ವಿಕಲಚೇತನರಿಗೆ ಜೀವನ ಮಟ್ಟ ಸುಧಾರಣೆಯಾಗವ ದೃಷ್ಟಿಯಿಂದ ವಿತರಣೆ

ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುರ್ನವಸತಿ ಕೇಂದ್ರ ಹಾಗೂ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 29 ಫಲಾನುಭವಿಗಳಿಗೆ ಇಂಧನ ಚಾಲಿತ ತ್ರಿ-ಚಕ್ರ ವಾಹನ ಹಾಗೂ 15 ಜನರಿಗೆ ಕೃತಕ ಅಂಗಾಂಗಳ ಜೋಡಣೆಯ ಸಲಕರಣೆಗಳನ್ನು ಬಿ.ಎಲ್.ಡಿ.ಇ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ವಿತರಿಸಿದರು.  ಈ ಸಂದರ್ಭದಲ್ಲಿ ಅವರು ಮಾತನಾಡಿ ವಿಕಲಚೇತನರಿಗೆ ಜೀವನ ಮಟ್ಟ ಸುಧಾರಣೆಯಾಗವ ದೃಷ್ಟಿಯಿಂದ ಶಾಸಕರ ಅನುದಾನದಿಂದ ಮತಕ್ಷೇತ್ರದಲ್ಲಿ ತ್ರಿ-ಚಕ್ರ ವಾಹನ ವಿತರಿಸಲಾಗುತ್ತಿದೆ. ಶಾಸಕರ ಅನುದಾನದಿಂದ ಕಳೆದ 5 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಆಯ್ಕೆಮಾಡಿ, ತ್ರಿ-ಚಕ್ರ ವಾಹನ ನೀಡಲಾಗುತ್ತಿದೆ. ಫಲಾನುಭವಿಗಳು ತಮ್ಮನ್ನು ಹೊರತುಪಡಿಸಿ ಇನ್ನಿತರ ಬೇರೆ ಯಾವುದೇ ಜನರಿಗೆ ಈ ವಾಹನಗಳನ್ನು ಉಪಯೋಗಕ್ಕೆ ನೀಡದೇ ಸ್ವತಃ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಅಲ್ಲದೇ ಬಿ.ಎಲ್.ಡಿ.ಇ ಆಸ್ಪತ್ರೆಯಿಂದ ನಿರಂತರವಾಗಿ ಅಂಗವಿಕಲರಿಗೆ ಕೃತ ಅಂಗಾಂಗಳನ್ನು ವಿತರಣೆ ಮಾಡಲಾಗುತ್ತಿದ್ದು, ಅಗತ್ಯವಿರುವರು ಇದರ ಪ್ರಯೋಜನ ಪಡೆದುಕೊಳ್ಳಲು ಕೋರಿದರು.

Please follow and like us:

Leave a Reply

Your email address will not be published. Required fields are marked *

Next Post

ಕಸಾಯಿಖಾನೆಗೆ ಸಾಗಿಸುತ್ತಿದ್ದ ೬ ಜಾನುವಾರುಗಳು ಪೊಲೀಸರ ವಶಕ್ಕೆ

Tue Jul 28 , 2020
ಬೆಳ್ಳಂಬೆಳಗ್ಗೆ ಚಿಕ್ಕಜಾಲ ವ್ಯಾಪ್ತಿಯ ಸಾದಹಳ್ಳಿ ಗೇಟ್ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 6 ಜಾನುವಾರುಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಬಕ್ರೀದ್ ಸಮೀಪಿಸುತ್ತಿದ್ದಂತೆ ಶುರುವಾದ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಉಸಿರಾಟಕ್ಕೂ ಸ್ಥಳಾವಕಾಶವಿರದಂತೆ ಪಿಕಪ್ ನಲ್ಲಿ ಮುಚ್ಚಿಟ್ಟು ಸಾಗಿಸುತ್ತಿದ್ದು, ವಾಹನ ಚಾಲಕನನ್ನು ಪೊಲೀಸರು ತಡೆಯುತ್ತಿದ್ದಂತೆ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಜಾನುವಾರುಗಳನ್ನು ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. ವಾಹನ ಚಾಲಕ ಹಾಗೂ ಮಾಲೀಕರ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. Please follow […]

Advertisement

Wordpress Social Share Plugin powered by Ultimatelysocial