ಕಾಂಚನ ರಂಜನಿ ಸಹೋದರಿಯರು!

ಕಾಂಚನ ಸಹೋದರಿಯರು’ ಅಥವಾ ‘ಕಾಂಚನ ರಂಜನಿ ಸಹೋದರಿಯರು’ ಎಂಬ ಹೆಸರಿನಿಂದ ಪ್ರಖ್ಯಾತರಾಗಿರುವವರು ಶ್ರೀರಂಜನಿ ಮತ್ತ ಶ್ರುತಿರಂಜನಿ ಸಹೋದರಿಯರು. ಈ ಸಹೋದರಿಯರಲ್ಲಿ ಹಿರಿಯರಾದ ಕಾಂಚನ ಶ್ರೀರಂಜನಿ ಅವರು ಇಂದು ತಮ್ಮ ಜನ್ಮದಿನ ಆಚರಿಸುತ್ತಿದ್ದಾರೆ.ಶ್ರೀರಂಜನಿ ಮತ್ತು ಶ್ರುತಿರಂಜನಿ ಸಹೋದರಿಯರು ದಕ್ಷಿಣ ಕನ್ನಡ ಜಿಲ್ಲೆಯ ಬಜತೂರು ಗ್ರಾಮದ ಮೂಲದವರು. ಕಾಂಚನ ಶ್ರೀರಂಜನಿ ಅವರ ಜನ್ಮದಿನ ಫೆಬ್ರವರಿ 8. ಶ್ರುತಿರಂಜನಿ ಅವರ ಜನ್ಮದಿನ ಜುಲೈ 15.ಈ ಸಹೋದರಿಯರ ತಾತಂದಿರಾದ ಕಾಂಚನ ವೆಂಕಟಸುಬ್ರಹ್ಮಣ್ಯಂ ಮತ್ತು ತಂದೆ ವಿ. ಸುಬ್ಬರತ್ನಂ ಅವರುಗಳು ಮಹಾನ್ ಸಂಗೀತಗಾರರಾಗಿ ಹೆಸರಾದವರು.ಶ್ರೀರಂಜನಿ ಮತ್ತು ಶ್ರುತಿರಂಜನಿ ಅವರುಗಳು ಮೂರು ವಯಸ್ಸಿನ ಮಕ್ಕಳಾಗಿದ್ದಾಗಲೇ ಮಹಾನ್ ವಯಲಿನ್ ವಾದಕರಾದ ತಂದೆ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂ ಅವರಿಂದ ಸಂಗೀತ ಕಲಿಯಲಾರಂಭಿಸಿದರು. ನಾಲ್ಕನೇ ವಯಸ್ಸಿನಲ್ಲಿರುವಾಗಲೇ ಈ ಸಹೋದರಿಯರಿಗೆ ವೇದಿಕೆಯ ಮೇಲೆ ಹಾಡುವುದು ಅಭ್ಯಾಸವಾಯಿತು.ಸಹೋದರಿಯರಿಬ್ಬರೂ ಉನ್ನತ ಶ್ರೇಣಿಯಲ್ಲಿ ಕಾನೂನು ಪದವಿ ಪಡೆದುದರ ಜೊತೆಗೆ ಸಂಗೀತದಲ್ಲಿ ವಿದ್ವತ್ ಪದವಿಯ ಸಾಧನೆಯನ್ನೂ ಪ್ರಥಮ ರ್ಯಾಂಕ್ ಗಳಿಕೆಯಲ್ಲಿ ಪಡೆದು ಆಕಾಶವಾಣಿಯ ‘ಎ’ ದರ್ಜೆಯ ಕಲಾವಿದರಾದರು. ಸಂಗೀತದಲ್ಲಿ ಗಾಯನ ಮತ್ತು ಪಿಟೀಲು ವಾದನಗಳೆರಡರಲ್ಲೂ ಉನ್ನತ ಪರಿಶ್ರಮದ ಜೊತೆಗೆ ತಮ್ಮ ಸೋದರಮಾವನವರಾದ ಡಾ. ಆರ್. ಎಸ್. ನಂದಕುಮಾರ್ ಅವರ ಮೂಲಕ ಸಂಗೀತಲೋಕದಲ್ಲಿ ಅಪರೂಪದ ಸಾಧನೆಯಾದ “ಅವಧಾನ ಪಲ್ಲವಿ” ಗಾಯನ ಸಾಮರ್ಥ್ಯವನ್ನೂ ತಮ್ಮದಾಗಿಸಿಕೊಂಡವರೆನಿಸಿದ್ದಾರೆ.ನಾಡಿನೆಲ್ಲೆಡೆಯಲ್ಲಿ ಅಲ್ಲದೆ ವಿಶ್ವದ ಅನೇಕ ಪ್ತತಿಷ್ಠಿತ ಉತ್ಸವಗಳಲ್ಲಿ ಮತ್ತು ವೇದಿಕೆಗಳಲ್ಲಿ ಕಾಂಚನ ರಂಜನಿ ಸಹೋದರಿಯರ ಸಂಗೀತ ಕಛೇರಿಗಳು, ಅವರ ವೈವಿಧ್ಯಪೂರ್ಣ ವಿದ್ವತ್ತತೆಯ ಸಂಗೀತ ಪ್ರಸ್ತುತಿಗಳಿಗೆಪ್ರಸಿದ್ಧಿ ಪಡೆದಿವೆ. ಇವರ ಅನೇಕ ಸಂಗೀತದ ಆಲ್ಬಮ್ಗಳು ಸಹಾ ಪ್ರಸಿದ್ಧಿ ಪಡೆದಿವೆ.ಕಾಂಚನ ರಂಜನಿ ಸಹೋದರಿಯರಿಗೆ ಅನನ್ಯ ಯುವ ಪ್ರತಿಭಾ ಪುರಸ್ಕಾರ ಮತ್ತು ಹಲವಾರು ಗೌರವಗಳು ಸಂದಿವೆ.ಕಾಂಚನ ಶ್ರೀರಂಜನಿ ಮತ್ತು ಕಾಂಚನ ಶ್ರುತಿರಂಜನಿ ಸಹೋದರಿಯರ ಸಾಧನೆಯನ್ನು ಅಭಿನಂದಿಸುತ್ತ, ಕಾಂಚನ ಶ್ರೀರಂಜನಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಪ್ಪಿ ಲಾಹಿರಿ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯದಿಂದ ಸಾಯುತ್ತಾನೆ; OSA ಎಂದರೆ ಏನು, ಅದರ ಚಿಹ್ನೆಗಳು ಮತ್ತು ಅಪಾಯಗಳು ಒಳಗೊಂಡಿವೆ

Wed Feb 16 , 2022
    ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಎಂಬುದು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಮಲಗಿರುವ ವ್ಯಕ್ತಿಯು ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಎಂಬುದು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಮಲಗಿರುವ ವ್ಯಕ್ತಿಯು ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ ಗಾಯಕ-ಸಂಯೋಜಕ ಬಪ್ಪಿ ಲಾಹಿರಿ ಇಂದು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ವರದಿಗಳ ಪ್ರಕಾರ, ಅವರು ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ. ಅವರಿಗೆ 69 ವರ್ಷ. ಲಾಹಿರಿ ಅವರು ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು […]

Advertisement

Wordpress Social Share Plugin powered by Ultimatelysocial