ಕೊಳವೆ ಬಾವಿಗೆ ಬಿದ್ದ ಮೇಕೆಮರಿ

ಕೊಳವೆ ಬಾವಿಯೊಂದಕ್ಕೆ ಬಿದ್ದ ಮೇಕೆ ಮರಿಯನ್ನು ದೇಶೀ ಶೈಲಿಯಲ್ಲಿ ಬಚಾವ್ ಮಾಡಲು ಮುಂದಾದ ನಾಲ್ವರ ಸಾಹಸವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹೌದು ಮೇಕೆ ಮರಿಯನ್ನು ರಕ್ಷಿಸಲು ಖುದ್ದು ಮುಂದಾಗುವ ಈ ನಾಲ್ವರ ಪೈಕಿ ಒಬ್ಬರು ತಾವೇ ಆ ಕೊಳವೆ ಬಾವಿಗೆ ತಮ್ಮ ಅರ್ಧಕ್ಕಿಂತ ಹೆಚ್ಚಿನ ಭಾಗದ ದೇಹವನ್ನು ಉಲ್ಟಾಮಾಡಿ ಒಳಗೆ ತೂರಿಸುತ್ತಾರೆ. ಈ ವೇಳೆ ಅವರ ಕಾಲುಗಳನ್ನು ಜೊತೆಗಿದ್ದ ಮೂವರು ಹಿಡಿದುಕೊಳ್ಳುತ್ತಾರೆ. ನಂತರ ಕೊಳವೆ ಬಾವಿಯೊಳಗೆ ತೂರಿಕೊಂಡ ಈ ವ್ಯಕ್ತಿ ತನ್ನ ಕೈಗೆ ಮೇಕೆ ಸಿಕ್ಕಿದೆ ಎಂದು ಹೇಳುತ್ತಲೇ ಆತನನ್ನು ಮೇಲೆತ್ತುವ ಕೆಲಸವನ್ನು ಜೊತೆಗಿದ್ದ ಮೂವರು ಮಾಡುತ್ತಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ರೈಲಿಗೆ ತಲೆ ಕೊಟ್ಟು ಕ್ಯಾಮರಮೆನ್ ಆತ್ಮಹತ್ಯೆ

Mon Jun 29 , 2020
ಮೈ ಡ್ರೀಮ್ಸ್ ಮೆಟ್ರೋ ಖಾಸಗಿ ನ್ಯೂಸ್ ಚಾನೆಲ್‌ವೊಂದರ ಕ್ಯಾಮರಮನ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಕಲಬುರಗಿ ಹೊರವಲಯದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿ ಇರುವ ರೈಲ್ವೇ ಹಳಿ ಮೇಲೆ ನಡೆದಿದೆ. ಆತ್ಮಹತ್ಯೆಗೊಳಗಾಗಿರುವ ಹನುಮಂತ್‌ರಾವ್  ಮೂಲತಃ ಕಲಬುರಗಿಯವರು ಖಾಸಗಿ ಚಾನಲ್ ಒಂದರಲ್ಲಿ ಕ್ಯಾಮರ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ವೈಯುಕ್ತಿಕ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಹಾಗೂ ವಾಡಿ […]

Advertisement

Wordpress Social Share Plugin powered by Ultimatelysocial