ಕೋವಿಡ್ ಆಸ್ಪತ್ರೆಯಲ್ಲಿ ಆತ್ಮಹತ್ಯೆ ನೇಣಿಗೆ ಶರಣಾದ ಕೋವಿಡ್ ಸೋಂಕಿತ ಮಹಿಳೆ

ತನಗೆ ಕೋವಿಡ್-೧೯ ಸೋಂಕು ತಾಗಿರುವ ಕಾರಣದಿಂದ ನೊಂದು ಸೋಂಕಿತ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಇಂದು ಮುಂಜಾನೆ ಮಹಿಳೆಯೋರ್ವರು ಆಸ್ಪತ್ರೆಯ ಬಾತ್ ರೂಮ್ ನಲ್ಲಿ ತನ್ನ ಸೀರೆಯನ್ನು ಬಳಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ೬೦ ವರ್ಷ ಪ್ರಾಯದ ಮಹಿಳೆ ಕುಣಿಗಲ್ ಮೂಲದವರಾಗಿದ್ದು ಸದ್ಯ ರಾಜಗೋಪಾಲ ನಗರದಲ್ಲಿ ವಾಸವಾಗಿದ್ದರು. ಇದೇ ತಿಂಗಳ ೧೮ರಂದು ಇವರಿಗೆ ಕೋವಿಡ್-೧೯ ಸೋಂಕು ಪಾಸಿಟಿವ್ ಕಂಡು ಬಂದಿತ್ತು. ಹೀಗಾಗಿ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಹಿಳೆಯ ಮಗ, ಸೊಸೆ ಮತ್ತು ಮೊಮ್ಮಗುವಿಗೂ ಕೋವಿಡ್ ಸೋಂಖು ದೃಢಪಟ್ಟಿದೆ. ಈ ಕಾರಣದಿಂದ ನೊಂದು ಮಹಿಳೆ ಇಂತಹ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ. ಮಲ್ಲಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸೋಂಕಿತರ ಉಚಿತ ಚಿಕಿತ್ಸೆಗೆ ಡಿಕೆಶಿ ಆಗ್ರಹ

Fri Jun 26 , 2020
ಕೋವಿಡ್-೧೯ ವಿಚಾರದಲ್ಲಿ ಬಡವರು, ಶ್ರೀಮಂತರು, ಅಧಿಕಾರಿಗಳು, ಸಾಮಾನ್ಯ ಜನರು ಎಂದು ಭೇದ-ಭಾವ ಮಾಡದೇ ಎಲ್ಲರಿಗೂ ಸಮಾನವಾಗಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರಕಾರಕ್ಕೆ ಆಗ್ರಹಿಸಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು ಎಂಬ ದೃಷ್ಟಿಯಿಂದ ಆರೋಗ್ಯ ಕರ್ನಾಟಕ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ತಂದಿದೆ. ಇವೆಲ್ಲ […]

Advertisement

Wordpress Social Share Plugin powered by Ultimatelysocial