ಕೊರೋನಾ ಕುರಿತ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಕಾರಣ

ನ್ಯೂಯಾರ್ಕ್: ಕೊರೋನಾ ವೈರಸ್ ಕುರಿತಂತೆ ಸಾಧ್ಯವಾದಷ್ಟೂ ಮಟ್ಟಿಗೆ ಹರಡಿರುವ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ. ಆನ್ನೆನ್ಬರ್ಗ್ ವಿಜ್ಞಾನ ಸಮೀಕ್ಷೆಯಲ್ಲಿ ಮಾರ್ಚ್ ತಿಂಗಳಲ್ಲಿ ಕೋವಿಡ್-೧೯ ಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ, ಅಮೆರಿಕದ ೧,೦೦೮ ವಯಸ್ಕರನ್ನು ಪ್ರಶ್ನೆ ಕೇಳಲಾಗಿತ್ತು. ಈ ಪೈಕಿ ಪ್ರತಿಕ್ರಿಯೆ ನೀಡಿರುವವರ ಪೈಕಿ ಹಲವರು ಕೋವಿಡ್-೧೯ ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಲಭ್ಯವಾಗಲು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳೂ ಕಾರಣ ಎಂಬುದನ್ನು ಯೂನಿವರ್ಸಿಟಿ ಆಫ್ ಪೆನ್ಸಲ್ವೇನಿಯಾ ಹಾಗೂ ಅರ್ಬಾನಾ-ಚಾಂಪೇನ್‌ನಲ್ಲಿ ಇಲಿನಾಯ್ಸ್ ನ ಸಂಶೋಧಕರು ಕಂಡುಕೊಂಡಿದ್ದಾರೆ. ಕೊರೋನ ಹರಡಿದ ಪ್ರಾರಂಭದ ದಿನಗಳಲ್ಲಿ ಅದನ್ನು ತಡೆಗಟ್ಟುವುದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಅದರ ಕುರಿತಾದ ಕಾನ್ಸ್ಪಿರೆಸಿ ಥಿಯರಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾದ ತಪ್ಪು ಮಾಹಿತಿ ಹರಡುತ್ತಿತ್ತು. ಅದನ್ನೆ ಬಹುತೇಕ ಮಂದಿ ನಂಬಿದ್ದರು ಎಂದು ಹಾರ್ವರ್ಡ್ ಕೆನಡಿ ಸ್ಕೂಲ್ ಮಿಸ್ ಇನ್ಫಾರ್ಮೇಷನ್ ರಿವ್ಯೂ ಜರ್ನಲ್ ನಲ್ಲಿ ಪ್ರಕಟವಾದ ಸಮೀಕ್ಷಾ ವರದಿ ಹೇಳಿದೆ.

Please follow and like us:

Leave a Reply

Your email address will not be published. Required fields are marked *

Next Post

ನಾಲ್ವರು ಕೊರೋನಾ ಸೋಂಕಿತರು ಎಸ್ಕೇಪ್

Mon Apr 27 , 2020
ಪುಣೆ : ಪುಣೆಯ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುವಾಗ ಕೋವಿಡ್ -೧೯ ಶಂಕಿತ ನಾಲ್ವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರೂ ಕೊರೊನಾ ವೈರಸ್ ಸೋಂಕಿತನ ದ್ವಿತೀಯ ಸಂಪರ್ಕಿಗಳಾಗಿದ್ದರು. ಅವರನ್ನು ಆಂಬ್ಯುಲೆನ್ಸ್ನಲ್ಲಿ ಸಿಂಹಗಢ ರಸ್ತೆ ಪ್ರದೇಶದಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು’ ಎಂದು ಸಿಂಹಗಢ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ವಾರೆಂಟೈನ್ ಕೇಂದ್ರದ ಬಳಿ ಆಂಬ್ಯುಲೆನ್ಸ್ ನಿಲ್ಲಿಸಿದ್ದಾಗ, ನಾಲ್ವರು ತಪ್ಪಿಸಿಕೊಂಡು ಓಡಿಹೋದರು’ ಎಂದು ಪೊಲಿಸರು ತಿಳಿಸಿದ್ದಾರೆ.ತಪ್ಪಿಸಿಕೊಂಡವರನ್ನು ಪತ್ತೆ […]

Advertisement

Wordpress Social Share Plugin powered by Ultimatelysocial