ಗದಗ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರ ಪರದಾಟ

ಗದಗ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರ ಪರದಾಟ. ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಶಾಕ್ ಆಗಿದೆ.  ಶಾಂಭವಿ ರಸಗೊಬ್ಬರ ಗೋಡೌನ್ ಲ್ಲಿ ಅಪಾರ ರಸಗೊಬ್ಬರ ಇದ್ರೂ ಮಾಲಿಕರು ರೈತರಿಗೆ ಗೊಬ್ಬರ ನೀಡುತ್ತಿಲ್ಲ. ಬಿದರಳ್ಳಿ, ವಿಠಲಾಪೂರ ಗ್ರಾಮದ ರೈತರು ಯೂರಿಯಾ ಗೊಬ್ಬರ ಸಿಗದೆ ಕಂಗಾಲಾಗಿದ್ದಾರೆ. ಸೂಕ್ತ ಸಮಯಕ್ಕೆ ರಸಗೊಬ್ಬರ ಹಾಕದಿದ್ರೆ ಬೆಳೆ ಹಾನಿಯಾಗುವ ಸಂಭವದಿಂದ ರೈತರು ಕಂಗಾಲಾಗಿದ್ದಾರೆ. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆ ಮಾರಾಟ ಮಾಡುವ ಚಿಂತೆ ಮಾಲಿಕರದು ಎಂಬ ಆರೋಪ ಕೇಳಿ ಬರುತ್ತಿದೆ. ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು  ಒತ್ತಾಯ ಮಾಡುತ್ತಿದ್ದರು ಕೃಷಿ ಇಲಾಖೆ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಬೇಟೆಗಾರರಿಗೆ ವರವಾದ ಲಾಕ್ ಡೌನ್

Mon Jul 20 , 2020
ಕೊರೊನಾ ಲಾಕ್ ಡೌನ್ ಸೋಂಕು ತಡೆಗಟ್ಟುವಲ್ಲಿ ಸಹಾಯವಾಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಬೇಟೆಗಾರರಿಗೆ ಅನುಕೂಲವಾಗಿರುವುದಂತೂ ಸುಳ್ಳಲ್ಲ. ಲಾಕ್ ಡೌನ್ ಇರುವಾಗ ಕಾಡುಪ್ರಾಣಿಗಳ್ಳರು ಕದ್ದುಮುಚ್ಚಿ ಓಡಾಡಿ ಜಿಂಕೆ ಸೇರಿದಂತೆ ಹಲವು ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುತ್ತಿದ್ದಾರೆ. ಕೋವಿಡ್-೧೯ ಹಿನ್ನೆಲೆಯಲ್ಲಿ ಕಳೆದ ಬಾರಿ ದರ‍್ಘ ಲಾಕ್ ಡೌನ್ ಹೇರಿಕೆಯಾಗಿ ಅದು ಸಡಿಲಿಕೆಯಾದ ನಂತರ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಪ್ರಾಣಿಗಳ ಬೇಟೆಯಾಡಿದ ೮ ಕೇಸುಗಳು ವರದಿಯಾದವು. ಇದೀಗ ಮತ್ತೆ ಲಾಕ್ ಡೌನ್ […]

Advertisement

Wordpress Social Share Plugin powered by Ultimatelysocial