ಕೋಲಾರ ಜಿಲ್ಲೆಯ ನಿರೀಕ್ಷೆಗಳೇನು? : Karnataka Budget 2023

 

ರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾವಾಗಲೂ ನಿರ್ಲಕ್ಷ್ಯಕ್ಕೆ ಒಳಾಗಾಗುವ ಜಿಲ್ಲೆಗಳಲ್ಲಿ ಕೋಲಾರವು ಒಂದಾಗಿದ್ದು, ಸತತ ಎರಡನೇ ಬಾರಿ ಬಜೆಟ್‌ ಮಂಡಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್‌ ಮೇಲೆ ಕೋಲಾರ ಜಿಲ್ಲೆ ಜನರು ಅತೀವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

 

ಚಿನ್ನದ ನಾಡು ಎಂದೇ ಖ್ಯಾತವಾಗಿರುವ ಜಿಲ್ಲೆ ಕೋಲಾರ. ಇಲ್ಲಿರುವ ಚಿನ್ನ ಗಣಿಗಳು ಜಗದ್ವಿಖ್ಯಾತಿ ಪಡೆದಿವೆ. ಕರ್ನಾಟಕದ ಇತಿಹಾಸದಲ್ಲಿ ಕೋಲಾರ ಮೊದಲು ಗಂಗರ ರಾಜಧಾನಿಯಾಗಿತ್ತು. ಇದನ್ನು ಮೊದಲು ಕುವಲಾಲಪುರ ಎಂದೂ ಕರೆಯುತ್ತಿದ್ದರು. ಇಲ್ಲಿರುವ ಕೋಲಾರಮ್ಮ ದೇವಸ್ಥಾನ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ.

ರೇಷ್ಮೇ, ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎಂದೇ ಕರೆಸಿಕೊಳ್ಳುವ ಕೋಲಾರ ಜನಪರ ಹೋರಾಟಗಳು ಮತ್ತು ಜನಪರ ಸಂಸ್ಕೃತಿಗೂ ಖ್ಯಾತಿ ಪಡೆದಿದೆ. ಆಗಸ್ಟ್ 2007ರಂದು ಚಿಕ್ಕಬಳ್ಳಾಪುರ ಉಪವಿಭಾಗವು ಸ್ವತಂತ್ರ ಜಿಲ್ಲೆಯಾಗಿ ಕೋಲಾರದಿಂದ ವಿಭಜನೆ ಹೊಂದಿತು. ಕೋಲಾರ ಜಿಲ್ಲೆಯ ಜನರಪ್ರಮುಖ ವೃತ್ತಿಯೆಂದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ. ಶಿವಾರ ಪಟ್ಟಣ ಕಲ್ಲಿನಿಂದ ಕೆತ್ತಿರುವ ಶಿಲ್ಪಕಲೆ ಇವೇ ಮೊದಲಾದವು.

ಭೌಗೋಳಿಕವಾಗಿ ಕೋಲಾರ ಜಿಲ್ಲೆಯನ್ನು ಉತ್ತರದಲ್ಲಿ ಪಶ್ಚಿಮ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಂಧ್ರಪ್ರದೇಶದ ಪೂರ್ವ ಮತ್ತು ದಕ್ಷಿಣದಲ್ಲಿ ಚಿತ್ತೂರು ಜಿಲ್ಲೆಯವರು ತಮಿಳುನಾಡಿನ ಕೃಷ್ಣಗಿರಿ ಮತ್ತು ವೆಲ್ಲೂರ್ ಜಿಲ್ಲೆಯಿಂದ ಸುತ್ತುವರಿದಿದ್ದಾರೆ.

ಕೋಲಾರದಲ್ಲಿ ಒಟ್ಟು 5 ತಾಲೂಕುಗಳಿವೆ

1. ಕೋಲಾರ,

2. ಬಂಗಾರಪೇಟೆ,

3. ಮಾಲೂರು,

4. ಮುಳುಬಾಗಿಲು ಹಾಗೂ

5. ಶ್ರೀನಿವಾಸಪುರ.

ಇಲ್ಲಿನ ಜನಸಂಖ್ಯೆ: 2021ರ ಗಣತಿಯಂತೆ 16,35,320,

ಹೋಬಳಿಗಳು: 27

ಒಟ್ಟು ಹಳ್ಳಿಗಳು: 2092

 

ಈ ಬಾರಿಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಹಲವಾರು ನೀರಿಕ್ಷೆಗಳು ಇವೆ. ಇದುವರೆಗೂ ಘೋಷಿಸಿದ ಯೋಜನೆಗಳು ಬಹುತೇಕ ಕಡತಗಳಲ್ಲಿ ಮಾತ್ರವೇ ಇದ್ದು, ಅನುಷ್ಠಾನವಾಗಿಲ್ಲ. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈಗ ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿರುವುದರಿಂದ ನಿರೀಕ್ಷೆ ಹೆಚ್ಚಾಗಿಯೇ ಇದೆ. ಕಳೆದ ಎರಡು ಬಾರಿ ಯಡಿಯೂರಪ್ಪನವರು ಬಜೆಟ್‌ ಮಂಡಿಸಿದಾಗಲೂ ಕೋಲಾರಕ್ಕೆ ಏನೂ ಕೊಟ್ಟಿರಲಿಲ್ಲ. ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್‌ ಮಂಡಿಸಿದಾಗಲೂ ಅಲ್ಲಿ ಬದಲಾವಣೆಯಾಗಲಿಲ್ಲ. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಕಾಲದಲ್ಲಿ ಕೆಸಿ ವ್ಯಾಲಿ ಯೋಜನೆಯನ್ನು ಕೋಲಾರಕ್ಕೆ ನೀಡಿದ್ದರು. ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆ ಇದಾಗಿತ್ತು.

ಪರಮಶಿವಯ್ಯ ವರದಿ ಅನುಷ್ಠಾನ ಮಾಡಿ

 

ನೀರಾವರಿಗೆ ಸಂಬಂಧಿಸಿದಂತೆ ಕೋಲಾರ ಜನ ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ. ಈ ಬೇಡಿಕೆ ತುಂಬಾ ಹಿಂದಿನಿಂದಲೂ ಇದೆ. ಆದರೆ ಯಾವ ಆಡಳಿತಗಾರರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೋಲಾರ ಜಿಲ್ಲೆಗೆ ಅಂತರ್ಜಲ ಸಮಸ್ಯೆ ತುಂಬಾ ಇದೆ. ಹಾಗಾಗಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜನರು ಬೇಡಿಕೆ ಇಟ್ಟಿದ್ದಾರೆ. 800, 900 ಅಡಿಗಳಷ್ಟು ಕೆಲವೆಡೆ ಬೋರು ಕೊರೆದರೂ ನೀರು ಇಲ್ಲಿ ಸಿಗುವುದಿಲ್ಲ. ಹಾಗಾಗಿ ಇಲ್ಲಿಗೆ ನೀರಾವರಿ ಯೋಜನೆ ತುಂಬಾ ಅಗತ್ಯವಾಗಿದೆ.

ಸರ್ಕಾರಿ ಮೆಡಿಕಲ್‌ ಕಾಲೇಜು ಕೊಡಿ

 

ಕೋಲಾರಕ್ಕೆ ಸರ್ಕಾರಿ ಮೆಡಿಕಲ್‌ ಕಾಲೇಜು ಇದುವರೆಗೂ ಆಗೇ ಇಲ್ಲ. ಇಲ್ಲಿನ ಜನರು ಓದಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಅವರೆಲ್ಲ ಬೆಂಗಳೂರು ಸೇರಿದಂತೆ ವಿವಿಧೆಡೆ ಓದಿ ಉದ್ಯೋಗ ಪಡೆದಿದ್ದಾರೆ. ಸರ್ಕಾರಿ ಉದ್ಯೋಗಸ್ಥ ಜನರ ಸಂಖ್ಯೆ ಇಲ್ಲಿ ಕಡಿಮೆ ಇಲ್ಲ. ಹಾಗಾಗಿ ಇಲ್ಲಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಆಗಬೇಕಿದೆ. ಈಗ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಆಗಿರುವುದರಿಂದ ಪ್ರತ್ಯೇಕ ಕ್ಯಾಂಪಸ್‌ ಅಗತ್ಯವಿದೆ. ಸ್ತನಕ್ಯಾನ್ಸರ್‌ ಪತ್ತೆ ಹಚ್ಚುವ ಸಲುವಾಗಿ ಸ್ತನ ರೇಖನ ವ್ಯವಸ್ಥೆ ಯಂತ್ರಗಳನ್ನು ಅಳವಡಿಸಲಾಗುವುದೆಂದು ಘೋಷಿಸಲಾಗಿತ್ತು. ಇವು ರೈತರು ಮತ್ತು ಮಹಿಳೆಯರಸೇವೆಗೆ ದಕ್ಕಿಲ್ಲ.

ಕೋಲ್ಡ್‌ ಸ್ಟೋರೇಜ್‌ ಘಟಕ ಬೇಕು

ಕೋಲಾರಕ್ಕೆ ಸರ್ಕಾರಿ ಮೆಡಿಕಲ್‌ ಕಾಲೇಜು ಇದುವರೆಗೂ ಆಗೇ ಇಲ್ಲ. ಇಲ್ಲಿನ ಜನರು ಓದಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಅವರೆಲ್ಲ ಬೆಂಗಳೂರು ಸೇರಿದಂತೆ ವಿವಿಧೆಡೆ ಓದಿ ಉದ್ಯೋಗ ಪಡೆದಿದ್ದಾರೆ. ಸರ್ಕಾರಿ ಉದ್ಯೋಗಸ್ಥ ಜನರ ಸಂಖ್ಯೆ ಇಲ್ಲಿ ಕಡಿಮೆ ಇಲ್ಲ. ಹಾಗಾಗಿ ಇಲ್ಲಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಆಗಬೇಕಿದೆ. ಈಗ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಆಗಿರುವುದರಿಂದ ಪ್ರತ್ಯೇಕ ಕ್ಯಾಂಪಸ್‌ ಅಗತ್ಯವಿದೆ. ಸ್ತನಕ್ಯಾನ್ಸರ್‌ ಪತ್ತೆ ಹಚ್ಚುವ ಸಲುವಾಗಿ ಸ್ತನ ರೇಖನ ವ್ಯವಸ್ಥೆ ಯಂತ್ರಗಳನ್ನು ಅಳವಡಿಸಲಾಗುವುದೆಂದು ಘೋಷಿಸಲಾಗಿತ್ತು. ಇವು ರೈತರು ಮತ್ತು ಮಹಿಳೆಯರಸೇವೆಗೆ ದಕ್ಕಿಲ್ಲ.

ಕೋಲ್ಡ್‌ ಸ್ಟೋರೇಜ್‌ ಘಟಕ ಬೇಕು

 

ದೇಶ, ವಿದೇಶಗಳಿಗೆ ಕೋಲಾರದಲ್ಲಿ ಬೆಳೆದ ಹೂವು, ಹಣ್ಣು, ತರಕಾರಿಗಳು ರಫ್ತಾಗುತ್ತದೆ. ಮಾಲೂರು, ಮುಳುಬಾಗಿಲು ತಾಲೂಕುಗಳಲ್ಲಿ ಏಷ್ಯಾದಲ್ಲೇ ಅತೀ ಹೆಚ್ಚು ಟೊಮೆಟೋ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಜಿಲ್ಲೆಯ ಮಾವು ಕೂಡ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಮಾವು ಎಂದು ದೇಶ ವಿದೇಶಗಳಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಹಾಗಾಗಿ ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಇಲ್ಲಿ ಕೋಲ್ಡ್‌ ಸ್ಟೋರೇಜ್‌ ಘಟಕದ ಅಗತ್ಯ ತುಂಬಾ ಇದೆ.

ಇಸ್ರೇಲ್‌ ಮಾದರಿಯ ನೀರಾವರಿ ಯಾವಾಗ

ಎಷ್ಟೋ ಬಾರಿ ಇಲ್ಲಿ ರೈತರಿಗೆ ಬೆಂಬಲ ಬೆಲೆಯೇ ಸಿಗುವುದಿಲ್ಲ. ಹೀಗಾಗಿ ರೈತರು ಹತಾಶರಾಗಿ ಬೆಳೆದ ಬೆಳೆಗಳನ್ನು ರಸ್ತೆಯಲ್ಲಿ ಸುರಿದ ಸಾವಿರಾರು ಉದಾಹರಣೆಗಳಿವೆ. ಕೋಲಾರಕ್ಕೆ ಇಸ್ರೇಲ್‌ ಮಾದರಿಯ ನೀರಾವರಿ ಪದ್ಧತಿ ಅಳವಡಿಸಲು 150 ಕೋಟಿ ರೂಪಾಯಿ ಘೋಷಿಸಿ, 5 ಸಾವಿರ ಹೆಕ್ಟೇರ್‌ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎನ್ನಲಾಗಿತ್ತು. ಆದರೆ, ಕೋಲಾರ ರೈತರಿಗೆ ಇಸ್ರೇಲ್‌ ಮಾದರಿ ನೀರಾವರಿಯನ್ನು ಪರಿಚಯಸಲೇ ಇಲ್ಲ. ಇನ್ನು ಯಾವಾಗಲೂ ಘೋಷಿಸಿದ ಜಲಧಾರೆ ಯೋಜನೆಯನ್ನು ಎಲ್ಲಿ ಹುಡುಕಬೇಕು ಎಂದು ಜನರು ಕೇಳುತ್ತಿದ್ದಾರೆ.

ಸರ್ಕಾರವನ್ನು ಎಚ್ಚರಿಸುವ ಸಂಘಟನೆಗಳು

ಕೋಲಾರದ ಜನರು, ಸಂಘಟನೆಗಳು ಯಾವಾಗಲೂ ಸರ್ಕಾರವನ್ನು ಎಚ್ಚರಿಸುತ್ತಾ ಬೇಡಿಕೆಗಳನ್ನು ಮಂಡಿಸುತ್ತಲೇ ಇದ್ದಾರೆ. ರೈತ ಸಂಘ, ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ, ಅಂಗನಾಡಿ, ಬಿಸಿಯೂಟ ನೌಕರರ ಸಂಘ ಮತ್ತಿತರ ಸಂಘಟನೆಗಳು ಈಗಾಗಲೇ ತಮ್ಮ ಬೇಡಿಕೆಗಳ ಕುರಿತು ಸುದ್ದಿಗೋಷ್ಠಿ ಅಥವಾ ಪ್ರತಿಭಟನೆ ಮಾಡಿ ಮನವಿ ನೀಡುವಿಕೆ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿವೆ. ಇವೆಲ್ಲಕ್ಕೂ ಸರ್ಕಾರ ಸ್ಪಂದಿಸಬೇಕಿದೆ.

ಆಗದಿದ್ದರೆ ಆಂಧ್ರ ಪ್ರದೇಶಕ್ಕೆ ಸೇರಿಸಿಬಿಡಿ

ಕೋಲಾರ ಜಿಲ್ಲೆಯನ್ನು ಹಲವಾರು ವರ್ಷಗಳಿಂದಲೂ ಅನುದಾನ ನೀಡದೆ ನಿರಾಸೆಗೊಳಿಸುತ್ತಿರುವುದು ಜಿಲ್ಲೆಯ ಜನರಲ್ಲಿ ಆಕ್ರೋಶ ಕಾರಣವಾಗಿದೆ. ಇದೇ ಕಾರಣಕ್ಕಾಗಿ ರೈತ ಸಂಘಟನೆಗಳು ಕೋಲಾರ ಜಿಲ್ಲೆಯನ್ನುಈ ರೀತಿ ಕಡೆಗಣಿಸುವ ಬದಲು ಆಂಧ್ರ ಪ್ರದೇಶಕ್ಕೆ ಸೇರಿಸಿಬಿಡಿ ಎಂದ ಕೂಗನ್ನು ಎಬ್ಬಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ತಮ್ಮ ಶಾಸಕರಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ನಿರ್ಲಕ್ಷಿಸಿದೆ ಎಂಬ ಆರೋಪವು ಸರ್ಕಾರದ ಮೇಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ?

Tue Feb 14 , 2023
ಕಿರುತೆರೆಯ ಲವ್ ಬರ್ಡ್ಸ್ ನಟಿ ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಫೆಬ್ರವರಿ 12ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪ್ರೀತಿಗೆ ಮದುವೆ ಎಂಬ 3 ಗಂಟಿನೊಂದಿಗೆ ಜೊತೆಯಾಗಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ಅದಿತಿ ಮತ್ತು ಪಾರು ಧಾರಾವಾಹಿಯ ಪ್ರೀತು ಮದುವೆ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದೆ. ಪ್ರಿಯಾ-ಸಿದ್ದು ತಮ್ಮ ಲವ್ ಹುಟ್ಟಿದ್ದು ಹೇಗೆ? ಮೊದಲು ಯಾರ ಮನೆಯಲ್ಲಿ ಗೊತ್ತಾಯ್ತು ಎಂದು ಸ್ಟಾರ್ ಸುವರ್ಣದ ‘ಸುರ್ವಣ ಪ್ರೇಮೋತ್ಸವ’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial