ಕೊರೊನಾ ಸೋಂಕಿನ ಬಗ್ಗೆ ಶಾಕಿಂಗ್ ಮಾಹಿತಿ ಲಭ್ಯ

ಕೊರೊನಾ ಸೋಂಕಿಗೆ ತುತ್ತಾದವರಲ್ಲಿ ೨೦ ರಿಂದ ೪೦ ವರ್ಷ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಸರ್ಕಾರದ ಅಂಕಿ ಅಂಶಗಳು ಈ ಕುರಿತಾಗಿ ಮಾಹಿತಿ ನೀಡುತ್ತವೆ. ಇದಕ್ಕೆ ಸಂಬAಧಿಸಿದAತೆ ಒಂದು ವರದಿ ಇಲ್ಲಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಈ ವಯಸ್ಸಿನ ಜನರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬAದಿದೆ. ಸದ್ಯದ ಮಾಹಿತಿಯ ಪ್ರಕಾರ ಈ ಸಂಖ್ಯೆ ೧೯,೧೦೦ ರಷ್ಟಿದೆ. ಇನ್ನು ಕೊರೊನಾ ಸೋಂಕು ತುತ್ತಾದವರಲ್ಲಿ ೧೦ ವರ್ಷದ ಒಳಗಿನ ವಯೋಮಿತಿಯವರ ಸಂಖ್ಯೆ ೨,೨೦೦ ರಷ್ಟಿದೆ. ೧೦ ರಿಂದ ೨೦ ವರ್ಷದ ವಯೋಮಿತಿಯವರ ಸಂಖ್ಯೆ ೩,೪೦೦ ರಷ್ಟಿದೆ. ೪೦ ರಿಂದ ೬೦ ವಯೋಮಿತಿಯವರಲ್ಲಿ ೧೨,೭೦೦ ಮಂದಿಗೆ ಸೋಂಕು ತಗುಲಿದೆ ಎಂದು ಅಂಕಿ ಅಂಶಗಳು ತಿಳಿಸುತ್ತದೆ. ಈ ವಯೋಮಿತಿಯ ಜನರು ಹೊರಗಡೆ ಓಡಾಡುತ್ತಿರುವುದರಿಂದ ಸೋಂಕು ತಗಲುವ ಸಾಧ್ಯತೆಯೋ ಹೆಚ್ಚಾಗಿರುತ್ತದೆ. ಜೊತೆಗೆ ೬೦ ವರ್ಷಕ್ಕಿಂತ ಮೇಲ್ಪಟ್ಟ ಸೋಂಕಿತರ ಸಂಖ್ಯೆ ಕರ್ನಾಟದಲ್ಲಿ ಸದ್ಯಕ್ಕೆ ೪,೨೦೦ ರಷ್ಟಿದೆ. ಈ ವಯಸ್ಸಿನ ಸೋಂಕಿತರು ಗಂಭೀರ ಆರೋಗ್ಯ ಸಮಸ್ಯೆ ಇದ್ದಲ್ಲಿ ಅವರಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

Please follow and like us:

Leave a Reply

Your email address will not be published. Required fields are marked *

Next Post

''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲೆಟ್!!

Wed Jul 15 , 2020
ರಾಜಸ್ಥಾನದ ಉಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಬಂಡಾಯ ನಾಯಕ ಸಚಿನ್ ಪೈಲಟ್ ಅವರು ಸುದ್ದಿಗೋಷ್ಠಿ ನಡೆಸಿ, ನಾನು ಬಿಜೆಪಿ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಮುಂದಿನ ನಡೆ ಏನು ಎಂಬುದರ ಸುಳಿವು ನೀಡಿಲ್ಲ. ಬಿಜೆಪಿ ವಿರುದ್ಧ ಪ್ರಚಾರ ನಡೆಸಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ಪೈಲಟ್ ನೆರವಾಗಿದ್ದರು. ಆದರೆ, ಸಿಎಂ ಆಗಿ ಅಶೋಕ್ ಗೆಹ್ಲೋಟ್ ಅವರನ್ನು ನೇಮಿಸದ ನಂತರ ಸಚಿನ್ ಪೈಲೆಟ್ ಅಸಾಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯಪಾಲ ಕಲ್ ರಾಜ್ […]

Advertisement

Wordpress Social Share Plugin powered by Ultimatelysocial