ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯ :

 

ಬೆಂಗಳೂರು: ನಗರದಲ್ಲಿ ಕೊರೋನಾ ಪ್ರಕರಣಗಳ ( Coronavirus Case ) ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿವೆ. ಕೋವಿಡ್ ನಿಯಂತ್ರಣ ( Covid19 Control ) ಸಂಬಂಧ ಈಗಾಗಲೇ ಮಾಸ್ಕ್ ಅನ್ನು ಕಡ್ಡಾಯ ಕೂಡ ಗೊಳಿಸಲಾಗಿದೆ. ಇದೀಗ ಮುಂದುವರೆದು ಮೇ.2 ರ ಇಂದಿನಿಂದ ಮಾಸ್ಕ್ ಧರಿಸದೇ ಇದ್ದರೇ ದಂಡ ಹಾಕೋ ತೀರ್ಮಾನವನ್ನು ಬಿಬಿಎಂಪಿ ( BBMP ) ಮಾಡಿದೆ.

ಹೀಗಾಗಿ ಸಿಲಿಕಾನ್ ಸಿಟಿಯ ಜನರು ಮಾಸ್ಕ್ ಇಲ್ಲದೇ ಹೊರಗೆ ಓಡಾಡಿದ್ರೇ.. ದಂಡ ಫಿಕ್ಸ್ ಆಗಿದೆ.

ಈ ಸಂಬಂಧ ಈಗಾಗಲೇ ಬಿಬಿಎಂಪಿಯಿಂದ ಮಾರ್ಷಲ್ ಗಳಿಗೆ ಸೂಚನೆ ನೀಡಲಾಗಿದೆ. ಮೇ.2ರ ಇಂದಿನಿಂದ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಕ್ರಮವಾಗಿ ಮಾಸ್ಕ್ ಧರಿಸದೇ ಓಡಾಡೋ ಜನರಿಗೆ ಫೈನ್ ಹಾಕೋದಕ್ಕೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಮಾಸ್ಕ್ ಧರಿಸದೇ ಹೊರಗೆ ಓಡಾಡಿದ್ರೇ.. ಅವರಿಗೆ ಮಾರ್ಷಲ್ ಗಳು ರೂ.250 ದಂಡವನ್ನು ವಿಧಿಸಲಿದ್ದಾರೆ. ಸೋ ಸಿಲಿಕಾನ್ ಸಿಟಿ ಜನರು ಎಚ್ಚರಿಕೆ ವಹಿಸೋದು ಮರೆಯಬೇಡಿ. ಮಾಸ್ಕ್ ಧರಿಸಿ, ಕೊರೋನಾ ಓಡಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು: ಜಿಲ್ಲೆಯಲ್ಲಿ ಭರಣಿ ಮಳೆ

Mon May 2 , 2022
ಮಳೆ ಸತತ 3ನೇ ದಿನವಾದ ಭಾನುವಾರವೂ ಅಬ್ಬರಿಸಿದೆ. ಬಿರುಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ ಮಳೆಗೆ ಹಲವು ಮರಗಳು ಧರೆಗುರುಳಿದ್ದರೆ, ವಿದ್ಯುತ್ ಕಂಬಗಳು ಮುರಿದಿವೆ. ನಗರದಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ. ಮೈಸೂರು ನಗರದಲ್ಲಿ 100ಕ್ಕೂ ಅಧಿಕ ಮರಗಳು ಹಾಗೂ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಚಾಮರಾಜ ಜೋಡಿ ರಸ್ತೆಯಲ್ಲಿ ಬೃಹತ್ ಮರ ಉರುಳಿ ಬಿದ್ದು ಆಟೊ ಮತ್ತು ಕಾರು ಜಖಂಗೊಂಡವು. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ […]

Advertisement

Wordpress Social Share Plugin powered by Ultimatelysocial