ಮನೋಜ್​ ಬಾಜಪಾಯಿ ಅವರಿಗೆ ಈಗ ಸಖತ್ ಬೇಡಿಕೆ ಇದೆ.

 
ಮನೋಜ್​ ಬಾಜಪಾಯಿ ಅವರಿಗೆ ಈಗ ಸಖತ್ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಶ್ರೀಮಂತಿಕೆಯೂ ಬಂದಿದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅವರ ಬಳಿ ಶೂ ಕೂಡ ಇರಲಿಲ್ಲ. ನಟ ಶಾರುಖ್​ ಖಾನ್​  ಅವರನ್ನು ಸಿನಿಮಾಗಳಲ್ಲಿ ನೋಡಿ ಅಭಿಮಾನಿಗಳು ಎಂಜಾಯ್​ ಮಾಡುತ್ತಾರೆ.

ಆದರೆ ಅವರ ರಿಯಲ್​ ಲೈಫ್​ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಗೊತ್ತಿರುವುದು ಕೆಲವೇ ಮಂದಿಗೆ ಮಾತ್ರ .ಕಿಂಗ್​ ಖಾನ್ಜೊತೆ ಒಡನಾಡಿದ ಎಲ್ಲರಿಗೂ ಅವರ ನಿಜವಾದ ವ್ಯಕ್ತಿತ್ವದ ಪರಿಚಯ ಆಗಿರುತ್ತದೆ. ಆ ಬಗ್ಗೆ ಅನೇಕ ಸೆಲೆಬ್ರಿಟಿಗಳು ಹೇಳಿಕೊಂಡಿದ್ದುಂಟು. ಈಗ ನಟ ಮನೋಜ್​ ಬಾಜಪಾಯಿ ಕೂಡ ಶಾರುಖ್​ ಖಾನ್​ ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾರಿಗೆ ಮನೋಜ್​ ಅವರನ್ನು ಡಿಸ್ಕೋಟೆಕ್​ಗೆ  ಕರೆದುಕೊಂಡು ಹೋಗಿದ್ದೇ ಶಾರುಖ್​ ಖಾನ್​. ಆ ನೆನಪುಗಳನ್ನು ಅವರೀಗ ಮೆಲುಕು ಹಾಕಿದ್ದಾರೆ.

ಬಿಹಾರದ ಹಳ್ಳಿಯಿಂದ ಬಂದವರು ಮನೋಜ್​ ಬಾಜಪಾಯಿ. ರಂಗಭೂಮಿಯಲ್ಲಿ ಅನುಭವ ಹೊಂದಿದ್ದ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟು ಅತ್ಯುತ್ತಮ ನಟ ಎನಿಸಿಕೊಂಡರು. ಈಗ ಅವರಿಗೆ ಸಖತ್ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಶ್ರೀಮಂತಿಕೆಯೂ ಬಂದಿದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅವರ ಬಳಿ ಶೂ ಕೂಡ ಇರಲಿಲ್ಲ.

 ‘ತುಂಬ ವರ್ಷಗಳ ಹಿಂದೆ ದೆಹಲಿಯಲ್ಲಿ ಗುಂಗ್ರೂ ಎಂಬ ನೈಟ್​ ಕ್ಲಬ್​ ಇತ್ತು. ಆ ಸಮಯದಲ್ಲಿ ನಾನು ಚಪ್ಪಲಿ ಧರಿಸಿ ನಿಂತಿದ್ದೆ. ನಂತರ ನನಗೋಸ್ಕರ ಶೂಗಳ ವ್ಯವಸ್ಥೆ ಮಾಡಿಸಲಾಯಿತು. ಶಾರುಖ್​ ಖಾನ್ ಅವರು ನನ್ನನ್ನು ಡಿಸ್ಕೋಟೆಕ್​ ಒಳಗೆ ಕರೆದುಕೊಂಡು ಹೋದರು. ಅದೇ ಮೊದಲ ಬಾರಿಗೆ ನಾನು ಅದನ್ನು ನೋಡಿದ್ದು’ ಎಂದು ಮನೋಜ್​ ಬಾಜಪಾಯಿ ಹೇಳಿದ್ದಾರೆ.

ಮನೆಗೆ ಬಂದ ಅತಿಥಿಗಳಿಗೆ ಶಾರುಖ್​ ಸತ್ಕಾರ:

ಮುಂಬೈನಲ್ಲಿ ಶಾರುಖ್​ ಖಾನ್ ಅವರ ಐಷಾರಾಮಿ ಬಂಗಲೆ ಇದೆ. ಇದಕ್ಕೆ ‘ಮನ್ನತ್​’ ಎಂದು ಹೆಸರು. ‘ಮನ್ನತ್​’ಗೆ ಬರುವ ಎಲ್ಲ ಅತಿಥಿಗಳನ್ನು ಶಾರುಖ್ ಖಾನ್​ ಅವರು ತುಂಬ ಆತ್ಮೀಯವಾಗಿ ಉಪಚರಿಸುತ್ತಾರೆ. ಅದರ ಅನುಭವ ಹಲವರಿಗೆ ಆಗಿದೆ. ಇತ್ತೀಚೆಗೆ ‘ದಿ ರೊಮ್ಯಾಂಟಿಕ್ಸ್​’ ನಿರ್ದೇಶಕಿ ಸ್ಮೃತಿ ಮುಂದ್ರಾ ಕೂಡ ಆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ಶಾರುಖ್​ ಖಾನ್​ ಅವರು ಎಂತಹ ವ್ಯಕ್ತಿ ಎಂಬುದನ್ನು ಈ ಘಟನೆ ವಿವರಿಸುತ್ತದೆ. ಅವರು ನೀಡಿದ ಆತಿಥ್ಯ ಅತ್ಯುನ್ನತವಾಗಿತ್ತು. ತಮ್ಮ ತಂಡದಲ್ಲಿ ತುಂಬ ಜನರು ಇದ್ದೆವು. ಎಲ್ಲರಿಗೂ ಶಾರುಖ್​ ಖಾನ್​ ಮನೆಯಲ್ಲಿ ಚಹ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ನಾವು ಇರುವ ರೂಮಿನ ಒಳಗೆ ಅವರು ಬಂದರು. ಆಗ ನನಗೆ ಅಚ್ಚರಿ ಕಾದಿತ್ತು. ನಮ್ಮ ತಂಡದ ಪ್ರತಿಯೊಬ್ಬರ ಹೆಸರನ್ನೂ ಶಾರುಖ್​ ಖಾನ್​ ತಿಳಿದುಕೊಂಡಿದ್ದರು. ಎಲ್ಲರ ಹೆಸರು ಕರೆದು ಮಾತನಾಡಿಸಿದರು. ಪ್ರತಿಯೊಬ್ಬರ ಕೆಲಸ ಮತ್ತು ಸಮಯಕ್ಕೆ ಗೌರವ ನೀಡಿದರು’ ಎಂದು ಸ್ಮೃತಿ ಮುಂದ್ರಾ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂಗನಾ ತಾಯಿ ಈಗೇನು ಮಾಡುತ್ತಿದ್ದಾರೆ?

Tue Feb 28 , 2023
ಆಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ.ನಟಿ ಕಂಗನಾ ರಣಾವತ್  ಅವರು ಬಾಲಿವುಡ್​ನಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಿರ್ದೇಶನ, ನಿರ್ಮಾಣಕ್ಕೂ ಇಳಿದಿದ್ದಾರೆ. ಮರ ಸುತ್ತುವ ಪಾತ್ರದಿಂದ ದೂರವೇ ಇರುವ ಕಂಗನಾ,ಹಲವು ಪ್ರಯೋಗಾತ್ಮಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಬಯೋಪಿಕ್, ಆಯಕ್ಷನ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಯಶಸ್ಸು ಪಡೆದರೂ ಅವರ ತಾಯಿ ಮಾತ್ರ […]

Advertisement

Wordpress Social Share Plugin powered by Ultimatelysocial