ದಿಲೀಪ್ ಕುಮಾರ್ ಎ.ಆರ್ ರೆಹಮಾನ್ ಆಗಿ ಬದಲಾದದ್ದು ಹೇಗೆ?

ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್​.ಎಸ್​. ಶೇಖರ್ ಅವರ ಮಗನಾಗಿ ದಿಲೀಪ್​ ಕುಮಾರ್ ಜನಿಸಿದ್ದರು. ದಿಲೀಪ್​ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ ಮೊದಲೇ ಶೇಖರ್ ಮೃತಪಟ್ಟರು. ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್.ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್​.ಎಸ್​. ಶೇಖರ್ ಅವರ ಮಗನಾಗಿ ದಿಲೀಪ್​ ಕುಮಾರ್ ಜನಿಸಿದ್ದರು. ದಿಲೀಪ್​ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ ಮೊದಲೇ ಶೇಖರ್ ಮೃತಪಟ್ಟರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಹುಟ್ಟಿದ್ದು ಹಿಂದೂ ಆಗಿ. ಈಗ ಮುಸ್ಲಿಂ ಆಗಿರುವ ಅವರಿಗೆ ಅಲ್ಲಾರಖಾ ರಹಮಾನ್ ಎಂಬ ಮುಸ್ಲಿಂ ಹೆಸರನ್ನು ಇಟ್ಟುವರು ಒಬ್ಬ ಹಿಂದೂ ಜ್ಯೋತಿಷಿ. ಈ ವಿಚಾರ ನಿಮಗೆ ಗೊತ್ತಿದೆಯಾ ಆ ಕತೆ ಇಲ್ಲಿದೆ. ರಹಮಾನ್ ಅವರ ಹುಟ್ಟು ಹೆಸರು ದಿಲೀಪ್ ಕುಮಾರ್. ಅವರು ಇನ್ನೂ ತಾರುಣ್ಯಕ್ಕೆ ಕಾಲಿಡುತ್ತಿರುವಾಗಲೇ ಅವರ ತಂದೆ ತೀರಿಕೊಂಡರು. ಕುಟುಂಬದಲ್ಲಿ ನಾಲ್ಕು ಮಕ್ಕಳು.
ಯಾರಿಗೂ ಕೆಲಸವಿಲ್ಲ. ಕುಟುಂಬದ ಆಧಾರವಾಗಿದ್ದ ತಂದೆ ತೀರಿಕೊಂಡಿದ್ದರು. ಹಣಕಾಸಿನ ಹೊರೆ ರಹಮಾನ್ ಮೇಲೆ ಬಿದ್ದಿತ್ತು. ಹೀಗೇ ಹತ್ತು ವರ್ಷಗಳು ಕಳೆದವು.ದಿಲೀಪ್ ಮತ್ತು ಅವರ ತಾಯಿ, ಕರೀಮುಲ್ಲಾ ಖಾದ್ರಿ ಅವರಲ್ಲಿಗೆ ಹೋಗಿ ಬರುತ್ತಿದ್ದರು. ಸೂಫಿ ಸಂತರಿಗೆ ಅನಾರೋಗ್ಯವಾದಾಗ ಇವರ ತಾಯಿಯೇ ನೋಡಿಕೊಂಡರು. ಅದೇ ಸಂದರ್ಭದಲ್ಲೇ ಸ್ವ ಇಚ್ಛೆಯಿಂದ ದಿಲೀಪ್, ತಾನು ಸೂಫಿ ಇಸ್ಲಾಂಗೆ ಮತಾಂತರವಾಗುತ್ತೇನೆಂದೂ ಹೆಸರು ಬದಲಾಯಿಸಿಕೊಳ್ಳುತ್ತೇನೆಂದೂ ಹೇಳಿದ್ದು. ಅಷ್ಟರಲ್ಲಾಗಲೇ ದಿಲೀಪ್ ಕುಮಾರ್, ನಾಟಕಗಳಲ್ಲೂ ಸಣ್ಣಪುಟ್ಟ ಫಿಲಂಗಳಲ್ಲೂ ಸಂಗೀತ ನಿರ್ದೇಶನ ಕೊಡುವುದಕ್ಕೆ ಶುರು ಮಾಡಿದ್ದರು.ಆಗ ದಿಲೀಪ್ ವಯಸ್ಸು ಹತ್ತೊಂಬತ್ತು. ಶಿಕ್ಷಣವನ್ನು ಬಿಟ್ಟು ಪೂರ್ಣಾವಧಿ ಸಂಗೀತದಲ್ಲೇ ಅವರು ತೊಡಗಿಕೊಂಡಿದ್ದರು. ಆದರೆ ದಿಲೀಪ್ ಕುಮಾರ್ ತನ್ನ ಹೆಸರಿನ ಬಗ್ಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ದಿಲೀಪ್ ಎಂದು ಕರೆದರೆ ಯಾರನ್ನೋ ಕರೆದಂತೆ ಅವರಿಗೆ ಅನಿಸುತ್ತಿತ್ತಂತೆ.ತನ್ನನ್ನು ಕರೆದದ್ದು ಅನಿಸುತ್ತಲೇ ಇರಲಿಲ್ಲವಂತೆ. ಆ ಹೆಸರಿಗೂ ತನಗೂ ಸಂಬಂದವೇ ಇಲ್ಲ ಅನಿಸುತ್ತಿತ್ತು. ಆದ್ದರಿಂದ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ ಎಂದು ರಹಮಾನ್ ಆಮೇಲೆ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಕಿರಿಯ ತಂಗಿಗೆ ಮದುವೆ ನಿಶ್ಚಯವಾಯಿತು.
ಆಕೆಯ ಜಾತಕ ತೋರಿಸಲು ಒಬ್ಬ ಹಿಂದೂ ಜ್ಯೋತಿಷಿಯಲ್ಲಿಗೆ ಹೋದರು. ಆ ಜ್ಯೋತಿಷಿ, ರಹಮಾನ್ ಅವರತ್ತ ಹೆಚ್ಚು ಆಕರ್ಷಿತರಾದರು. ”ಈ ವ್ಯಕ್ತಿಯಲ್ಲಿ ಏನೋ ವಿಶೇಷತೆ ಇದೆ,” ಎಂದು ಅವರು ಹೇಳಿದರು. ಆಗ, ತನ್ನ ಹೆಸರಿನ ಬಗ್ಗೆ ತನಗಿರುವ ಅನಾಸಕ್ತಿಯನ್ನು ದಿಲೀಪ್ ಹೇಳಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

98 ಸೆಕೆಂಡ್‌ನ‌ಲ್ಲಿ ಆರ್‌ಆರ್‌ಆರ್‌ ಟಿಕೆಟ್‌ ಸೋಲ್ಡ್‌ಔಟ್‌ !

Fri Jan 6 , 2023
    ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಅಮೆರಿಕದಲ್ಲೂ ದಾಖಲೆ ಸೃಷ್ಟಿಸಿದ್ದು, ವಿಶ್ವದ ಅತಿದೊಡ್ಡ ಐಎಂಎಎಕ್ಸ್‌ ಥೀಯೇಟರ್‌ನಲ್ಲಿ ಚಿತ್ರದ ಟಿಕೆಟ್‌ಗಳು ಕೇವಲ 98 ಸೆಕೆಂಡ್‌ಗಳಲ್ಲಿ ಸೋಲ್ಡ್‌ ಔಟ್‌ ಆಗಿವೆ.ಲಾಸ್‌ ಏಂಜಲೀಸ್‌ನ ಟಿಸಿಎಲ್‌ ಚೈನೀಸ್‌ ಥಿಯೇಟರ್‌ನಲ್ಲಿ ಜನವರಿ 9 ರಂದು ಸಿನಿಮಾ ಪ್ರದರ್ಶನ ಕಾಣಲಿದ್ದು, ಬಿಯಾಂಡ್‌ ಫೆಸ್ಟ್‌ ಸಿನಿಮಾ ಉತ್ಸವದ ಹಿನ್ನೆಲೆ ಆರ್‌ಆರ್‌ಆರ್‌ ಸಿನಿಮಾ ಪ್ರದರ್ಶನವನ್ನು ಆಯೋಜಿಸಲಾಗಿದೆ.ಜೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ಅಭಿನಯಿಸಿರುವ […]

Advertisement

Wordpress Social Share Plugin powered by Ultimatelysocial