ಕ್ಯಾಶ್​ಬ್ಯಾಕ್(Cash Back) ​ ಹಾಗೂ ಗಿಫ್ಟ್​ ವೋಚರ್​ಗಳು ಸರಕು ಮತ್ತು ಸೇವೆಗಳಡಿಯಲ್ಲಿ ಬರುವುದಿಲ್ಲ: ಕರ್ನಾಟಕ ಹೈಕೋರ್ಟ್

 

ಕ್ಯಾಶ್​ಬ್ಯಾಕ್(Cash Back) ​ ಹಾಗೂ ಗಿಫ್ಟ್​ ವೋಚರ್​ಗಳು ಸರಕು ಮತ್ತು ಸೇವೆಗಳಡಿಯಲ್ಲಿ ಬರುವುದಿಲ್ಲ ಹೀಗಾಗಿ ಇವುಗಳು ಜಿಎಸ್​ಟಿ (GST)ವ್ಯಾಪ್ತಿಗೆ ಸೇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆಕ್ಯಾಶ್​ಬ್ಯಾಕ್(Cash Back) ​ ಹಾಗೂ ಗಿಫ್ಟ್​ ವೋಚರ್​ಗಳು ಸರಕು ಮತ್ತು ಸೇವೆಗಳಡಿಯಲ್ಲಿ ಬರುವುದಿಲ್ಲ ಹೀಗಾಗಿ ಇವುಗಳು ಜಿಎಸ್​ಟಿ (GST)ವ್ಯಾಪ್ತಿಗೆ ಸೇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ಮತ್ತು ಶಿವಶಂಕರೇಗೌಡ ಅವರ ಪೀಠವು ಜನವರಿ 16 ರಂದು ಈ ತೀರ್ಪು ನೀಡಿತು. ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಅಥವಾ ಗ್ರಾಹಕರಿಗೆ ಗಿಫ್ಟ್​ ವೋಚರ್​ಅಥವಾ ಕ್ಯಾಶ್​ಬ್ಯಾಕ್​ ಅನ್ನು ಪ್ರೋತ್ಸಾಹಕವಾಗಿ ನೀಡುತ್ತಾರೆ ಹಾಗಾಗಿ ಅದನ್ನು ಜಿಎಸ್​ಟಿ ವ್ಯಾಪ್ತಿಗೆ ತರಬಾರದು ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರು, ಮೌಲ್ಯಮಾಪಕರು, M/s ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್, ಗಿಫ್ಟ್ ವೋಚರ್‌ಗಳು, ಕ್ಯಾಶ್ ಬ್ಯಾಕ್ ವೋಚರ್‌ಗಳು ಮತ್ತು ಇ-ವೋಚರ್‌ಗಳನ್ನು ಒಳಗೊಂಡಂತೆ ಪ್ರಿ-ಪೇಯ್ಡ್​ ಪೇಮೆಂಟ್ ಇನ್​ಸ್ಟ್ರುಮೆಂಟ್​ಗಳನ್ನು ವಿತರಕರುಗಳಿಂದ ಪಡೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಗ್ರಾಹಕರಿಗೆ ಪೂರೈಸುತ್ತಾರೆ.

ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಅಥವಾ ಪ್ರಚಾರದ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಈ ಗಿಫ್ಟ್​ ಕೂಪನ್​ಗಳನ್ನು ನೀಡಲಾಗುತ್ತದೆ. ಡೆಬಿಟ್ ಹಾಗೂ ಕ್ರೆಡಿಟ್​ ಕಾರ್ಡ್​ಗಳ ಪ್ರಾಮುಖ್ಯತೆಯನ್ನು ಅಲ್ಲಗಳೆಯುವಂತಿಲ್ಲ, ಕೆಲವೊಂದು ಮಳಿಗೆಗಳಲ್ಲಿ ಇಂತಿಷ್ಟು ಮೌಲ್ಯದ ವಸ್ತುಗಳನ್ನು ಕೊಂಡರೆ ಒಂದಷ್ಟು ಹಣವನ್ನು ಕ್ಯಾಶ್​ಬ್ಯಾಕ್​ ರೂಪದಲ್ಲಿ ನೀಡಲಾಗುತ್ತದೆ. ಕೆಲವೊಂದು ಮಳಿಗೆಗಳಲ್ಲಿ ಕ್ರೆಡಿಟ್ ಕಾರ್ಡ್​ ಬಳಕೆ ಮಾಡಿ ವಸ್ತುಗಳನ್ನು ಕೊಂಡರೆ ಕ್ಯಾಶ್​ಬ್ಯಾಕ್ ಸಿಗುತ್ತದೆ.

ಇನ್ನೂ ಕೆಲವು ಕಡೆ ಇಂತಿಷ್ಟು ದಿನದೊಳಗೆ ಆ ವಸ್ತುಗಳನ್ನು ಖರೀದಿಸಿದರೆ ಇಂತಿಷ್ಟು ಹಣವನ್ನು ಹಿಂದಿರುಗಿಸಲಾಗುವುದು ಎಂದು ಫಲಕ ಅಳವಡಿಸಿರುತ್ತಾರೆ. ಇನ್ನೂ ಕೆಲವು ಕಡೆ ಗಿಫ್ಟ್​ ವೋಚರ್​ಗಳನ್ನು ನೀಡಿ ಯಾವುದೋ ಅವಧಿಯೊಳಗೆ ಖರೀದಿಸಬೇಕು ಎಂದು ಗಡುವು ನೀಡಿರುತ್ತಾರೆ. ಆದರೆ ಇದ್ಯಾವುದೂ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ ಅದಕ್ಕೆ ವಿನಾಯಿತಿ ನೀಡಲಾಗುವುದು ಎಂದು ಕೋರ್ಟ್​ ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದೀಗ ಇಂದಿನಿಂದ ಎರಡು ದಿನಗಳ ಕಾಲ ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಸಿಗಲಿದೆ.

Thu Feb 16 , 2023
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ‘ಏರ್ ಶೋ’ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇದೀಗ ಇಂದಿನಿಂದ ಎರಡು ದಿನಗಳ ಕಾಲ ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಸಿಗಲಿದೆ. ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗಷ್ಟೇ ಏರ್ ಶೋ ವೀಕ್ಷಣೆಗೆ ಅವಕಾಶ ಲಭ್ಯವಾಗಲಿದ್ದು, ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಏರ್ ಶೋನಲ್ಲಿ ಸಾರಂಗ್ ಹೆಲಿಕಾಪ್ಟರ್, ಸೂರ್ಯ ಕಿರಣ್ […]

Advertisement

Wordpress Social Share Plugin powered by Ultimatelysocial