‘ಕೋಟಿಗೊಬ್ಬ 3’ ಹಾಡಿನ  ‘ಪಟಾಕಿ ಪೋರಿ’ ಆಶಿಕಾ ರಂಗನಾಥ್​ ಫುಲ್‌ ಖುಷ್

‘ಕೋಟಿಗೊಬ್ಬ 3’ ಬಹು ನಿರೀಕ್ಷೆಯ ಸಿನಿಮಾ ಥಿಯೇಟರ್‌ ಚಿಂದಿ ಚಿತ್ರಾನ್ನ ಮಾಡೊದ್ರಲ್ಲಿ ಅನುಮಾನವಿಲ್ಲಾ .ಇನ್ನು ಈ ಚಿತ್ರದ  ‘ಪಟಾಕಿ ಪೋರಿಯೋ..’ ಹಾಡಿನಲ್ಲಿ ಆಶಿಕಾ ರಂಗನಾಥ್​ ಸುದೀಪ್​ ಜೊತೆ ಹೆಜ್ಜೆ ಹಾಕಿರೊದು ಎಲ್ಲಾರಿಗೂ ಗೊತ್ತಿದೆ. ಇದರ ಲಿರಿಕಲ್​ ವಿಡಿಯೋ ಸೂಪರ್‌ ಹಿಟ್​ ಆಗಿದ್ದು, ವಿಡಿಯೋ ಸಾಂಗ್​ ಕೂಡ ಎಲ್ಲರಿಗೂ ಇಷ್ಟ ಆಗುತ್ತೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.

ಸ್ಯಾಂಡಲ್​ವುಡ್​ ಮಿಲ್ಕಿ ಬ್ಯೂಟಿ  ಆಶಿಕಾ ರಂಗನಾಥ್ ಕೈಯಲ್ಲಿ​ ಹಲವು ಸಿನಿಮಾಗಳಿವೆ. ಕಿಂಚಿತ್ತೂ ಪುತುಸೊತ್ತು ಇಲ್ಲದೇ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಮುರಳಿ ಜೊತೆ ನಟಿಸಿರುವ ‘ಮದಗಜ’ ಚಿತ್ರಕ್ಕೆ ಸದ್ಯ ಡಬ್ಬಿಂಗ್​ ಕೆಲಸ ನಡೆಯುತ್ತಿದ್ದು, ಈ ಚಿತ್ರದಲ್ಲಿ ಆಶಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಬ್ಬಿಂಗ್ ಕೆಲಸದ​ ನಡುವೆಯೂ ಅವರು ಮಾತಿಗೆ ಸಿಕ್ಕಿದ್ದಾರೆ. ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಅವರೊಂದು ವಿಶೇಷ ಹಾಡಿಗೆ ಡ್ಯಾನ್ಸ್​ ಮಾಡಿದ್ದು. ಆ ಚಿತ್ರ ಅಕ್ಟೊಬರ್.14ರಂದು ಬಿಡುಗಡೆ ಆಗುತ್ತಿರೊದು ಅಭಿಮಾನಿಗಳ ಪಾಲಿನ ಮ್ರುಷ್ಟಾನ ಬೋಜನಾ .

‘ನನಗೆ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಡ್ಯಾನ್ಸ್​ ಮಾಡೊ ಅವಕಾಶ ಅನಿರೀಕ್ಷಿತವಾಗಿ ಸಿಕ್ಕಿತು. ಸುದೀಪ್​ ಜೊತೆ ಸ್ಪೆಷಲ್​ ಸಾಂಗ್​ ಮಾಡಬೇಕು ಎಂದಾಗ ಬಹಳ ಎಕ್ಸೈಟ್​ ಆಗಿದ್ದೆ. ಸಿನಿಮಾ ರಿಲೀಸ್​ಗೂ ಮುನ್ನವೇ ‘ಪಟಾಕಿ ಪೋರಿಯೋ..’ ಲಿರಿಕಲ್​ ವಿಡಿಯೋ ಈ ಮಟ್ಟಕ್ಕೆ ಹಿಟ್​ ಆಗಿದೆ.ಇನ್ನು  ವಿಡಿಯೋ ಸಾಂಗ್​ ಕೂಡ ಎಲ್ಲರಿಗೂ ಇಷ್ಟ ಆಗುತ್ತೆ ಎನ್ನುವ ಭರವಸೆ ಇದೆ’ ಎಂದಿದ್ದಾರೆ ಆಶಿಕಾ.

 

Please follow and like us:

Leave a Reply

Your email address will not be published. Required fields are marked *

Next Post

ಕಿರಾಣಿ ಪಾಲುದಾರರಿಗೆ ಫ್ಲಿಪ್ ಕಾರ್ಟ್ ನ  ಬಂಪರ್‌ ಸಹಾಯ

Tue Oct 5 , 2021
ಹಬ್ಬದ ಸೀಸನ್ ಫ್ಲಿಪ್ ಕಾರ್ಟ್ ನ ಕಿರಾಣಿ ವಿತರಣಾ ಪಾಲುದಾರರಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಅತ್ಯದ್ಭುತವಾದ ಅವಕಾಶವನ್ನು ಒದಗಿಸುತ್ತದೆ ಮತ್ತು ಈ ಮೂಲಕ ಅವರ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಸ್ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ತನ್ನ ಕಿರಾಣಿ ಕಾರ್ಯಕ್ರಮವನ್ನು ದಕ್ಷಿಣ ಭಾರತಕ್ಕೂ ವಿಸ್ತರಣೆ ಮಾಡಿದೆ ಹಾಗೂ ಈ ಭಾಗದಲ್ಲಿ 32,000 ಕ್ಕೂ ಅಧಿಕ ಕಿರಾಣಿ ಅಂಗಡಿಗಳನ್ನು ಈ ಉಪಕ್ರಮದ ವ್ಯಾಪ್ತಿಗೆ ತಂದಿದೆ. ಈ […]

Advertisement

Wordpress Social Share Plugin powered by Ultimatelysocial