿಯ ಪರಿಸ್ಥಿತಿ ಇಲ್ಲವೆಂದಾಗ ಚೀನಾದಿಂದ ಕೋವಿಡ್ ಹರಡಿರುವ ಸುದ್ದಿ ಶಾಂತವಾಗಿ ನೆನೆಗುದಿಗೆ ಬಿದ್ದಿತ್ತು. ಆದರೆ, ಈ ನಡುವೆ ಅಮೆರಿಕ ತಾನು ನಡೆಸಿರುವ ತನಿಖೆಯಿಂದ ವುಹಾನ್ ಪ್ರಾಂತ್ಯದಿಂದಲೇ ಕೋವಿಡ್ ಹೊರಬಂದಿರಬಹುದೆಂಬುದಕ್ಕೆ ಸಾಕ್ಷ್ಯ ಕಂಡುಬರುತ್ತಿವೆ ಎಂದು ಹೇಳಿದ್ದು ಮತ್ತೆ ತಹಬದಿಗೆ ಬಿದ್ದಿದ್ದ ಸುದ್ದಿ ಮುನ್ನೆಲೆಗೆ ಬಂದಿದ್ದಲ್ಲದೆ ಚೀನಾವನ್ನು ಕೆರಳಿಸಿತ್ತು.ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಅಮೆರಿಕದ ಎಫ್‍ಬಿಐ ನಿರ್ದೇಶಕ ಕ್ರಿಸ್ಟೋಫರ್ ರೆ ತನ್ನ ಅಧ್ಯಯನದನುಸಾರ ಕೋವಿಡ್-19 ರ ಮೂಲ ವುಹಾನ್ ಆಗಿರಬಹುದು ಎಂದು ಹೇಳಿದ್ದರು. ಫಾಕ್ಸ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದರು.ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಚೀನಾ, ಇದೊಂದು ಚೀನಾದ ವಿರುದ್ಧ ಮಾಡಲಾಗುತ್ತಿರುವ ಪಿತೂರಿ ಎಂದು ಜರಿದಿದ್ದಲ್ಲದೆ, ಅಮೆರಿಕ ಈಗ ಮತ್ತೆ ಅಸಮಂಜಸವಾದ ವಿಷಯಕ್ಕೆ ಕೈಹಾಕಿ ಕೋವಿಡ್ ಮೂಲ ವುಹಾನ್ ಆಗಿರಬಹುದು ಎಂದು ಹೇಳುವ ಮೂಲಕ ಚೀನಾದ ಸಾರ್ವಭೌಮತ್ವ ಮೇಲೆ ಪ್ರಹಾರ ಮಾಡಿದೆ. ಆದರೆ ಇದರಿಂದ ಅಮೆರಿಕ ಚೀನಾದ ಮೌಲ್ಯವನ್ನು ಕಿತ್ತುಕೊಳ್ಳಲಾಗದು, ಬದಲಾಗಿ ಅವರು ತಮ್ಮದೆ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನಾಯಕರಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ.

Sat Mar 4 , 2023
  ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣ ಸಂಬಂಧ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.ವಿಪಕ್ಷ ನಾಯಕ ಸಿದ್ದರಾಮಯ್ಯ ನೇತ್ರತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಕಾಂಗ್ರೆಸ್ ನಾಯಕರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ […]

Advertisement

Wordpress Social Share Plugin powered by Ultimatelysocial