ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

ಜಯದ್ರಥನು ದ್ರೌಪದಿಯನ್ನು ಅಪಹರಿಸಿ ಪರಿಭವಕ್ಕೆ ಒಳಗಾದದ್ದು.
ಪಾಂಡವರ ವನವಾಸ ಹಾಗೆಯೇ ಮುಂದುವರಿದು ಹನ್ನೊಂದು ವರ್ಷಗಳು ಕಳೆದವು. ಈ ಮಧ್ಯೆ ಧೃತರಾಷ್ಟ್ರನ ಅಳಿಯ ಜಯದ್ರಥನು ಪಾಂಡವರು ಇದ್ದ ಆಶ್ರಮದ ಹತ್ತಿರ ಬಿಡಾರವನ್ನು ಮಾಡಿ ಕೋಲಾಹಲವೆಬ್ಬಿಸಿದನು. ದುಷ್ಟನಾದ ಅವನು ದ್ರೌಪದಿಗಾಗಿ ಶೃಂಗಾರಸಾಮಗ್ರಿಗಳನ್ನು ಕಳಿಸಿಕೊಟ್ಟನು. ಪಾಂಡವರು ಇಲ್ಲದ ವೇಳೆ ನೋಡಿ ಕೊಡಿರೆಂದನು.
ಪಾಂಡವರು ಮುನಿಗಳನ್ನು ದ್ರೌಪದಿ ಮತ್ತು ಆಶ್ರಮದ ಕಾವಲಿಗೆ ನಿಲ್ಲಿಸಿ ಬೇಟೆಗೆ ತೆರಳಿದರು. ಇತ್ತ ಜಯದ್ರಥನ ಕಡೆಯವರು ಬಂದು ದ್ರೌಪದಿಯನ್ನು ಕಂಡು ಸಾಮಗ್ರಿಗಳನ್ನು ಇಳಿಸಿದರು. ಎಲ್ಲರ ಕುಶಲ ವಿಚಾರಿಸಿದ ದ್ರೌಪದಿ ಇವುಗಳನ್ನು ತಾನು ಸ್ವೀಕರಿಸುವುದಿಲ್ಲವೆಂದೂ ಪತಿಗಳು ಬಂದನಂತರ ಅವರೊಡನೆ ಮಾತನಾಡಿರಿ ಎಂದೂ ಹೇಳಿದಳು. ಅವರು ಹೋಗಿ ಜಯದ್ರಥನಿಗೆ ಸಂಗತಿ ಹೇಳಲು ಅವನು ತಾನೇ ಹೊರಟನು.
ಅವನು ಬಂದ ರಭಸಕ್ಕೆ ಮುನಿಗಳು ಬೆದರಿದರು. ದ್ರೌಪದಿಯು ಇವನ ನಡೆ ಅನುಚಿತವೆಂದೂ, ಪತಿವ್ರತೆಯನ್ನು ಕೆಣಕಬಾರದೆಂದೂ ಹೇಳಿದರೆ ಕೇಳಲಿಲ್ಲ. ಅವನು ಅವಳನ್ನು ಬಲವಂತದಿಂದ ಹೊತ್ತು ಹೊರಟ. ಮುನಿಗಳೆಲ್ಲರೂ ದೆಸೆದೆಸೆಗೆ ಹೊರಟು ಪಾಂಡವರನ್ನು ಕಂಡು ವಿಷಯವನ್ನು ಹೇಳಲು ಭೀಮಾರ್ಜುನರು ತಕ್ಷಣ ಹೊರಟರು.
ಜಯದ್ರಥನನ್ನು ಹುಡುಕಿ ನಿಲ್ಲಿಸಿದ ಪಾರ್ಥ ರಥ ಮುಂದೆ ಹೋಗದಂತೆ ತಡೆದ. ಮರಗಳನ್ನೆ ಆಯುಧ ಮಾಡಿಕೊಂಡ ಭೀಮ ಶತ್ರುಗಳನ್ನು ಹೊಡೆದುರುಳಿಸಿದ. ಘನಘೋರ ಯುದ್ಧವಾಯಿತು. ಇವನನ್ನು ಕೊಲ್ಲದಿರು, ಅಣ್ಣನ ಬಳಿಗೆ ಸೆರೆಹಿಡಿದು ಕರೆದೊಯ್ಯುವಾ ಎಂದು ಅರ್ಜುನ ಭೀಮನಿಗೆ ಹೇಳಿ ಹಾಗೆಯೇ ಮಾಡಿದರು. ದ್ರೌಪದಿಯನ್ನು ಸಂತೈಸಿ, ಮುನಿಗಳನ್ನು ಸಮಾಧಾನಪಡಿಸಿ ಎಲ್ಲರೂ ಧರ್ಮಜನ ಬಳಿಗೆ ಬಂದರು.
ತಂಗಿ ದುಶ್ಶಲೆಯ ಗಂಡ ಇವನು. ಇವನನ್ನು ಕೊಂದರೆ ಅವಳು ವಿಧವೆಯಾಗುವಳು ಎಂದು ಧರ್ಮಜ ಸಮಾಧಾನ ಹೇಳಿ ಇವನಿಗೆ ಯಾವ ಶಿಕ್ಷೆ ಕೊಡಬೇಕೆಂದು ಮುನಿಗಳನ್ನು ಕೇಳಿದನು. ಆಗ ಧೌಮ್ಯರು ಮಾನಧನರಿಗೆ ಮಾನಭಂಗಕ್ಕಿಂತ ಮಿಗಿಲಾದ ಶಿಕ್ಷೆಯಿಲ್ಲವೆನ್ನಲು ಇವನ ತಲೆ ಬೋಳಿಸಿ ಕಳಿಸಿಕೊಟ್ಟರು.
ಅಪಮಾನಿತನಾದ ಜಯದ್ರಥ ಈ ಅಪಮಾನಕ್ಕೆ ಪ್ರತೀಕಾರ ಮಾಡಲು ನಿರ್ಧರಿಸಿ ಶಿವನನ್ನು ಕುರಿತು ತಪಸ್ಸು ಮಾಡತೊಡಗಿದನು. ಶಿವ ಬಂದಾಗ ಒಂದೇ ದಿನದಲ್ಲಿ ಪಾಂಡವರನ್ನು ಗೆಲ್ಲಬೇಕೆನಲು ಶಿವನು ಅದು ಸಾದ್ಯವಿಲ್ಲವೆಂದೂ, ಪಾಶುಪತಾಸ್ತ್ರ ಮುಂತಾದ ಅಸ್ತ್ರಗಳನ್ನು ತಾವುಗಳೇ ನೀಡಿರುವುದಾಗಿಯೂ ತಿಳಿಸಿ ಅರ್ಜುನನನ್ನು ಬಿಟ್ಟು ಉಳಿದವರನ್ನು ತೊಂದರೆಪಡಿಸಬಹುದೆಂದು ಹೇಳಿ ಹೋದನು. ಗೆಲ್ಲುವೆಯೆನ್ನಲಿಲ್ಲ.
ಈ ಎಲ್ಲಾ ಕಷ್ಟಗಳಿಗೆ ಕೊನೆಯೆಂದು ಎಂದು ಧರ್ಮಜನು ನೊಂದಿರಲು ಬಂದ ಮಾರ್ಕಂಡೇಯ ಮುನಿಗಳು ಅವನಿಗೆ ಹಿಂದೆ ರಾಮ ಅನುಭವಿಸಿದ ಕ್ಲೇಷವನ್ನು ವಿವರಿಸಿದರು. ಮುನಿಯಿಂದ ರಾಮಾಯಣದ ಕಥೆ ಆಲಿಸಿದ ಧರ್ಮಜನ ಮನಸ್ಸು ಸ್ವಲ್ಪ ತಿಳಿಯಾಯಿತು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸುಬೋಧ ರಾಮರಾವ್

Tue Mar 15 , 2022
ಕನ್ನಡ ನವೋದಯ ಕಾಲದ ಮಹತ್ವದ ಲೇಖಕರಾಗಿ ‘ಸುಬೋಧ’ ಎಂಬ ಪ್ರಸಿದ್ಧ ಪತ್ರಿಕೆ ಮತ್ತು ಪ್ರಕಟಣಾಲಯವನ್ನು ಸ್ಥಾಪಿಸಿ ‘ಸುಬೋಧ’ ಎಂಬ ಹೆಸರಿನ ಜೊತೆಯಲ್ಲಿಯೇ ನಿರಂತರವಾಗಿ ಸ್ತುತಿಸಲ್ಪಡುತ್ತಿರುವವರು ಸುಬೋಧ ರಾಮರಾವ್ ಅವರು. ಇಂದು ಅವರ ಸಂಸ್ಮರಣೆ ದಿನ. ರಾಮರಾವ್ 1890ರ ಆಗಸ್ಟ್‌ 25ರಂದು ವಿನಾಯಕ ಹಬ್ಬದ ದಿನದಂದು ಚಿಕ್ಕಮಗಳೂರಿನಲ್ಲಿ ಜನಿಸಿದರು. ಅವರ ತಂದೆ ಹನುಮಂತರಾಯರು. ತಾಯಿ ಭಾರತೀಬಾಯಿ. ಆರು ಮಕ್ಕಳ ಕಡುಬಡತನದ ಸಂಸಾರದಲ್ಲಿ ತಾಯಿ ಆಕಸ್ಮಿಕ ಮರಣಕ್ಕೆ ತುತ್ತಾದರು. ತಂದೆಗೆ ನಿಗದಿತ ಉದ್ಯೋಗವಿಲ್ಲದೆ, […]

Advertisement

Wordpress Social Share Plugin powered by Ultimatelysocial