‘ಅಯ್ಯೋ’ ಶ್ರದ್ಧಾ

ಬೆಂಗಳೂರಿನ (Bengaluru) ಕಾಮಿಡಿಯನ್ ‘ಅಯ್ಯೋ’ ಶ್ರದ್ಧಾ (Aiyyo Shraddha) ಎಂದರೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಏಕೆಂದರೆ ಈ ಇನ್‌ಸ್ಟಾಗ್ರಾಮ್ ಇನ್‌ಫ್ಲ್ಯೂನ್ಸರ್ ಶ್ರದ್ಧಾ ಜೈನ್ ಈ ಐಟಿ ಕಂಪನಿಗಳು ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ಕೆಲಸದಿಂದ ವಜಾ ಗೊಳಿಸಿದ್ದರ ಬಗ್ಗೆ ಮಾಡಿದ ಒಂದು ಕಾಮಿಡಿ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಬೆಂಗಳೂರಿನಲ್ಲಿ ನೆಲೆಸಿರುವ ಶ್ರದ್ಧಾ ಜೈನ್ ಸೋಷಿಯಲ್ ಮೀಡಿಯಾದಲ್ಲಿ ‘ಅಯ್ಯೋ ಶ್ರದ್ಧಾ’ ಎಂದು ತುಂಬಾನೇ ಪ್ರಸಿದ್ಧರಾಗಿದ್ದಾರೆ. ಅಯ್ಯೋ ಶ್ರದ್ಧಾ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಲಿಂಕ್ಡ್‌ಇನ್ ನಲ್ಲಿ 83,000 ಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದಾರೆ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಅವರು 6.88 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ.

ಅಯ್ಯೋ ಶ್ರದ್ಧಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋಗಳನ್ನು ಸದಾ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ರು ಶ್ರದ್ದಾ

ಶ್ರದ್ಧಾ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈಗ ಈಕೆ ಮತ್ತೊಬ್ಬ ರಾಜಕಾರಿಣಿ ಜೊತೆ ಕೂತು ಟಿಫಿನ್ ಮಾಡಿದ್ದಾರೆ ನೋಡಿ.

ಬೆಂಗಳೂರಿನಲ್ಲಿ ನಡೆದ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಸ್ (ಎಫ್‌ಎಂಸಿಬಿಜಿ) ಸಭೆಯಲ್ಲಿ ಭಾಗವಹಿಸಲು ಯುಕೆಯ ಖಜಾನೆಯ ಚಾನ್ಸಲರ್ ಜೆರೆಮಿ ಹಂಟ್ ಈ ವಾರದ ಆರಂಭದಲ್ಲಿ ಭಾರತಕ್ಕೆ ಆಗಮಿಸಿದ್ದರು. ಫೆಬ್ರವರಿ 24 ಮತ್ತು 25 ರಂದು ನಡೆಯಲಿರುವ ಜಿ20 ಎಫ್‌ಎಂಸಿಬಿಜಿ ಸಭೆಗೆ ಮುಂಚಿತವಾಗಿ, ಹಂಟ್ ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ತಮ್ಮ ಭಾರತೀಯ ಸಹವರ್ತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದರು.

ಬೆಂಗಳೂರಿನ ವಿಪ್ರೋ ಕ್ಯಾಂಪಸ್ ಗೆ ಭೇಟಿ ನೀಡಿದ್ರಂತೆ ಬ್ರಿಟಿಷ್ ಹಣಕಾಸು ಸಚಿವ

ಬ್ರಿಟಿಷ್ ಹಣಕಾಸು ಸಚಿವರು ವಿಪ್ರೋ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್ ಜಿ ಅವರೊಂದಿಗೆ ವಿಪ್ರೋದ ಬೆಂಗಳೂರು ಕ್ಯಾಂಪಸ್ ಗೆ ಭೇಟಿ ನೀಡಿದರು. ನಂತರ ಅವರು ಭಾರತ-ಯುಕೆ ಸಹಭಾಗಿತ್ವದ ಬಗ್ಗೆ ಚಾಟ್ ಮಾಡಲು ಜನಪ್ರಿಯ ಇನ್‌ಸ್ಟಾಗ್ರಾಮ್ ಕಾಮಿಡಿಯನ್ ಶ್ರದ್ಧಾ ಜೈನ್ ಅವರನ್ನು ಭೇಟಿಯಾದರು

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾಷೆ ನೆಲಕ್ಕಾಗಿ ಕ್ಯಾಂಪಸ್ ಕ್ರಾಂತಿ

Sat Feb 25 , 2023
ಕಷ್ಟದಿಂದ ಮೇಲ್ಬಂದ ಶ್ರೀಮಂತನ ಇಬ್ಬರು ಮಕ್ಕಳು ಜವಾಬ್ದಾರಿಯಿಲ್ಲದೆ ಪುಂಡರಂತೆ ತಿರುಗುತ್ತ, ಪಿಯುಸಿ ಪಾಸ್ ಮಾಡಲು ಸಾಧ್ಯವಾಗದಷ್ಟು ವಿದ್ಯಾಭ್ಯಾಸದ ಹಿನ್ನೆಲೆಯಾಗಿರುತ್ತದೆ. ಕೊನೆಗೂ ಹೇಗೋ ಪಾಸಾದ ಇವರನ್ನು ಜವಾಬ್ದಾರಿ ಕಲಿಸಲು ಮಹಾರಾಷ್ಟ್ರ ಗಡಿ ಭಾಗದ ತನ್ನ ಸ್ನೇಹಿತನ ಕಾಲೇಜಿಗೆ ಪದವಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುತ್ತಾನೆ ಅಲ್ಲಿಂದ ಶುರುವಾಗುವುದೇ ಕ್ಯಾಂಪಸ್ ಕ್ರಾಂತಿ ಸಿನಿಮಾದ ಸ್ಟೋರಿ.ಈ ವಾ ತೆರೆ ಕಂಡು ಜನ ಮೆಚ್ಚುಗೆಯನ್ನ ಪಡೆದಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಸಂತೋಷ್. ರಾಜ್ ಕುಟುಂಬದ ಕುಡಿಯಾಗಿರುವ […]

Advertisement

Wordpress Social Share Plugin powered by Ultimatelysocial