ಭಾರತ – ಬಾಂಗ್ಲಾ ಗಡಿಯಲ್ಲಿ ಹೆಚ್ಚಾಗ್ತಿದೆ ಕೂದಲಿನ ಕಳ್ಳಸಾಗಣೆ

ಮನುಷ್ಯನ ಕೂದಲಿನ‌ ಕಳ್ಳಸಾಗಣೆಯು ಗಡಿ ಭದ್ರತಾಪಡೆಗೆ ತಲೆಶೂಲೆಯಾಗಿರುವ ಪ್ರಸಂಗ ನಡೆದಿದೆ.ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾ ಗಡಿಯಲ್ಲಿ ಮಾನವ ಕೂದಲು ಕಳ್ಳಸಾಗಣೆ ನಡೆಯುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 400 ಕೆಜಿಗೂ ಹೆಚ್ಚು ಮಾನವ ಕೂದಲನ್ನು ವಶಪಡಿಸಿಕೊಳ್ಳಲಾಗಿದೆ.ಬಿಎಸ್‌ಎಫ್‌ನ ದಕ್ಷಿಣ ಬಂಗಾಳ ಗಡಿಭಾಗದ ಡಿಐಜಿ ಎಸ್‌ಎಸ್ ಗುಲೇರಿಯಾ ನೀಡಿರುವ ಮಾಹಿತಿ ಪ್ರಕಾರ, 2021 ರಿಂದೀಚೆಗೆ ಈ ಪ್ರವೃತ್ತಿ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ನಾಡಿಯಾ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸುಮಾರು 12 ಕಿಲೋಗಳ ವಶಕ್ಕೆ ಪಡೆಯಲಾಯಿತು.ದಕ್ಷಿಣ ಬಂಗಾಳದ ನಾಡಿಯಾ ಜಿಲ್ಲೆಯ ತೆಹಟ್ಟಾದಲ್ಲಿ ಮಾರ್ಚ್ 3ರಂದು 10 ಚೀಲಗಳಲ್ಲಿ ತುಂಬಿದ ಸುಮಾರು 38 ಕಿಲೋ ಕೂದಲನ್ನು ವಶಪಡಿಸಿಕೊಳ್ಳಲಾಯಿತು.ದೇಶದಾದ್ಯಂತ ಚಿಂದಿ ಆಯುವವರು ಸಂಗ್ರಹಿಸಿದ ಟನ್‌ಗಟ್ಟಲೆ ಮಾನವ ಕೂದಲನ್ನು ಮಧ್ಯವರ್ತಿಗಳ ಮೂಲಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ತಲುಪುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೂದಲು ಶುಚಿಗೊಳಿಸುವಿಕೆ ಮತ್ತು ಸಂಸ್ಕರಣೆಯು ಮುರ್ಷಿದಾಬಾದ್‌ನ ಬೆಲ್ದಂಗಾ ಪ್ರದೇಶದಲ್ಲಿ ಗೃಹ ಉದ್ಯಮವಾಗಿದೆ.ವಿಗ್‌ ತಯಾರಿಕೆಗಾಗಿ ಕೂದಲು ನೇಯುವ ಮೊದಲು ಸ್ವಚ್ಛಗೊಳಿಸಲಾಗುತ್ತದೆ ಬಳಿಕ ಸಂಸ್ಕರಿಸಲಾಗುತ್ತದೆ. ಸಂಸ್ಕರಿಸಿದ ಕೂದಲು ಮತ್ತು ವಿಗ್‌ಗಳನ್ನು ಚೀನಾಕ್ಕೆ ರಫ್ತು ಮಾಡಲಾಗುತ್ತದೆ.ಕೋವಿಡ್ ಬರುವ ಮೊದಲು ಸಂಸ್ಕರಿಸಿದ ಕೂದಲು ಮತ್ತು ವಿಗ್‌ಗಳನ್ನು ಆಮದು ಮಾಡಿಕೊಳ್ಳುವ ಮೊದಲು ಗುಣಮಟ್ಟ ಪರೀಕ್ಷೆ ಮಾಡುವುದಕ್ಕಾಗಿ ಡಜನ್ ಗಟ್ಟಲೆ ಚೀನೀ ಆಮದುದಾರರು ಮುರ್ಷಿದಾಬಾದ್‌ಗೆ ಬರುತ್ತಿದ್ದರಂತೆ. ಈಗ ಬರುವುದು ನಿಲ್ಲಿಸಿದ್ದಾರೆ.ಆರು ಇಂಚುಗಳಿಗಿಂತ ಕಡಿಮೆ ಇರುವ ಕೂದಲನ್ನು ಸಂಸ್ಕರಿಸಲ್ಲ ಮತ್ತು ಅದನ್ನು ಸಾಮಾನ್ಯವಾಗಿ ಮ್ಯಾನ್ಮಾರ್‌ಗೆ ಅಗ್ಗದ ದರದಲ್ಲಿ ರಫ್ತು ಮಾಡಲಾಗುತ್ತದೆ. ಬಾಂಗ್ಲಾದ ನೌಗಾವ್, ಕುಷ್ಟಿಯ, ರಾಜ್‌ಶಾಹಿ ಮತ್ತು ದಿನಾಜ್‌ಪುರ ಮುಂತಾದ ಕಡೆ ಕೂದಲು ಸಂಸ್ಕರಣಾ ಕಾರ್ಖಾನೆಗಳಿವೆ. ಅಲ್ಲಿ ಕೂದಲಿನ ಗಾತ್ರ ಮತ್ತು ಗುಣಮಟ್ಟದ ಆಧಾರದ ಮೇಲೆ ಪ್ರತಿ ಕಿಲೋಗೆ 5,000- 10,000 ರೂ. ವರೆಗೆ ಸಿಗುತ್ತದೆ.ಉದ್ದನೆಯ ಕೂದಲನ್ನು ಮಹಿಳೆಯರಿಗಾಗಿ ವಿಗ್ ಮಾಡಲು ಮತ್ತು ಕೂದಲು ವಿಸ್ತರಣೆಗೆ ಬಳಸಿದರೆ ಚಿಕ್ಕ ಕೂದಲನ್ನು ಪುರುಷರಿಗೆ ಮತ್ತು ಕೃತಕ ಆಟಿಕೆ ತಯಾರಿಸಲು ಬಳಸಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ-ಉಕ್ರೇನ್ ಯುದ್ಧ: ವೀಸಾ, ಮಾಸ್ಟರ್ಕಾರ್ಡ್ ಎಲ್ಲಾ ರಷ್ಯಾದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತವೆ!

Sun Mar 6 , 2022
ರಷ್ಯಾದ ಆರ್ಥಿಕ ವ್ಯವಸ್ಥೆಗೆ ಮತ್ತೊಂದು ಹೊಡೆತದಲ್ಲಿ, ಉಕ್ರೇನ್ ಆಕ್ರಮಣದ ಹಿನ್ನೆಲೆಯಲ್ಲಿ ವೀಸಾ ಮತ್ತು ಮಾಸ್ಟರ್‌ಕಾರ್ಡ್ ದೇಶದ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಮುಂಬರುವ ದಿನಗಳಲ್ಲಿ ಎಲ್ಲಾ ವೀಸಾ ವಹಿವಾಟುಗಳನ್ನು ನಿಲ್ಲಿಸಲು ರಷ್ಯಾದೊಳಗಿನ ತನ್ನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುವುದಾಗಿ ವೀಸಾ ಹೇಳಿದೆ. ಒಮ್ಮೆ ಪೂರ್ಣಗೊಂಡ ನಂತರ, ರಷ್ಯಾದಲ್ಲಿ ನೀಡಲಾದ ವೀಸಾ ಕಾರ್ಡ್‌ಗಳೊಂದಿಗೆ ಪ್ರಾರಂಭಿಸಲಾದ ಎಲ್ಲಾ ವಹಿವಾಟುಗಳು ಇನ್ನು ಮುಂದೆ ದೇಶದ ಹೊರಗೆ ಕಾರ್ಯನಿರ್ವಹಿಸುವುದಿಲ್ಲ ಮತ್ತು ರಷ್ಯಾದ ಹೊರಗಿನ ಹಣಕಾಸು […]

Advertisement

Wordpress Social Share Plugin powered by Ultimatelysocial