ತುಮಕೂರಲ್ಲಿ ಗೆದ್ದರೆ ರಾಜ್ಯವನ್ನೇ ಗೆದ್ದಂತೆ.ಡಿಕೆಶಿ

ತುಮಕೂರು: ತುಮಕೂರು ವಿನ್ಸ್.. ಕರ್ನಾಟಕ ಸ್ಟೇಟ್ ವಿಲ್ ವಿನ್ಸ್. ಜಿಲ್ಲೆಯಲ್ಲಿ ಕಾಂಗ್ರೆಸ್​ನ ಗೆಲುವು ಎರಡಂಕಿ ದಾಟಿದರೆ ಪಕ್ಷವು ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

ನಗರ ಹೊರವಲಯದ ಡಾ.ಎಚ್​.ಎಂ.ಗಂಗಾಧರಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್​ ಸಮಿತಿ ಆಯೋಜಿಸಿದ್ದ ಜಿಲ್ಲಾಮಟ್ಟದ ನವ ಸಂಕಲ್ಪ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಿಕೆಶಿ, ಸಮುದ್ರ ಮಂಥನದಂತೆ ವಿಷವನ್ನು ಕಡೆದು ಅಮೃತ ತೆಗೆಯುವ ಕೆಲಸ ಆಗಬೇಕಿದೆ. ಮನಸಲ್ಲಿ ಇರೋ ಏನೇನೋ ವಿಚಾರವನ್ನು ಬಿಟ್ಟು ಕಾಂಗ್ರೆಸ್​ ಅಧಿಕಾರಕ್ಕೆ ತರುವುದಷ್ಟೇ ನಮ್ಮ ಚಿಂತನೆಯಾಗಬೇಕು. ತುಮಕೂರು ಗೆದ್ದರೆ, ಇಡೀ ರಾಜ್ಯವನ್ನು ಗೆದ್ದಂತೆ ಎನ್ನುವ ಮಾತಿದೆ. ಜಿಲ್ಲೆಯಲ್ಲಿ ಎರಡಂಕಿ ದಾಟಿದರೆ ಪಕ್ಷವು ಅಧಿಕಾರ ಹಿಡಿಯುವುದು ನಿಶ್ಚಿತ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ವಿಧಾನಸಭೆ ಚುನಾವಣೆಗೆ 10 ತಿಂಗಳಿರುವಾಗಲೇ ಪಕ್ಷ ಸಂಘಟನೆಗೆ ಕಾಂಗ್ರೆಸ್​ ಸಜ್ಜಾಗಿದೆ. ಮನೆಗೆ ಬಂದ ಲಕ್ಷ್ಮೀಯನ್ನು ಒಳಗೆ ಕರೆದುಕೊಳ್ಳಬೇಕು, ಸ್ವಪ್ರತಿಷ್ಠೆ ಬಿಟ್ಟು ಪಕ್ಷವನ್ನು ಸಶಕ್ತಗೊಳಿಸಬೇಕು. ಕಾಂಗ್ರೆಸ್​ ಎಲ್ಲವನ್ನೂ ಮುಖಂಡರಿಗೆ ನೀಡಿದೆ. ಈಗ ಪಕ್ಷಕ್ಕೆ ನಿಮ್ಮ ಕೊಡುಗೆ ಬೇಕಾಗಿದೆ. ನಿಮ್ಮ ತ್ಯಾಗ, ಸೇವೆ ಪಕ್ಷಕ್ಕೆ ಅತ್ಯವಶ್ಯಕವಾಗಿದೆ. ಎಲ್ಲರೂ ಒಟ್ಟಾಗಿ ಹೋರಾಡಿದರೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಡಿಕೆಶಿ ಹೇಳಿದರು.

ಬಿಜೆಪಿ, ಜೆಡಿಎಸ್​ ಸರ್ಕಾರದ ಆಡಳಿತವನ್ನು ತುಮಕೂರು ಜಿಲ್ಲೆಯ ಜನರು ನೋಡಿದ್ದಾರೆ. ಸಮರ್ಥ ಆಡಳಿತ ನೀಡಿರುವ ಕಾಂಗ್ರೆಸ್​ ಯೋಜನೆ ಬಗ್ಗೆ ಮನೆಮನೆಗೆ ತಿಳಿಸಬೇಕು. ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷ ಮಾಡಿದ ಜನಪರ ಕೆಲಸಗಳನ್ನು ಡಬಲ್​ ಇಂಜಿನ್​ ಸರ್ಕಾರ ಮಾಡುತ್ತಿಲ್ಲ. ಈ ಬಗ್ಗೆಯೂ ಜನರಿಗೆ ಮನವರಿಕೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.

ನಾನೊಬ್ಬ ಅಪರಾಧಿ:ನವ ಸಂಕಲ್ಪ ಶಿಬಿರ ಉದ್ಘಾಟನೆಗೆ ಎಲ್ಲ ಮುಖಂಡರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಮಧ್ಯದಲ್ಲಿ ಕುಳಿತಿದ್ದ ಮಾಜಿ ಶಾಸಕ ಕೆ.ಎನ್​.ರಾಜಣ್ಣ ವೇದಿಕೆಗೆ ಬರಲು ಹಿಂದೇಟು ಹಾಕಿದರು. ಸಂಘಟಕರ ಆಹ್ವಾನದ ನಂತರ ವೇದಿಕೆ ಹತ್ತಿದ ರಾಜಣ್ಣ ‘ನಾನೊಬ್ಬ ಅಪರಾಧಿ. ನನ್ನ ಮೇಲೊಂದು ದೂರು ಹಾಕಿದ್ದಾರೆ. ಪಿರ್ಯಾದುದಾರನ (ಜಿಲ್ಲಾಧ್ಯಕ್ಷ ಆರ್​.ರಾಮಕೃಷ್ಣ) ಅಧ್ಯಕ್ಷತೆಯಲ್ಲಿ ಶಿಬಿರ ನಡೆಯುತ್ತಿರುವುದರಿಂದ ಶಿಸ್ತು ಪಾಲನೆ ಮಾಡುವ ಸಲುವಾಗಿ ವೇದಿಕೆ ಹತ್ತಲಿಲ್ಲ’ ಎಂದು ಸಮಜಾಯಿಷಿ ನೀಡಿದರು.
ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್​, ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್​, ಶಾಸಕರಾದ ವೆಂಕಟರವಣಪ್ಪ, ಡಾ.ಎಚ್​.ಡಿ.ರಂಗನಾಥ್​, ಆರ್​. ರಾಜೇಂದ್ರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾಧ್ಯಕ್ಷ ಆರ್​.ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

Mon Jun 27 , 2022
  ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಮಾವಿನಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಸಿಹಿ ಮತ್ತು ರಸಭರಿತ ಹಣ್ಣಾದ ಮಾವು ಸೇವಿಸುವಾಗ ಹೆಚ್ಚಿನ ಜನರು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಇದನ್ನೂ ಜೊತೆಯಲ್ಲಿ ತಿಂದರೆ ಮಾವಿನ ಹಣ್ಣಿನ ರುಚಿ ಕೆಡುತ್ತದೆ. ಆದರೆ ರುಚಿ […]

Advertisement

Wordpress Social Share Plugin powered by Ultimatelysocial