MEDICINE:ʼದಾಸವಾಳʼದಲ್ಲಿದೆ ಔಷಧೀಯ ಗುಣಗಳು;

ಪ್ರತಿಯೊಬ್ಬರ ಮನೆಯಂಗಳದಲ್ಲಿ ದೇವರಿಗೆಂದೋ, ಅಲಂಕಾರಕ್ಕೆಂದೋ ದಾಸವಾಳ ಹೂವನ್ನು ಬೆಳೆದಿರುತ್ತಾರೆ. ಆದರೆ ಬಹುತೇಕರಿಗೆ ಇದರ ಔಷಧೀಯ ಉಪಯೋಗಗಳ ಬಗ್ಗೆ ತಿಳಿದಿಲ್ಲ. ದಾಸವಾಳದ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ಕಿವುಚಿ, ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯಬೇಕು.

ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದರ ಎಲೆಯನ್ನು ಬಿಸಿ ಮಾಡಿದ ತೆಂಗಿನೆಣ್ಣೆಗೆ ಹಾಕಿ ಎರಡು ಗಂಟೆ ಬಿಡಿ. ಬಳಿಕ ಸೋಸಿ ತಲೆಗೆ ಹಚ್ಚುವುದರಿಂದ ತಲೆಕೂದಲು ಉದ್ದವಾಗಿ ಬೆಳೆಯುತ್ತದೆ.

ಜೀರ್ಣ ಕ್ರಿಯೆಯನ್ನು ಹೆಚ್ಚಿಸುವ ಈ ಸೊಪ್ಪನ್ನು, ಹೂವನ್ನು ತಂಬುಳಿ ರೂಪದಲ್ಲಿ ಸೇವಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಾದಾಮಿ ಪ್ರಮುಖ ಪಾತ್ರ;

Mon Jan 24 , 2022
ದೇಹಕ್ಕೆ ಆಮ್ಲಜನಕ ಪೂರೈಕೆ ಮತ್ತು ರಕ್ತ ಸಂಚಾರ ಕ್ರಿಯೆ ಚೆನ್ನಾಗಿ ನಡೆಯಬೇಕಾದರೆ ನಿತ್ಯವೂ ಆರೋಗ್ಯಕರ ಆಹಾರ ಸೇವಿಸುವುದು ಬಹಳ ಮುಖ್ಯ. ಮೆದುಳಿನ ಚಟುವಟಿಕೆ ಮತ್ತು ಜ್ಞಾಪಕ ಶಕ್ತಿಯನ್ನು ಹಿಗ್ಗಿಸುವ ಆಹಾರದ ಬಗ್ಗೆ ತಿಳಿಯೋಣ. ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಾದಾಮಿ ಪ್ರಮುಖ ಪಾತ್ರ ವಹಿಸುತ್ತದೆ. ಬಾದಾಮಿ ಪುಡಿಯನ್ನು ಹಾಲಿನೊಂದಿಗೆ ಸೇವಿಸಬೇಕು. ಇಲ್ಲವಾದರೆ ರಾತ್ರಿ ಹೊತ್ತು ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ಸೇವಿಸಬೇಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಒಮೆಗಾ ತ್ರೀ ಫ್ಯಾಟಿ […]

Advertisement

Wordpress Social Share Plugin powered by Ultimatelysocial