ಭಾಷೆ ನೆಲಕ್ಕಾಗಿ ಕ್ಯಾಂಪಸ್ ಕ್ರಾಂತಿ

ಷ್ಟದಿಂದ ಮೇಲ್ಬಂದ ಶ್ರೀಮಂತನ ಇಬ್ಬರು ಮಕ್ಕಳು ಜವಾಬ್ದಾರಿಯಿಲ್ಲದೆ ಪುಂಡರಂತೆ ತಿರುಗುತ್ತ, ಪಿಯುಸಿ ಪಾಸ್ ಮಾಡಲು ಸಾಧ್ಯವಾಗದಷ್ಟು ವಿದ್ಯಾಭ್ಯಾಸದ ಹಿನ್ನೆಲೆಯಾಗಿರುತ್ತದೆ. ಕೊನೆಗೂ ಹೇಗೋ ಪಾಸಾದ ಇವರನ್ನು ಜವಾಬ್ದಾರಿ ಕಲಿಸಲು ಮಹಾರಾಷ್ಟ್ರ ಗಡಿ ಭಾಗದ ತನ್ನ ಸ್ನೇಹಿತನ ಕಾಲೇಜಿಗೆ ಪದವಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುತ್ತಾನೆ ಅಲ್ಲಿಂದ ಶುರುವಾಗುವುದೇ ಕ್ಯಾಂಪಸ್ ಕ್ರಾಂತಿ ಸಿನಿಮಾದ ಸ್ಟೋರಿ.ಈ ವಾ ತೆರೆ ಕಂಡು ಜನ ಮೆಚ್ಚುಗೆಯನ್ನ ಪಡೆದಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಸಂತೋಷ್. ರಾಜ್ ಕುಟುಂಬದ ಕುಡಿಯಾಗಿರುವ ಇವರು, ಈ ಹಿಂದೆ ಗಾಂಧಿನಗರದಲ್ಲಿ ತನ್ನ ಸಾಮರ್ಥ್ಯವನ್ನು ಪ್ರೂವ್ ಮಾಡಿದ್ದಾರೆ ಕೂಡ. ಪ್ರೇಕ್ಷಕರಿಗೆ ಏನು ಬೇಕು ಬೇಡ ಎಂಬುದನ್ನರಿತು ಕ್ಯಾಂಪಸ್ ಕ್ರಾಂತಿಯಲ್ಲು ಹೊಸ ವಿಷಯಗಳನ್ನು ಕಥೆಯಲ್ಲಿ ತಂದು ಕ್ರಾಂತಿ ಎಬ್ಬಿಸಿದ್ದಾರೆ.ಗಡಿಭಾಗದ ಕಾಲೇಜುಗಳ ವಿದ್ಯಾರ್ಥಿಗಳು ಇಂದಿಗೂ ಭಾಷೆ ಗಡಿ ವಿಚಾರಕ್ಕೆ ಹೇಗೆಲ್ಲ ಬಡಿದಾಡಿಕೊಳ್ಳುತ್ತಾರೆ ಎಂಬ ವಿಚಾರಗಳನ್ನು ಸೂಕ್ಷ್ಮವಾಗಿ ಪರದೆಯ ಮೇಲೆ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಈ ಚಿತ್ರದ ಮುಖೇನ ಮಾಡಿದ್ದಾರೆ. ಈ ವಿಷಯದ ಜೊತೆಗೆ ಕಾಲೇಜು ವಿದ್ಯಾರ್ಥಿಗಳ ತುಂಟಾಟಗಳು, ಪ್ರೀತಿ, ಪ್ರೇಮ, ಪ್ರಣಯ ಇವೆಲ್ಲವೂ ಕತೆಗೆ ರಂಗು ತುಂಬಿವೆ.ಕರ್ನಾಟಕ ಮತ್ತು ಮಹಾರಾಷ್ಟ್ರದ ದೊಡ್ಡ ಸಮಸ್ಯೆಯಾಗಿರುವ ಗಡಿ ವಿಷಯವೇ ಪ್ರಧಾನವಾಗಿದ್ದರು ಮನರಂಜನಾತ್ಮಕ ವಿಷಯಗಳನ್ನು ಕಥೆಯ ಸುತ್ತ ಪೋಣಿಸಿ ಪ್ರೇಕ್ಷಕ ಎಲ್ಲಿಯೂ ಬೇಜಾರಾಗದ ಹಾಗೆ ಕೊನೆಯ ತನಕ ಕುತೂಹಲತೆ ಕಾಯ್ದುಕೊಂಡಿದ್ದಾರೆ.ಕರ್ನಾಟಕ ವಿದ್ಯಾರ್ಥಿಗಳು ಮತ್ತು ಮಹಾರಾಷ್ಟ್ರ ವಿದ್ಯಾರ್ಥಿಗಳ ನಡುವೆ ಭಾಷೆಯ ವಿಷಯವಾಗಿ ಹೇಗೆಲ್ಲಾ ಮಾರಾಮಾರಿ ಆಗಿ ಕೊಲೆಗಳಾಗಿತ್ತವೆ ಅದಕ್ಕೆ ಕಾರಣ ಯಾರು, ಇದನ್ನ ಬೇಳೆ ಬೇಯಿಸಿಕೊಂಡು ತಮ್ಮ ಪ್ರತಿಷ್ಠೆಗಳನ್ನು ಹೆಚ್ಚು ಮಾಡಿಕೊಳ್ಳುವ ಪುಣ್ಯಾತ್ಮರು ಯಾವ ಸೋಗಿನಲ್ಲಿ ಇರುತ್ತಾರೆ ಎಂಬುದಕ್ಕೆ ಕಥೆಯಲ್ಲಿ ಉತ್ತರವಿದೆ.ನಿರ್ದೇಶಕರು ಕಥೆಯಲ್ಲಿ ಕುತೂಹಲಗಳನ್ನು ಮೂಡಿಸುತ್ತಾ, ತಾನು ಹೇಳಬೇಕಾಗಿದ್ದನ್ನು ಸ್ಪಷ್ಟವಾಗಿ ಪ್ರೇಕ್ಷಕರಿಗೆ ಮನಮುಟ್ಟುವಂತೆ ತೋರಿಸುತ್ತಾ, ಭಾಷೆ ಗಡಿ ನೆಲದ ವಿಚಾರವಾಗಿ ಸುಖ ಸುಮ್ಮನೆ ಗೊತ್ತಿಲ್ಲದೆ ಬಡೆದಾಡಿಕೊಳ್ಳುವರಿಗೆ ಒಂದಿಷ್ಟು ಸಂದೇಶವನ್ನು ಸಾರುತ್ತ ಕಥೆಗೆ ಮುಕ್ತಾಯವನ್ನು ಕೊಟ್ಟಿದ್ದಾರೆ.ಹೊಸ ಹುಡುಗರಾದ ಆರ್ಯ ಮತ್ತು ಅಲಂಕಾರ್ ನಿರ್ದೇಶಕರ ಕನಸುಗಳಿಗೆ ಜೀವ ತುಂಬಿದ್ದಾರೆ. ಇನ್ನು ಇವರಿಗೆ ನಾಯಕಿಯರಾಗಿ ಅಭಿನಯಿಸಿರುವ ಯಶೇನ ಮತ್ತು ಆರತಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು ಗಂಭೀರವಾಗಿ ಸಾಗುವ ಕಥೆಯಲ್ಲಿ ಯುವ ಮನಸುಗಳಲ್ಲಿ ಚಿಟ್ಟೆಗಳನ್ನು ಬಿಟ್ಟಿದ್ದಾರೆ ಅಷ್ಟರಮಟ್ಟಿಗೆ ಪರದೆಯ ಮೇಲೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.ಕ್ಯಾಮೆರಾ ಮೆನ್ ಪಿಕೆಎಚ್ ದಾಸ್ ಯುವ ಮನಸುಗಳನ್ನು ತನ್ನ ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿ ಸರೆ ಹಿಡಿದಿದ್ದಾರೆ. ಸಂಗೀತ ನಿರ್ದೇಶಕ ವಿ ಮನೋಹರ್ ಕೂಡ ಯುವ ಪೀಳಿಗೆ ಬಯಸುವ ಸಂಗೀತ ಸುದಿಯನ್ನು ಚಿತ್ರದುದ್ದಕ್ಕೂ ಹರಿಸಿದ್ದಾರೆ. ಕುಟುಂಬ ಸಮೇತವಾಗಿ ನೋಡಲು ಅಡ್ಡಿ ಇಲ್ಲ **

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Places to Find Sugar Daddies

Sun Feb 26 , 2023
When it comes to spots to find sweets daddies, there are numerous options. These websites help match inquisitive sugar infants to wealthy women and men in mutually beneficial romances. These sites give a safe and easy-to-use experience for both parties, making it a great option for many looking for absolutely […]

Advertisement

Wordpress Social Share Plugin powered by Ultimatelysocial