ಕಿರಣ್ ಮಜುಂದಾರ್ | On the birth day of great entrepreneur Kiran Mazumdar |

ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಅವರು ಉದ್ಯಮಲೋಕದಲ್ಲಿ ಪ್ರಸಿದ್ಧ ಹೆಸರು.
ಕಿರಣ್ ಮಜುಂದಾರ್ 1953ರ ಮಾರ್ಚ್ 23ರಂದು ಜನಿಸಿದರು. ಬೆಂಗಳೂರಿನಲ್ಲಿ ಕಾಲೇಜುವರೆಗಿನ ಶಿಕ್ಷಣ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಶಿಕ್ಷಣ ಪಡೆದ ಕಿರಣ್ ಮಜುಂದಾರ್ ಇಂದು ತಮ್ಮ ‘ಬಯೋಕಾನ್’ ಸಂಸ್ಥೆಯನ್ನು ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್ ಸಂಸ್ಥೆಯನ್ನು ಕಿರಣ್ ಮಜುಂದಾರ್ ಅವರು ಪ್ರಾರಂಭಿಸಿದ್ದು ಕೇವಲ ಹತ್ತು ಸಾವಿರ ರೂಪಾಯಿಗಳ ಬಂಡವಾಳದ ಮೂಲಕ, ತಮ್ಮ ಮನೆಯ ಶೆಡ್ ಒಂದರಲ್ಲಿ. ಅಂದಿನ ದಿನದಲ್ಲಿ ಅವರಿಗೆ ಯಾರೂ ಸಹಾಯಕ್ಕೆ ಬರಲಿಲ್ಲ. ತಮ್ಮ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಇಂದು ‘ಬಯಕೋನ್’ ಸಂಸ್ಥೆಯನ್ನು ವಿಶ್ವದ ಆ ಮಾದರಿಯ ಸಂಸ್ಥೆಗಳಲ್ಲಿ ಪ್ರಮುಖವೆನಿಸುವಂತೆ ಮಾಡಿದ್ದಾರೆ.
ಕಿರಣ್ ಮಜುಂದಾರ್ ಅವರಿಗೆ ಅವರ ಸಾಧನೆಗಾಗಿ ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಂದಿವೆ. ಪ್ರತಿಷ್ಠಿತ ಟೈಮ್ಸ್ ಪತ್ರಿಕೆ ಹೆಸರಿಸಿರುವ ನೂರು ಜನ ವಿಶ್ವ ಪ್ರಮುಖರಲ್ಲಿ ಮತ್ತು ಫೋರ್ಬ್ಸ್ನ್ ಹೆಸರಿಸಿರುವ ನೂರು ಪ್ರಮುಖರ ಪಟ್ಟಿಯಲ್ಲಿ ಮತ್ತು ಫೈನಾನ್ಸಿಯಲ್ ಟೈಮ್ಸ್ ಹೆಸರಿಸಿರುವ ಐವತ್ತು ಪ್ರಮುಖರ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಅವರು ವಿರಾಜಿಸಿದ್ದಾರೆ.

ನಿರಂತರ ತಮ್ಮ ಸಂಸ್ಥೆಯ ಆರ್ಥಿಕ ಉನ್ನತಿಯ ಸಾಧನೆಯಲ್ಲದೆ, ಗ್ರಾಮೀಣ ಪರಿಸರದ ಉನ್ನತೀಕರಣ, ಗ್ರಾಮೀಣ ಜನರಿಗೆ ಔದ್ಯೋಗಿಕ ಮತ್ತು ಶಿಕ್ಷಣ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಾ ಕಿರಣ್ ಮಜುಂದಾರ್ ಅವರು ಗಣನೀಯ ಕೊಡುಗೆಗಳನ್ನು ನೀಡುತ್ತಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಿಯಾಂಕಾ ಚೋಪ್ರಾ ಅಂತರಾಷ್ಟ್ರೀಯ ಸಮಾರಂಭಗಳಲ್ಲಿ ಸೀರೆ ಧರಿಸಿ ಸ್ಟೈಲ್ ಸ್ಟೇಟ್ಮೆಂಟ್ ಮಾಡಿದ ಸಮಯ!!

Fri Mar 25 , 2022
ಪ್ರಿಯಾಂಕಾ ಚೋಪ್ರಾ ಸೀರೆ ಉಟ್ಟಿದ್ದಾರೆ ತನ್ನ ಸಾರ್ಟೋರಿಯಲ್ ಆಯ್ಕೆಯ ಮೂಲಕ ಫ್ಯಾಷನ್ ವಿಮರ್ಶಕರನ್ನು ಆಕರ್ಷಿಸಿದ ಪ್ರಿಯಾಂಕಾ ಚೋಪ್ರಾ ಆಸ್ಕರ್ ಪೂರ್ವ ಸಮಾರಂಭದಲ್ಲಿ ಚಿಕ್ ಕಪ್ಪು ಸೀರೆಯನ್ನು ಧರಿಸಿ ಅದ್ಭುತ ಪ್ರವೇಶ ಮಾಡಿದರು. ಬೆವರ್ಲಿ ಹಿಲ್ಸ್‌ನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಈವೆಂಟ್‌ನಲ್ಲಿ ಪ್ರಿಯಾಂಕಾ ಅವರು ಕ್ಲಾಸಿಕ್ ಸಿಕ್ಸ್ ಯಾರ್ಡ್‌ಗಳೊಂದಿಗೆ ತಲೆ ತಿರುಗುವಂತೆ ಮಾಡಿದ ಅನುಗ್ರಹವನ್ನು ಕಂಡಿತು. ಆದರೆ, ಪೀಸಿ ಸೀರೆ ಉಟ್ಟು ಅಂತಾರಾಷ್ಟ್ರೀಯ ಗ್ಯಾಲಸ್‌ನಲ್ಲಿ ಸ್ಟೈಲ್ ಸ್ಟೇಟ್‌ಮೆಂಟ್ ನೀಡಿದ್ದು ಇದೇ ಮೊದಲಲ್ಲ. ವಾಸ್ತವವಾಗಿ, […]

Advertisement

Wordpress Social Share Plugin powered by Ultimatelysocial