ಓಮಿಕ್ರಾನ್ ಏರಿಕೆ: ಕೆಲವೆಡೆ ರೈಲು, ವಿಮಾನ ಸಂಚಾರ ರದ್ದು ಮತ್ತೆ ಲಾಕ್‍ಡೌನ್ ವಿಧಿಸುವ ಲಕ್ಷಣ;

ನವದೆಹಲಿ/ಕೋಲ್ಕತಾ/ಮುಂಬೈ,ಜ.2- ದೇಶ ದಲ್ಲಿ ದಿಢೀರನೆ ಓಮಿಕ್ರಾನ್ ರೂಪಾಂತರಿ ಮತ್ತು ಸಾಮಾನ್ಯ ಕೋವಿಡ್-19 ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು, ಹಲವು ರಾಜ್ಯಗಳಲ್ಲಿ ಲಾಕ್‍ಡೌನ್ ವಿಧಿಸುವ ಲಕ್ಷಣಗಳು ಗೋಚರಿಸಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.

ಏಳು ತಿಂಗಳ ಬಳಿಕ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 2000ರ ಗಡಿ ದಾಟಿದ್ದು, ಇದಾದ ಒಂದು ದಿನದ ನಂತರ ದೆಹಲಿ ಸಿಎಂ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ದೆಲಿಯಲ್ಲಿ 2,716 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. 2021ರ ಮೇ 21ರ ಬಳಿಕ ಶೇ.51ರಷ್ಟು ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇ.3.64ಕ್ಕೇರಿದೆ.

ಹೊಸ ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಮೂರನೇ ಅಲೆಯ ಭೀತಿ ಸೃಷ್ಟಿಸಿರುವಂತೆಯೇ ಕೋವಿಡ್-19ರ ಪ್ರಕರಣಗಳ ಸಂಖ್ಯೆ ದೆಹಲಿಯಲ್ಲಿ ಕಳೆದ ಏಳು ದಿನಗಳಲ್ಲಿ 7,865 ದಾಟಿದೆ.

ಕೋಲ್ಕತಾ ವರದಿ: ಕೋವಿಡ್ ಪಾಸಿಟಿವಿಟಿ ದರವು ಶನಿವಾರ ಶೇ.12.02ರಷ್ಟು ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಹಲವಾರು ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲು ಯೋಜಿಸುತ್ತಿದೆ.

ಮಮತಾ ಬ್ಯಾನರ್ಜಿ ಸರ್ಕಾರದ ಪ್ರಮುಖ ಯೋಜನೆ ದುಆರ್ ಸರ್ಕಾರ್ ಸೇರಿದಂತೆ ಕನಿಷ್ಠ ಎರಡು ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸೋಮವಾರದಿಂದ ವಚ್ರ್ಯುವಲ್ ವಿಧಾನದಲ್ಲಿ ಕಲಾಪಗಳನ್ನು ನಡೆಸಲು ಕೋಲ್ಕತ್ತಾ ಹೈಕೋರ್ಟ್ ನಿರ್ಧರಿಸಿದೆ.

ರಾಜ್ಯದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 4,512ರ ಪ್ರಮಾಣದಲ್ಲಿ ದೃಢಪಟ್ಟಿವೆ. ಹಿಂದಿನ ದಿನ ಶೇ.8.46ರಷ್ಟಿದ್ದ ರಾಜ್ಯದ ಪಾಸಿಟಿವಿ ದರ 12.02 ಪ್ರತಿಶತಕ್ಕೆ ಏರಿಕೆಯಾಗಿದೆ. ಶನಿವಾರ ಸೋಂಕಿನಿಂದ ಮತ್ತೆ 9 ರೋಗಿಗಳು ಮೃತಪಟ್ಟರು. ತನ್ಮೂಲಕ ರಾಜ್ಯದ ಕೋವಿಡ್-19 ಮರಣಗಳ ಸಂಖ್ಯೆ 19,773ಕ್ಕೆ ತಲುಪಿದೆ.ಕೋಲ್ಕತಾದ ಸಾಪ್ತಾಹಿಕ(ವಾರದ) ಪಾಸಿಟಿವಿಟಿ ದರ ಶೇ.23.4 ಆಗಿದ್ದು, ಇದು ಆತಂಕಕಾರಿ ವಿಷಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಲವು ರೈಲುಗಳ ಸಂಚಾರ ರದ್ದು:

ಭಾರತೀಯ ರೈಲ್ವೆ ಮುಂಬೈನಿಂದ ಹೊರಡುವ 14 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.
ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ಮತ್ತು ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ಕೈಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ರಾಹಕರ ಖಾತೆಗೆ ತಪ್ಪಾಗಿ ಬರೋಬ್ಬರಿ 1,310 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್..!

Sun Jan 2 , 2022
ಕ್ರಿಸ್‌ಮಸ್ ಹಬ್ಬದಂದು ಯುಕೆ ಮೂಲದ ಬ್ಯಾಂಕ್ ವೊಂದು ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆದರೆ, ಇದು ಅಚಾತುರ್ಯದಿಂದ ಆಗಿರುವ ಪ್ರಮಾದ. ಹೌದು, ಡಿಸೆಂಬರ್ 25ರಂದು ಸ್ಯಾಂಟ್ಯಾಂಡರ್ ಬ್ಯಾಂಕ್ ತಪ್ಪಾಗಿ 130 ಮಿಲಿಯನ್ ಪೌಂಡ್‌ (ಸುಮಾರು 1,310 ಕೋಟಿ ರೂ.) ಗಳನ್ನು ಗ್ರಾಹಕರ ಖಾತೆಗಳಿಗೆ ವರ್ಗಾಯಿಸಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಈ ಸಮಸ್ಯೆಯಾಗಿದೆ ಎಂದು ಬ್ಯಾಂಕ್ ಹೇಳಿದೆ. 2,000 ವ್ಯವಹಾರ ಖಾತೆಗಳಿಂದ ಪಾವತಿಗಳನ್ನು ಎರಡು ಬಾರಿ ಪ್ರಕ್ರಿಯೆಗೊಳಿಸಿದಾಗ ತಪ್ಪಾಗಿ ಗ್ರಾಹಕರಿಗೆ ಹಣ […]

Advertisement

Wordpress Social Share Plugin powered by Ultimatelysocial