ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ?

ಕಿರುತೆರೆಯ ಲವ್ ಬರ್ಡ್ಸ್ ನಟಿ ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಫೆಬ್ರವರಿ 12ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಪ್ರೀತಿಗೆ ಮದುವೆ ಎಂಬ 3 ಗಂಟಿನೊಂದಿಗೆ ಜೊತೆಯಾಗಿದ್ದಾರೆ.

ಗಟ್ಟಿಮೇಳ ಧಾರಾವಾಹಿಯ ಅದಿತಿ ಮತ್ತು ಪಾರು ಧಾರಾವಾಹಿಯ ಪ್ರೀತು ಮದುವೆ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದೆ.

ಪ್ರಿಯಾ-ಸಿದ್ದು ತಮ್ಮ ಲವ್ ಹುಟ್ಟಿದ್ದು ಹೇಗೆ? ಮೊದಲು ಯಾರ ಮನೆಯಲ್ಲಿ ಗೊತ್ತಾಯ್ತು ಎಂದು ಸ್ಟಾರ್ ಸುವರ್ಣದ ‘ಸುರ್ವಣ ಪ್ರೇಮೋತ್ಸವ’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇಬ್ಬರಿಗೂ ಪ್ರೀತಿ ಇತ್ತು. ಆದ್ರೆ ಹೇಳಿಕೊಳ್ಳೋಕೆ ನಾಚಿಕೆ ಇತ್ತು. ಇಬ್ಬರು ತುಂಬಾ ದಿನ ಜೊತೆಗೆ ಓಡಾಡಿಕೊಂಡಿದ್ದೆವು. ಮೊದಲು ಮನೆಯಲ್ಲಿ ನಮ್ಮ ಪ್ರೀತಿ ವಿಷ್ಯ ಗೊತ್ತಾಯ್ತು ಎಂದು ಹೇಳಿದ್ದಾರೆ.

ಸಿದ್ದು ಯಾವಾಗಲೂ ಪ್ರಿಯಾಗಾಗಿ ಕವನ ಬರೆಯುತ್ತಿದ್ರಂತೆ. ಅದನ್ನು ಮ್ಯೂಸಿಕ್ ಹಾಕಿ ಕಳಿಸಿದ್ರಂತೆ. ಅದನ್ನು ಪ್ರಿಯಾ ಅವರ ಕುಟುಂಬ ಟ್ರಿಪ್ ಹೋಗುವಾಗ ಕೇಳಿಸಿಕೊಂಡಿದ್ರಂತೆ.

ಕಾರಿನಲ್ಲಿ 2 ತಾಸಿನ ಪ್ರಯಾಣ ಅದಾಗಿತ್ತು. ಆ ಕವನ ಕೇಳಿದ ಮೇಲೆ 2 ತಾಸು ಯಾರು ಮಾತನಾಡಿಲ್ಲ. ಸುಮ್ಮನೆ ಮನೆ ತನಕ ಹೋಗಿದ್ವಿ. ಆಮೇಲೆ ನಮ್ಮ ತಂದೆ ಕೇಳಿದ್ರು ಎಂದು ಪ್ರಿಯಾ ಹೇಳಿದ್ದಾರೆ.

ಆನಂತರ ಪ್ರಿಯಾ ತಂದೆ ಮತ್ತು ಸಿದ್ದು ತಂದೆ ಒಮ್ಮೆ ಭೇಟಿಯಾದಾಗ ಮದುವೆ ಬಗ್ಗೆ ಮಾತನಾಡಿದ್ರಂತೆ. ನಮಗಿಂತ ಮುಂಚೆ ಮನೆಯವರೇ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗೆ ಒಳ್ಳೆಯದಾಗಲಿ ಎಂದು ಎಲ್ಲರೂ ವಿಶ್ ಮಾಡಿದ್ದಾರೆ. ಮದುವೆಗೆ ಹಲವು ಕಲಾವಿದರು ಬಂದು ಶುಭಕೋರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್‌ ಬೆನ್ನಲ್ಲೇ ಮತ್ತೊಂದು ಸಾಂಕ್ರಮಿಕ ರೋಗ ಪತ್ತೆ

Tue Feb 14 , 2023
      ವಿಶ್ವ ಆರೋಗ್ಯ ಸಂಸ್ಥೆ: ವಿಶ್ವ ಆರೋಗ್ಯ ಸಂಸ್ಥೆಯು ಈಕ್ವಟೋರಿಯಲ್ ಗಿನಿಯಾದಲ್ಲಿ ಮೊಟ್ಟಮೊದಲ ಬಾರಿಗೆ ಮಾರ್ಬರ್ಗ್ ಕಾಯಿಲೆಯ ಏಕಾಏಕಿ ಎಬೋಲಾ-ಸಂಬಂಧಿತ ವೈರಸ್ ದೇಶದಲ್ಲಿ ಕನಿಷ್ಠ ಒಂಬತ್ತು ಸಾವುಗಳಿಗೆ ಕಾರಣವಾಗಿದೆ ಎಂದು ದೃಢಪಡಿಸಿದೆ. ಕಳೆದ ವಾರ ಈಕ್ವಟೋರಿಯಲ್ ಗಿನಿಯಾದ ಮಾದರಿಗಳನ್ನು ಸೆನೆಗಲ್‌ನ ಲ್ಯಾಬ್‌ಗೆ ಕಳುಹಿಸಿದ ನಂತರ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವನ್ನು ದೃಢಪಡಿಸಿದೆ. ಪ್ರಸ್ತುತ ಒಂಬತ್ತು ಸಾವುಗಳು ಮತ್ತು ಜ್ವರ, ಆಯಾಸ, ಅತಿಸಾರ ಮತ್ತು ವಾಂತಿ ಸೇರಿದಂತೆ ರೋಗಲಕ್ಷಣಗಳೊಂದಿಗೆ […]

Advertisement

Wordpress Social Share Plugin powered by Ultimatelysocial