ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು

ಬೆಂಗಳೂರಿನ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಗುರುರಾಘವೇಂದ್ರ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ತಮ್ಮಯ್ಯ ಮತ್ತು ಖಾನ್ ನೇತೃತ್ವದ ತಂಡದಿAದ ಈ ದಾಳಿ ನಡೆದಿದ್ದು ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿಯ ಮುಖ್ಯ ಕಚೇರಿ ಮತ್ತು ಬ್ಯಾಂಕ್ ನಲ್ಲಿದ್ದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬರೋಬ್ಬರಿ ೧೪೦೦ ಕೋಟಿಗಳ ಅವ್ಯವಹಾರದ ಆರೋಪಗಳು ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿ ವಿರುದ್ದ ಕೇಳಿ ಬಂದಿತ್ತು ಅಲ್ಲದೇ ಮೋಸಹೋದ ನೂರಾರು ಗ್ರಾಹಕರು ಕೆಲವು ತಿಂಗಳ ಹಿಂದೆ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದರು. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನ ಮೊಸಹೋದ ಗ್ರಾಹಕರು ನೀಡಿದ್ರು. ಈ ಹಿನ್ನಲೆ ಎಸಿಬಿ ಅಧಿಕಾರಿಗಳ ತಂಡದಿAದ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ನಿವೃತ್ತ ಸಿಇಓ ವಾಸುದೇವ್ ಮೈಯ್ಯಾ ರವರ ಕಚೇರಿ, ಬ್ಯಾಂಕ್ ನ ಮನೆ ಮೇಲೂ ದಾಳಿ ನಡೆಸಲಾಗಿದೆ. ಜೊತೆಗೆ ಡಾ.ಕೆ.ರಾಮಕೃಷ್ಣ, ಬ್ಯಾಂಕ್ ಅಧ್ಯಕ್ಷರ ಮನೆಯ ಮೇಲೂ ದಾಳಿ ನಡೆದಿದೆ. ಒಟ್ಟು ನಾಲ್ಕು ಕಡೆ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ರೈಡ್ ನಡೆಸಿದ್ದಾರೆ. ಸದ್ಯ ಬ್ಯಾಂಕ್ ಅಧ್ಯಕ್ಷ ಡಾ.ಕೆ.ರಾಮಕೃಷ್ಣ ಹಾಗು ನಿವೃತ್ತ ಸಿಇಓ ವಾಸುದೇವ್ ಮೈಯ್ಯಾ ಇಬ್ಬರು ಪರಾರಿಯಾಗಿದ್ದರೆ.
ಓeಣತಿoಡಿಞ- iಟಿಠಿuಣ –ರಿuಟಿe ೨೦೨೦-೧೮.೦೬.೨೦೨೦-ಂಅಃ

Please follow and like us:

Leave a Reply

Your email address will not be published. Required fields are marked *

Next Post

ಡಬಲ್ ಮರ್ಡರ್ ಮಾಡಿದ ಭೂಪ ಅಂದರ್

Fri Jun 19 , 2020
ಇಡೀ ಬೆಂಗಳೂರನ್ನ ಬೆಚ್ಚಿಬೀಳಿಸಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನ ಕೊನೆಗು ಪೊಲೀಸ್ರು ಬಂಧಿಸಿದ್ದಾರೆ. ರಾಜೇಶ್(೨೫) ಬಂಧಿತ ಆರೋಪಿ. ಕಳೆದ ಮಂಗಳವಾರ ಅನ್ನಪೂರ್ಣೇಶ್ವರಿ ನಗರದ ಬಳಿ ಇರುವ ಕಾಮಗಾರಿ ಕಟ್ಟಡದಲ್ಲಿ ಸಹದೇವ, ದಂಡಪಾಣಿ ಸಹೋದರ ಜೋಡಿ ಕೊಲೆಯಾಗಿತ್ತು. ಕೊಲೆ ನಡೆಸಿದ್ದು ಸ್ವಂತ ತಮ್ಮ ರಾಜೇಶ್ ಅನ್ನೋದು ಪೊಲೀಸ್ರಿಗೆ ತಿಳಿದಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸ್ರಿಗೆ ಮೂಡಲಪಾಳ್ಯ ಸರ್ಕಲ್ ಬಳಿ ಆರೋಪಿ ರಾಜೇಶ್ ಇರೋದಾಗಿ ಮಾಹಿತಿ ಸಿಗುತ್ತೆ. ತಕ್ಷಣ ಸ್ಥಳಕ್ಕೆ ಹೋಗಿ ಆರೋಪಿಯನ್ನ ಪೊಲೀಸ್ರು […]

Advertisement

Wordpress Social Share Plugin powered by Ultimatelysocial