ಕಂಗನಾ ತಾಯಿ ಈಗೇನು ಮಾಡುತ್ತಿದ್ದಾರೆ?

ಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ.ನಟಿ ಕಂಗನಾ ರಣಾವತ್  ಅವರು ಬಾಲಿವುಡ್​ನಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಿರ್ದೇಶನ, ನಿರ್ಮಾಣಕ್ಕೂ ಇಳಿದಿದ್ದಾರೆ. ಮರ ಸುತ್ತುವ ಪಾತ್ರದಿಂದ ದೂರವೇ ಇರುವ ಕಂಗನಾ,ಹಲವು ಪ್ರಯೋಗಾತ್ಮಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಬಯೋಪಿಕ್, ಆಯಕ್ಷನ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಯಶಸ್ಸು ಪಡೆದರೂ ಅವರ ತಾಯಿ ಮಾತ್ರ ಹಳ್ಳಿಯಲ್ಲೇ ಇದ್ದಾರೆ. ಈ ಬಗ್ಗೆ ಕಂಗನಾ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಅವರ ತಾಯಿ ಆಶಾಗೆ  ಈಗಲೂ ಹಳ್ಳಿಯ ಜೀವನ, ಕೃಷಿಯೇ ಇಷ್ಟವಂತೆ.

ಆಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ. ‘ನನ್ನ ತಾಯಿ ಶ್ರೀಮಂತೆ ಅಲ್ಲ. ನಾನು ರಾಜಕೀಯ, ಬಿಸ್ನೆಸ್ ಹಿನ್ನೆಲೆ ಇಂದ ಬಂದವನು. ನನ್ನ ತಾಯಿ ಕಳೆದ 25 ವರ್ಷಗಳಿಂದ ಶಿಕ್ಷಕಿ ಆಗಿದ್ದಾರೆ. ನನಗೆ ಇಷ್ಟೊಂದು ಆಯಟಿಟ್ಯೂಡ್ ಎಲ್ಲಿಂದ ಬಂದಿದೆ, ನಾನೇಕೆ ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬುದನ್ನು ಫಿಲ್ಮ್ ಮಾಫಿಯಾ ಅರಿತುಕೊಳ್ಳಬೇಕು’ ಎಂದು ಕಂಗನಾ ಹೇಳಿದ್ದಾರೆ.

‘ನನ್ನ ತಾಯಿ ಏಳು ಗಂಟೆ ಕೃಷಿ ಮಾಡುತ್ತಾರೆ. ಯಾರಾದರೂ ಕಂಗನಾ ತಾಯಿ ಎಂದು ಭೇಟಿ ಮಾಡಲು ಬಂದರೆ ಅವರಿಗೆ ಚಹ ಹಾಗೂ ಸ್ನಾಕ್ಸ್ ಕೊಡುತ್ತಾರೆ. ‘ಕಂಗನಾ ತಾಯಿ ಇವರೇನಾ?’ ಎಂದು ಬಂದವರಿಗೆ ಶಾಕ್ ಆಗುತ್ತದೆ. ನೀವು ಏಕೆ ಚಹ ಮಾಡಿ ಕೊಡಬೇಕು ಎಂದು ನನ್ನ ತಾಯಿಗೆ ಒಮ್ಮೆ ಕೇಳಿದ್ದೆ. ನಿನ್ನನ್ನು ಪ್ರೀತಿ ಮಾಡುವವರ ಸೇವೆ ಮಾಡುವುದು ನನಗೆ ಸಿಕ್ಕ ಅದೃಷ್ಟ ಎಂದು ಹೇಳಿದ್ದರು’ ಎಂಬುದಾಗಿ ಕಂಗನಾ ಬರೆದುಕೊಂಡಿದ್ದಾರೆ.

‘ನನ್ನ ತಾಯಿಗೆ ಮುಂಬೈ ಎಂದರೆ ಇಷ್ಟವಿಲ್ಲ. ವಿದೇಶಕ್ಕೆ ಹೋಗೋಕೆ ಅವರಿಗೆ ಮನಸ್ಸಿಲ್ಲ. ನಾವು ಒತ್ತಾಯ ಮಾಡಿದರೆ ಬೈಗುಳ ಪಡೆಯಬೇಕು. ಅವರಿಗೆ ಮನೆ ಊಟ ಎಂದರೆ ಇಷ್ಟ’ ಎಂದು ಕಂಗನಾ ಟ್ವಿಟರ್​ನಲ್ಲಿ ವಿವರಿಸಿದ್ದಾರೆ.

 ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ನಿರ್ಮಾಣಕ್ಕಾಗಿ ಕಂಗನಾ ಇಷ್ಟು ವರ್ಷ ದುಡಿದ ಹಣವನ್ನೆಲ್ಲ ಹೂಡಿಕೆ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧ್ರುವನ ಕೆನ್ನೆಗೆ ಮುತ್ತು ಕೊಟ್ಟ ಅದಿತಿ!

Tue Feb 28 , 2023
ಗಟ್ಟಿಮೇಳ ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಅಮೂಲ್ಯ ಹಾಗೂ ವಿಕ್ರಾಂತ್ ಸುಹಾಸಿನಿ ಹುಟ್ಟು ಅಡಗಿಸುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ, ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಕಾದು ನೋಡಬೇಕಿದೆ. ಸುಹಾಸಿನಿ ವೇದಾಂತ್ ಜೊತೆ ಬಹಳ ಅನ್ಯೋನ್ಯವಾಗಿ ಇರುವ ಹಾಗೆ ನಟನೆ ಮಾಡುತ್ತಾಳೆ. ಆದರೆ ಆಕೆಯ ಮನಸ್ಸಲ್ಲಿ ಆತನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಇದನ್ನೆಲ್ಲ ನೋಡಿ ವಿಕ್ರಾಂತ್ ಹಾಗೂ ಅಮೂಲ್ಯಗೆ ಸುಹಾಸಿನಿ ಬಂಡವಾಳವನ್ನು ಹೇಗಾದರೂ […]

Advertisement

Wordpress Social Share Plugin powered by Ultimatelysocial