ಚುಮು ಚುಮು ಚಳಿಗೆ ಹೆಚ್ಚಾಯ್ತು ಮೊಟ್ಟೆ ರೇಟ್‌ ..!ಮೊಟ್ಟೆ ಪ್ರಿಯರಿಗೆ ಶಾಕಿಂಗ್‌

ಎಗ್‌ ಆಮ್ಲೇಟ್ ಎಗ್ ಪಪ್ಸ್, ಎಗ್ ರೈಸ್, ಎಗ್ ಪಕೋಡಾ ಹೀಗೆ ಟೇಸ್ಟಿ ಟೇಸ್ಟಿ ಎಗ್ ಐಟಂಗಳನ್ನ ತಿನ್ನುವ ಎಗ್ ಪ್ರಿಯರು ಈ ಸ್ಟೋರಿ ನೋಡ್ಲೇಬೇಕು. ಬಾಯಿ‌ ಚಪ್ಪರಿಸಿಕೊಂಡು ಚುಮು ಚುಮು ಚಳಿಗೆ ಬಿಸಿಬಿಸಿಯಾಗಿ ಮಜಾ ಮಾಡುವ ಜನರಿಗೆ ಮೊಟ್ಟೆ ಬೆಲೆ ದಿಢೀರ್‌ ಏರಿಕೆಯಿಂದ ಬರೆ ಎಳೆದಂತಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಕೆಲ ದಿನಗಳಿಂದ ಶೀತದಿಂದ ಜನರು ನಡುಗಲಾರಂಭಿಸಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ದಟ್ಟ ಚಳಿ ಕಾಣಿಸಿಕೊಳ್ಳಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ, ಉತ್ತರ ಕರ್ನಾಟಕ ಭಾಗದ ಧಾರವಾಡ, ಹುಬ್ಬಳ್ಳಿ, ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲೂ ಚಳಿ ಅಧಿಕವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದ ಮುಂಜಾವಿನ ತನಕ ತಾಪಮಾನ ಕನಿಷ್ಠ ಪ್ರಮಾಣ ತಾಪಮಾನ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಚಳಿ ಹೆಚ್ಚಾದಂತೆ ಕೆಲವೊಂದು ವಸ್ತುಗಳ ಮೇಲೆ ಚಳಿ ಪರಿಣಾಮ ಬಾರಿ ಹೊಡೆ ಬೀಳುತ್ತದೆ ಅದರಲ್ಲೂ ಚಳಿಗೆ ಹೆಚ್ಚಾಗಿ ಮೊಟ್ಟೆಗಳ ರೇಟ್‌ ಹೆಚ್ಚಾಗುತ್ತದೆ. ಇನ್ನು ಚಳಿಗಾಲದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ ಉತ್ಪಾದನೆ ಕಡಿಮೆ ಇರೊದ್ರಿಂದ ಭಾರೀ ಪ್ರಮಾಣದಲ್ಲಿ ಹೊಡೆ ಬೀಳುತ್ತದೆ ಹಾಗಾಗಿ ಬೆಲೆಯಲ್ಲಿ ಏರಿಕೆ ಆಗುತ್ತದೆ ಎನ್ನಲಾಗುತ್ತದೆ.
ಹೇಗಿದ್ರೂ ಚಳಿಗೆ ಬಿಸಿ ಬಿಸಿಯಾಗಿ ಎನಾದ್ರೂ ತಿನ್ನೋಣ ಅಂದ್ಕೋಂಡು ಇರುವವರಿಗೆ ಎಗ್ ರೆಸಿಪಿ ಮಾಡ್ಬೇಕು ಅಂದ್ರೆ ನೀವು ಯೋಚ್ನೆ ಮಾಡ್ಲೇ ಬೇಕು. ಯಾಕಂದ್ರೆ ಧಿಡೀರ್ ಅಂತಾ ಮೊಟ್ಟೆ ದರ ಏರಿಕೆ ಕಂಡಿದ್ದು, ಮೊಟ್ಟೆ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಮೊಟ್ಟೆಯನ್ನಾ ಮಳೆಗಾಲ ಹಾಗೂ ಚಳಿಗಾಲದಲ್ಲಿ ಹೆಚ್ಚಾಗಿ ಬಳಸುತ್ತಾರೆ. 4 ರಿಂದ 4 ರೂಪಾಯಿ 50 ಪೈಸೆಗೆ ಸಿಕ್ತಿದ್ದ ಮೊಟ್ಟೆ 5 ರಿಂದ 5 ರೂ. 30 ಪೈಸೆಗೆ ಏರಿಕೆ ಆಗಿದೆ. ಹೊಟೇಲ್ ಮಾಲೀಕರಿಗೂ ಮೊಟ್ಟೆ ದರದ ಬಿಸಿ ತಟ್ಟಿದಂತೂ ನಿಜ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Bidar: ಬಸವಕಲ್ಯಾಣದ ಅನುಭವ ಮಂಟಪದ ಅಲ್ಪಾವಧಿ ಟೆಂಡರ್ ಗೆ ಸಿಎಂ ಅಸ್ತು

Tue Jan 25 , 2022
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವಕಲ್ಯಾಣದ ಅನುಭವ ಮಂಟಪದ ನಿರ್ಮಾಣದ ಪ್ರಗತಿ ಕುರಿತು ಸಭೆ ನಡೆಸಿದ್ಧು.ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೆಗಿತ್ತು ಎಂಬ ಅರಿವು ಮೂಡಿಸುವ ರಿತಿಯಲ್ಲಿ ನಿರ್ಮಾಣ ಮಾಡಬೆಕು ಸುಸಜ್ಜಿತವಾದ ಡಿಜಿಟಲ್ ಗ್ರಂಥಾಲಯ.ಹಾಲೊಗ್ರಾಫಿಕ್ ಪ್ರದರ್ಶನ.ಮುಂತಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪ ನಿರ್ಮಾಣ ಮಾಡಬೆಕೆಂದು ಸೂಚನೆ ನಿಡಿದ್ಧಾರೆ ಎನ್ನಲಾಗಿದೆ. ಕನಿಷ್ಠ 200 ಜನ ಕುಳಿತುಕೊಳ್ಳುವ 2 ಸಭಾಂಗಣ ನಿರ್ಮಾಣ ಹಾಗು ತಾಂತ್ರಿಕ ಅನೂಕುಲ ಮಾಡಿಕೊಂಡು ನಿರ್ಮಾಣ […]

Advertisement

Wordpress Social Share Plugin powered by Ultimatelysocial