ಚೀನಾಕ್ಕೆ ಸೆಡ್ಡು ಹೊಡೆದ ಭಾರತ

ಕರೊನಾ ಮಹಾಮಾರಿಯನ್ನು ದೇಶದಿಂದ ತೊಲಗಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿಗೆ ರಕ್ಷಣಾ ಕವಚ ನೀಡುವ ಹೊಸ ಸಾಹಸಕ್ಕೆ ಕೈಹಾಕಿದ್ದ ಭಾರತ ಅಲ್ಪ ಅವಧಿಯಲ್ಲಿಯೇ ಯಶಸ್ಸನ್ನೂ ಸಾಧಿಸಿಬಿಟ್ಟಿದೆ. ಭಾರತ ಈಗ  ಅತ್ಯುತ್ತಮ ಗುಣಮಟ್ಟದ ಒಂದು ಕೋಟಿಯನ್ನು ಮೀರುವಷ್ಟು ಪಿಪಿಇ ಕಿಟ್ ಗಳನ್ನು ತಯಾರಿಸಿದೆ.  ಕೊರೊನಾ ವೈರಸ್​ಗೆ ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳಿಗೆ ಭಾರತ ಸೇರಿದಂತೆ ಹಲವು ದೇಶಗಳು ಕರೊನಾ ತವರು ಚೀನಾದ ಮೇಲೆಯೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದರಲ್ಲಿಯೂ ವೈದ್ಯರಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಪಿಪಿಇ ಕಿಟ್​ಗೂ  ಚೀನಾದ ಮೇಲೆ ಅವಲಂಬನೆ ಹೆಚ್ಚಿತ್ತು. ಚೀನಾ ತನ್ನ ಕುತಂತ್ರ ಬುದ್ಧಿ ತೋರಿ ಕಳಪೆ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ವಿವಿಧ ದೇಶಗಳಿಗೆ ಸರಬರಾಜು ಮಾಡುತ್ತಿದೆ ಎಂಬ ಆರೋಪಗಳೂ ಬಂದಿವೆ. ಮಾತ್ರವಲ್ಲದೇ ಇದಕ್ಕೆ ಅಧಿಕ ಶುಲ್ಕವನ್ನೂ ವಿಧಿಸಬೇಕಾದ ಅನಿವಾರ್ಯತೆ ಬೇರೆ ಬೇರೆ ದೇಶಗಳಿಗೆ ಅನಿವಾರ್ಯವಾಗಿದೆ. ಆದರೆ ಚೀನಾಕ್ಕೆ ಸೆಡ್ಡು ಹೊಡೆದಿರುವ ಭಾರತ, ಅತ್ಯಲ್ಪ ಅವಧಿಯಲ್ಲಿಯೇ, ಅತ್ಯುತ್ತಮ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ತಯಾರಿಸಿದೆ. ಅದರ ಸಂಖ್ಯೆ ಇದೀಗ ಒಂದು ಕೋಟಿಯನ್ನು ಮೀರಿದೆ. ಈ ಕುರಿತು ಜವಳಿ ಸಚಿವಾಲಯ ಟ್ವೀಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ 1 ಕೋಟಿ ಪಿಪಿಇ- ರಕ್ಷ ಕವಚಗಳನ್ನು ಉತ್ಪಾದಿಸಲಾಗಿದೆ. ಆತ್ಮ ನಿರ್ಭರ್ ಭಾರತ್ ಅಭಿಯಾನದ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ ಎಂದು ಜವಳಿ ಸಚಿವಾಲಯ ಟ್ವೀಟ್​ನಲ್ಲಿ ಹೇಳಲಾಗಿದೆ. ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಎರಡು ತಿಂಗಳೊಳಗೆ ಪಿಪಿಇ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕಳೆದ ವಾರವಷ್ಟೇ ಸರ್ಕಾರ ಹೇಳಿತ್ತು. ಅದನ್ನೀಗ ಸಾಧಿಸಿ ತೋರಿಸಿದೆ

 

Please follow and like us:

Leave a Reply

Your email address will not be published. Required fields are marked *

Next Post

ಅಂತರ್ಜಾಲದಲ್ಲಿ ಫೇಮಸ್ ಆದ ಸ್ನೂಟ್ ರಾಣಿ

Thu May 28 , 2020
ತನ್ನ ಅತಿಯಾದ ಉದ್ದದ ಮೂತಿಯಿಂದಾಗಿ ನಾಯಿಯೊಂದು ಅಂತರ್ಜಾಲದಲ್ಲಿ ಫೇಮಸ್ ಆಗಿದೆ.  ವರ್ಜಿನಿಯಾದ ಬೋರ್ಜಾಯ್ ತಳಿಯ ನಾಯಿಯೊಂದು 12 ಇಂಚು ಅಳತೆಯ ಮೂತಿ ಹೊಂದಿದೆ. ಅದರ ಮಾಲೀಕರಾದ ಲೀಲಿ ಕಾಂಬೌರಿನಾ ತಾವು ಮರಿಯನ್ನು ತಂದಾಗ ಮೇಡಂ ಎರಿಸ್ ಓವರ್ ಬೈಟ್, ಸ್ನೂಟ್ ರಾಣಿ ಎಂದು ಹೆಸರಿಟ್ಟಿದ್ದರಂತೆ. ಇನ್ಸ್ಟಾಗ್ರಾಮ್ ನಲ್ಲಿ 1.7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಿಸ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಜನಪ್ರಿಯ ನಾಯಿಗಳಲ್ಲಿ ಒಂದಾಗಿದೆ. ಇದರ ಫೋಟೋ […]

Advertisement

Wordpress Social Share Plugin powered by Ultimatelysocial