ಚಾರ್​ಧಾಮ್​ ಯಾತ್ರೆ ವೇಳೆ 201 ಯಾತ್ರಿಕರ ಸಾವು,

ಡೆಹರಾಡೂನ್,ಜೂ.27- ಉತ್ತರಾಖಂಡದ ಚಾರ್​ಧಾಮ್ ಯಾತ್ರೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಉತ್ತರಖಂಡ್ ಸರ್ಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇದಲ್ಲಿ ಹೆಚ್ಚಿನವರು ವೃದ್ದರೇ ಆಗಿದ್ದು, ವೈದ್ಯಕೀಯ ಚಿಕಿತ್ಸಾ ಆಹಾರದ ಕೊರತೆ ಇದ್ದವರೇ ಆಗಿದ್ದಾರೆ ಎಂದು ತಿಳಿಸಿದೆ.

ಭಾರೀ ಮಳೆ ಮತ್ತು ಅಲ್ಲಿಲ್ಲಿನ ಭೂಕುಸಿತಗಳು ಸುಗಮ ಯಾತ್ರೆ ನಡೆಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕೇದಾರನಾಥ ಯಾತ್ರೆ ಮಾರ್ಗದಲ್ಲಿ 95, ಬದರಿನಾಥ ಧಾಮದಲ್ಲಿ 51, ಗಂಗೋತ್ರಿಯಲ್ಲಿ 13 ಮತ್ತು ಯಮುನೋತ್ರಿಯಲ್ಲಿ 42 ಯಾತ್ರಿಕರು ಸಾವನ್ನಪ್ಪಿದ್ದಾರೆ.

ಇಲಾಖೆಯು ಮೊದಲ ಬಾರಿಗೆ ಒಂಬತ್ತು ಸ್ಥಳಗಳಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆ ಸಲಾಗಿದೆ. ಕರಪತ್ರಗಳು ಮತ್ತು ಇತರ ವಿಧಾನಗಳ ಮೂಲಕ ನಿಯಮಿತವಾಗಿ ಆರೋಗ್ಯ ಸಲಹೆಗಳನ್ನು ನೀಡಲಾಗುತ್ತಿದೆ. ಯಾತ್ರಾರ್ಥಿಗಳಿಗೆ, ವಿಶೇಷವಾಗಿ ವೃದ್ಧರಿಗೆ ಯಾತ್ರೆಯಲ್ಲಿನ ಅಪಾಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಚಾರ್ ಧಾಮ್ ಮಾರ್ಗಗಳಲ್ಲಿ 12 ವೈದ್ಯರನ್ನು ನಿಯೋಜಿಸಲಾಗಿದೆ. ಅಸ್ವಸ್ಥ ಯಾತ್ರಾರ್ಥಿಗಳನ್ನು ತುರ್ತು ಸಂದರ್ಭದಲ್ಲಿ ಸಕಾಲಿಕ ಚಿಕಿತ್ಸೆಗಾಗಿ ಹೆಲಿ-ಆಂಬುಲೆನ್ಸ್ ಮೂಲಕ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿದೆ.

ಇಲ್ಲಿಯವರೆಗೆ ಸಾವಿಗೆ ಪ್ರಮುಖವಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಾರಣ. ವೈದ್ಯಕೀಯ ಇತಿಹಾಸ ಹೊಂದಿರುವ ಯಾತ್ರಾರ್ಥಿಗಳಿಗೆ ಮುಂದಿನ ಪ್ರಯಾಣವನ್ನು ಕೈಗೊಳ್ಳದಂತೆ ಮನವೊಲಿಸಲಾಗುತ್ತಿದೆ ಅವರು ತಮ್ಮ ಪ್ರಯಾಣವನ್ನು ಮುಂದುವರಿಸಲು ಸದೃಢವಾಗಿದ್ದರೆ ಅವರಿಂದ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಎಂದು ಉತ್ತರಾಖಂಡದ ಮಹಾನಿರ್ದೇಶಕಿ (ಆರೋಗ್ಯ) ಶೈಲ್ಜಾ ಭಟ್ ತಿಳಿಸಿದ್ದಾರೆ.

ಯಾತ್ರೆಯ ಮಾರ್ಗಗಳಲ್ಲಿ 20 ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ 178 ಹೆಚ್ಚಿನ ವೈದ್ಯರನ್ನು ನಿಯೋಜಿಸಲಾಗಿದೆ – 2019 ರ ಯಾತ್ರೆಗೆ ಹೋಲಿಸಿದರೆ 66% ಹೆಚ್ಚು ಎಂದು ತಿಳಿಸಿದ್ದಾರೆ. ಯಾತ್ರೆಯು ಮೇ 3ರಂದು ಪ್ರಾರಂಭವಾಗಿ ಅಕ್ಟೋಬರ್ ನಂತರದಲ್ಲಿ ಮುಕ್ತಾಯಗೊಳ್ಳಲಿದೆ. ಇಲ್ಲಿಯವರೆಗೆ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳ ಸಂಖ್ಯೆ 250,000 ದಾಟಿದೆ. ಆದರೆ ಒಂದು ವಾರದಿಂದ ಇದರ ಸಂಖ್ಯೆ ಇಳಿಮುಖವಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಮಕೂರಲ್ಲಿ ಗೆದ್ದರೆ ರಾಜ್ಯವನ್ನೇ ಗೆದ್ದಂತೆ.ಡಿಕೆಶಿ

Mon Jun 27 , 2022
ತುಮಕೂರು: ತುಮಕೂರು ವಿನ್ಸ್.. ಕರ್ನಾಟಕ ಸ್ಟೇಟ್ ವಿಲ್ ವಿನ್ಸ್. ಜಿಲ್ಲೆಯಲ್ಲಿ ಕಾಂಗ್ರೆಸ್​ನ ಗೆಲುವು ಎರಡಂಕಿ ದಾಟಿದರೆ ಪಕ್ಷವು ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು. ನಗರ ಹೊರವಲಯದ ಡಾ.ಎಚ್​.ಎಂ.ಗಂಗಾಧರಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್​ ಸಮಿತಿ ಆಯೋಜಿಸಿದ್ದ ಜಿಲ್ಲಾಮಟ್ಟದ ನವ ಸಂಕಲ್ಪ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಿಕೆಶಿ, ಸಮುದ್ರ ಮಂಥನದಂತೆ ವಿಷವನ್ನು ಕಡೆದು ಅಮೃತ ತೆಗೆಯುವ […]

Advertisement

Wordpress Social Share Plugin powered by Ultimatelysocial