ಗ್ರೀಸ್‌ನಲ್ಲಿ ರೈಲುಗಳ ಡಿಕ್ಕಿ ೨೬ ಮಂದಿ ಸಾವು.

 

ಪ್ರಯಾಣಿಕರ ರೈಲು ಹಾಗೂ ಸರಕು ಸಾಗಾಣಿಕೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ ೨೬ ಮಂದಿ ಸಾವನ್ನಪ್ಪಿ ೮೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದಾರುಣ ಘಟನೆ ಉತ್ತರ ಗ್ರೀಸ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಅಥೆನ್ಸ್‌ನ ಉತ್ತರ ಭಾಗದಲ್ಲಿ ಸುಮಾರು ೩೮೦ ಕಿಲೋಮೀಟರ್ (೨೩೫ ಮೈಲು ದೂರ) ದೂರದಲ್ಲಿರುವ ಟೆಂಪೆ ಬಳಿ ಅವಘಡ ಸಂಭವಿಸಿದ್ದು ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಲಿದೆ.ಡಿಕ್ಕಿ ರಭಸಕ್ಕೆ ಕೆಲ ಬೋಗಿಗಳು ಹಳಿತಪ್ಪಿದ್ದಲ್ಲದೆ, ಮೂರು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಕನಿಷ್ಠ ೨೫ ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ಹತ್ತಿರದ ಲಾರಿಸ್ಸಾ ನಗರದ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಎರಡು ರೈಲುಗಳ ನಡುವಿನ ಡಿಕ್ಕಿಯ ತೀವ್ರತೆಯಿಂದಾಗಿ ಈ ಪ್ರಕ್ರಿಯೆಯು ಸಂದಿಗ್ದತೆಯ ನಡುವೆಯೂ ಸಾಗುತ್ತಿದೆ. ಸುಟ್ಟ ಗಾಯಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಹತ್ತಾರು ಆಂಬ್ಯುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ” ಎಂದು ಅಲ್ಲಿನ ಅಗ್ನಿಶಾಮಕ ಸೇವೆಯ ವಕ್ತಾರ ವಾಸಿಲಿಸ್ ವರ್ತಕೊಯಾನಿಸ್ ಹೇಳಿದ್ದಾರೆ.
ಹೆಡ್ ಲ್ಯಾಂಪ್‌ಗಳನ್ನು ಧರಿಸಿದ ರಕ್ಷಣಾ ಸಿಬ್ಬಂದಿ ದಟ್ಟ ಹೊಗೆಯ ನಡುವೆಯೂ ಕಾರ್ಯಾಚರಣೆ ಕೈಗೊಂಡಿದ್ದಾರೆ.ಇದೊಂದು ಅತ್ಯಂತ ಭೀಕರ ಅಪಘಾತವಾಗಿದೆ. ದುರಂತದ ದೃಶ್ಯವನ್ನು ವಿವರಿಸಲು ಕಷ್ಟ,” ಎಂದು ಕೇಂದ್ರ ಥೆಸ್ಸಲಿ ಪ್ರದೇಶದ ಪ್ರಾದೇಶಿಕ ಗವರ್ನರ್ ಕೋಸ್ಟಾಸ್ ಅಗೋರಾಸ್ಟೋಸ್ ಅವರು ಸರ್ಕಾರಿ ದೂರದರ್ಶನಕ್ಕೆ ತಿಳಿಸಿದ್ದಾರೆ.ರೈಲಿನ ಮುಂಭಾಗವನ್ನು ಒಡೆದು ಹಾಕಲಾಗಿದೆ. ಕ್ರೇನ್‌ಗಳನ್ನು ಒಳಗಡೆ ಕೊಂಡೊಯ್ಯಲು ಮತ್ತು ವಿಶೇಷ ಲಿಫ್ಟಿಂಗ್ ಉಪಕರಣ ಬಳಸಿ ಜಖಂಗೊಂಡ ರೈಲಿನ ಭಾಗಗಳ ತೆರವು ಕಾರ್ಯ ಹಾಗೂ ರೈಲು ಬೋಗಿಗಳನ್ನು ಮೇಲೆತ್ತಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.ಜೊತೆಗೆ, ರಕ್ಷಣಾ ಕಾರ್ಯಕ್ಕೆ ಸೇನೆಯ ನೆರವನ್ನೂ ಪಡೆಯುವ ನಿಟ್ಟಿನಲ್ಲಿ ಸಂಪರ್ಕಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅವಘಡ ಸಂಭವಿಸಿದಾಗ ಅಥೆನ್ಸ್‌ನಿಂದ ಉತ್ತರದ ನಗರವಾದ ಥೆಸಲೋನಿಕಿಗೆ ಉತ್ತರಕ್ಕೆ ಹೋಗುವ ಪ್ಯಾಸೆಂಜರ್ ರೈಲಿನಲ್ಲಿ ಸುಮಾರು ೩೫೦ ಪ್ರಯಾಣಿಕರು ಇದ್ದರು ಎಂದು ರೈಲು ನಿರ್ವಾಹಕ ಹೆಲೆನಿಕ್ ರೈಲು ಹೇಳಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ಹಾಗೂ ಅಪಘಾತದಿಂದ ಪಾರಾದ ಪ್ರಯಾಣಿಕರನ್ನು ಘಟನೆಯ ಉತ್ತರ ಭಾಗದ ೧೩೦ ಕಿಲೋಮೀಟರ್ (೮೦ ಮೈಲುಗಳು) ದೂರದ ಥೆಸಲೋನಿಕಿಗೆ ಬಸ್ ಮೂಲಕ ಕಳುಹಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಪತ್ತೆಯಾಗಿದ್ದ ಮಾಡೆಲ್ ತಲೆಬುರುಡೆ ಸೂಪ್ ಮಡಿಕೆಯಲ್ಲಿ ಪತ್ತೆ!

Wed Mar 1 , 2023
ಹಾಂಕಾಂಗ್: ಹಾಂಕಾಂಗ್‍ನಿಂದ ಕಳೆದ ವಾರ ನಾಪತ್ತೆಯಾಗಿದ್ದ ಖ್ಯಾತ ಮಾಡೆಲ್ ಅಬ್ಬಿ ಚೋಯ್ ಅವರ ಛಿದ್ರಗೊಂಡ ದೇಹದ ತುಂಡುಗಳು ಥಾಯ್ ಪೋ ಜಿಲ್ಲೆಯ ಮನೆಯೊಂದರ ಫ್ರಿಡ್ಜ್‍ನಲ್ಲಿ ಪತ್ತೆಯಾಗಿವೆ. ಈ ಮನೆಯಲ್ಲಿ ಮಾಂಸ ಕತ್ತರಿಸುವ ಸಾಧನ ಮತ್ತು ಕೆಲ ಬಟ್ಟೆ ಬರೆ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ ಆಕೆಯ ರುಂಡ ಮತ್ತು ಮುಂಡ ಪತ್ತೆಯಾಗಿರಲಿಲ್ಲ. ಇದೀಗ ಸೂಪ್ ಇದ್ದ ಮಡಿಕೆಯಲ್ಲಿ ಅವರ ತಲೆ ಮತ್ತು ಮನುಷ್ಯನ ಅವಶೇಷಗಳು ಪತ್ತೆಯಾಗಿವೆ ಎಂದು […]

Advertisement

Wordpress Social Share Plugin powered by Ultimatelysocial