ಖಾಕಿ ಖದರ್‌ನಲ್ಲಿ ಡಾಲಿ..

ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯನದ ಬಹುನಿರೀಕ್ಷಿತ ಸಿನಿಮಾ ಹೊಯ್ಸಳ. ಇದೀಗ ಈ ಸಿನಿಮಾದ ಮೊದಲ ಹಾಡು ಇಂದು (ಫೆಬ್ರವರಿ 25) ಬಿಡುಗಡೆಯಾಗಿದೆ. ಹಾಡಿನಲ್ಲಿ ಖಾಕಿ ಖದರ್‌ನಲ್ಲಿ ಡಾಲಿ ಮಿಂಚಿದ್ದಾರೆ. ಗನ್‌ ಹಿಡಿದು ವಿಲನ್‌ಗಳ ಮಾರಣಹೋಮಕ್ಕೆ ನಿಂತಿರುವ ಗುರುದೇವ ವಿಡಿಯೋದಲ್ಲಿ ಅಬ್ಬರಿಸಿದ್ದಾರೆ.ಸಧ್ಯ ಈ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಲಭ್ಯವಿದೆ.ʼದುಆರಂಭವಾಗುವ ಈ ಹಾಡಿನಲ್ಲಿ ಡಾಲಿ ರಫ್‌ ಆಂಡ್‌ ಟಫ್‌ ಕಾಪ್‌ನಲ್ಲಿ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ನೋಡಿದ್ರೆ, ಒಬ್ಬ ಖಡಕ್‌ ಪೊಲೀಸ್‌ ಅಧಿಕಾರಿ ಗುರುದೇವ ಅವರ ವ್ಯಕ್ತಿತ್ವವನ್ನು ಪರಿಚಯಿಸಲು ಬಿಡುಗಡೆ ಮಾಡಿದಂತೆ. ಈ ಹಾಡಿನಲ್ಲಿ ಗುಡ್ಡ ಗಾಡು,ಸಂದಿ ಗೊಂದಿ ಎನ್ನದೆ ಕೈಯಲ್ಲಿ ಗನ್‌ ಹಿಡಿದು ರೌಡಿಗಳನ್ನು ನುಗ್ಗಿ ಹೊಡೆಯುವ ಡಾಲಿಯ ರೌದ್ರಾವತಾರ ಸಖತ್ತಾಗಿದೆ.ನಿರ್ದೇಶಕ ಸಂತೋಶ್ ಆನಂದ್​ರಾಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದಕ್ಕೆ ತಕ್ಕಂತೆ ಅಜನೀಶ್ ಲೋಕನಾಥ್ ಮ್ಯೂಜಿಕ್‌ ನೀಡಿದ್ದಾರೆ. ಈ ಹಾಡನ್ನು ನಕಶ್ ಅಜೀಜ್ ಹಾಡಿದ್ದಾರೆ. ಸದ್ಯ ರಿಲೀಸ್‌ ಆಗಿರುವ ವಿಡಿಯೋ ಸಿನಿಮಾದ ಮೇಲಿನ ಕುತೂಹಲ ಹೆಚ್ಚಿಸುತ್ತಿದೆ. ವಿಡಿಯೋ ಸಾಂಗ್‌ನಲ್ಲಿ ಡಾಲಿ ಅಬ್ಬರ ನೋಡಿದ್ರೆ, ಇನ್ನು ಸಿನಿಮಾದಲ್ಲಿ ಧನಂಜಯ್‌ ಹೇಗೆ ಅಬ್ಬರಿಸಿರಬಾರದು ಅಂತ ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.ಇನ್ನು ಡಾಲಿ ಧನಂಜಯ್​ರ 25ನೇ ಸಿನಿಮಾ ಹೊಯ್ಸಳ ಮಾರ್ಚ್‌ 30 ರಂದು ತೆರೆಮೆಲೆ ಅಪ್ಪಳಿಸಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್​ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

'ಅಯ್ಯೋ' ಶ್ರದ್ಧಾ

Sat Feb 25 , 2023
ಬೆಂಗಳೂರಿನ (Bengaluru) ಕಾಮಿಡಿಯನ್ ‘ಅಯ್ಯೋ’ ಶ್ರದ್ಧಾ (Aiyyo Shraddha) ಎಂದರೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಏಕೆಂದರೆ ಈ ಇನ್‌ಸ್ಟಾಗ್ರಾಮ್ ಇನ್‌ಫ್ಲ್ಯೂನ್ಸರ್ ಶ್ರದ್ಧಾ ಜೈನ್ ಈ ಐಟಿ ಕಂಪನಿಗಳು ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ಕೆಲಸದಿಂದ ವಜಾ ಗೊಳಿಸಿದ್ದರ ಬಗ್ಗೆ ಮಾಡಿದ ಒಂದು ಕಾಮಿಡಿ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಶ್ರದ್ಧಾ ಜೈನ್ ಸೋಷಿಯಲ್ ಮೀಡಿಯಾದಲ್ಲಿ ‘ಅಯ್ಯೋ ಶ್ರದ್ಧಾ’ ಎಂದು ತುಂಬಾನೇ ಪ್ರಸಿದ್ಧರಾಗಿದ್ದಾರೆ. ಅಯ್ಯೋ ಶ್ರದ್ಧಾ […]

Advertisement

Wordpress Social Share Plugin powered by Ultimatelysocial