ಗೋವಾದಲ್ಲಿ ಮದುವೆಯಾದ ಕೆಜೆಎಫ್‌ ಬೆಡಗಿ ಮೌನಿ ರಾಯ್

 

 

ಕೆಜಿಎಫ್ ಚಿತ್ರದಮೊದಲ ಭಾಗದ ಹಿಂದಿ ಅವತರಣಿಕೆಯ ಪ್ರಮುಖ ಹಾಡಿನಲ್ಲಿ ಕಾಣಿಸಿಕೊಂಡು ಮಿಂಚಿದ್ದ ಮೌನಿ ರಾಯ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಗುರುವಾರ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌನಿ ರಾಯ್ ಅವರು ಗೆಳೆಯ ಸೂರಜ್ ನಂಬಿಯಾರ್ ಅವರನ್ನು ವರಿಸಿದರು.

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರ ವಿವಾಹದ ಚಿತ್ರಗಳನ್ನು ನಟ ಅರ್ಜುನ್ ಬಿಜಲಾನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಶ್ವೇತ ವರ್ಣದ ಸೀರೆ, ದಕ್ಷಿಣ ಭಾರತೀಯ ಶೈಲಿಯ ಆಭರಣಗಳನ್ನು ಧರಿಸಿದ ಮೌನಿ ಮಿಂಚಿದರು. ಕುರ್ತಾ ಮತ್ತು ಬಿಳಿ ಬಣ್ಣದ ಧೋತಿಯನ್ನು ವರ ಸೂರಜ್ ಧರಿಸಿದ್ದರು.

ಮೌನಿ ಮತ್ತು ಸೂರಜ್ ವಿವಾಹವು ಮಲಯಾಳಿ ಮತ್ತು ಬೆಂಗಾಲಿ ಪದ್ದತಿಯಂತೆ ನಡೆಯಿತು. ಮಂದಿರಾ ಬೇಡಿ, ಆಶ್ಕಾ ಗೊರಾಡಿಯಾ, ಅರ್ಜುನ್ ಬಿಜಲಾನಿ ಸೇರಿದಂತೆ ಹಲವು ಸೆಲೆಬ್ರಟಿಗಳು ಮೌನಿ ರಾಯ್ ವಿವಾಹದಲ್ಲಿ ಭಾಗವಹಿಸಿದ್ದಾರೆ.

ಯಾರು ಈ ಸೂರಜ್ ನಂಬಿಯಾರ್?

ಮಲಯಾಳಿ ಕುಟುಂಬದ ಸೂರಜ್ ಜನಿಸಿದ್ದು ಕರ್ನಾಟಕದ ಬೆಂಗಳೂರಿನಲ್ಲಿ. ಇಲ್ಲಿಯೇ ಶಾಲಾ ಕಾಲೇಕು ಮುಗಿಸಿರುವ ಸೂರಜ್ ಇಂಜಿನಿಯರಿಂಗ್ ಪದವೀಧರ. ಸದ್ಯ ಉದ್ಯಮಿ ಮತ್ತು ದುಬೈನಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿರುವ ಸೂರಜ್ ಗೆ 2019ರಲ್ಲಿ ಮೊದಲ ಬಾರಿಗೆ ನ್ಯೂ ಇಯರ್ ಪಾರ್ಟಿಯಲ್ಲಿ ಮೌನಿ ರಾಯ್ ಪರಿಚಯವಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಾ ಡಿಲಕ್ಸ್ನೊಂದಿಗೆ ಸಂಭಾವನೆಗಾಗಿ ಪ್ರಭಾಶ್;

Thu Jan 27 , 2022
ಕಳೆದ ಕೆಲವು ವರ್ಷಗಳಲ್ಲಿ ಪ್ರಭಾಸ್‌ನ ಸ್ಟಾರ್‌ಡಮ್ ಚಿಮ್ಮಿ ರಭಸವಾಗಿ ಬೆಳೆದಿದೆ. ಅವರ ಪ್ಯಾನ್-ಇಂಡಿಯಾ ಯೋಜನೆಗಳ ಸಾಲು ಒಂದರ ನಂತರ ಒಂದರಂತೆ ಅದಕ್ಕೆ ಸಾಕ್ಷಿಯಾಗಿದೆ. ಬೆಳೆಯುತ್ತಿರುವ ಮಾರುಕಟ್ಟೆಯೊಂದಿಗೆ, ಪ್ರಭಾಸ್ ಅವರ ಸಂಭಾವನೆಯು ಗಣನೀಯವಾಗಿ ಬೆಳೆದಿದೆ. ಮತ್ತು ಸಾಕಷ್ಟು ಅರ್ಹವಾಗಿ, ನಿರ್ಮಾಪಕರು ಕೂಡ ಸಾಲುಗಟ್ಟಿದ್ದಾರೆ ಮತ್ತು ಯಾವುದೇ ಉಲ್ಲೇಖಿಸಿದ ಮೊತ್ತವನ್ನು ಪಾವತಿಸಲು ಸಿದ್ಧರಾಗಿದ್ದಾರೆ. ಅವರ ಪ್ಯಾನ್-ಇಂಡಿಯಾ ಬಿಗ್ಗೀಸ್‌ಗಳ ನಡುವೆ, ಅವರು ಮಾರುತಿ ನಿರ್ದೇಶನದ ರಾಜಾ ಡಿಲಕ್ಸ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಈ […]

Advertisement

Wordpress Social Share Plugin powered by Ultimatelysocial