ಚೀನಾದ ಮಹಿಳೆಯಿಂದ ಜಪಾನ್ ನ ದ್ವೀಪ ಖರೀದಿ

 

 

ಟೋಕಿಯೊ, ಫೆ.12: ಜಗತ್ತಿನ ಹಲವೆಡೆ ಚೀನಾ ಬೇಹುಗಾರಿಕೆ ನಡೆಸುತ್ತಿದೆ ಎಂಬ ವರದಿಯ ನಡುವೆ, ಜಪಾನ್ ನ ಜನವಸತಿ ಇಲ್ಲದ ದ್ವೀಪವೊಂದನ್ನು ಚೀನಾದ ಮಹಿಳೆ ಖರೀದಿಸಿರುವುದು ಬೆಳಕಿಗೆ ಬಂದಿದ್ದು ಇದು ಅಪಾಯದ ಸಂದೇಶ ರವಾನಿಸಿದೆ ಎಂದು ಜಪಾನ್ನ ಮಾಧ್ಯಮಗಳು ವರದಿ ಮಾಡಿವೆ.

 

ಒಕಿನಾವಾ ಪ್ರಾಂತದ ಆಡಳಿತ ವ್ಯಾಪ್ತಿಗೆ ಬರುವ ಜನವಸತಿ ಇಲ್ಲದ ಯನಾಹಾ ದ್ವೀಪವನ್ನು ಚೀನಾದ ಮಹಿಳೆ ಖರೀದಿಸಿದ್ದು, ಆಕೆ ಇತ್ತೀಚೆಗೆ ದ್ವೀಪಕ್ಕೆ ಭೇಟಿ ನೀಡಿ ಇಲ್ಲಿಯ ಫೋಟೋ ತೆಗೆದಿದ್ದಾಳೆ ಹಾಗೂ ವೀಡಿಯೊ ರೆಕಾರ್ಡ್ ಮಾಡಿದ್ದಾಳೆ ಎಂದು `ಜಪಾನ್ ಟೈಮ್ಸ್’ ವರದಿ ಮಾಡಿದೆ.

ಈ ದ್ವೀಪದ 50% ಪ್ರದೇಶ ಟೋಕಿಯೊ ಮೂಲದ ಸಂಸ್ಥೆಯ ಅಧೀನದಲ್ಲಿದೆ. ಉಳಿದ ಪ್ರದೇಶವನ್ನು ಚೀನಾದ ಮಹಿಳೆ ಖರೀದಿಸಿದ್ದಾಳೆ ಎಂದು ವರದಿಯಾಗಿದೆ. ಈ ವರದಿಯನ್ನು ಚೀನಾದ ಮಾಧ್ಯಮಗಳೂ ದೃಢಪಡಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸ್ತಿ ನೀಡಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿನಲ್ಲಿ ಶಾಲಾ ಪ್ರೇಮ ಮೆರೆದ ಯುವಕ!

Mon Feb 13 , 2023
    ಬಾಗಲಕೋಟೆ: ಈ 22 ವರ್ಷದ ಯುವಕ, ತನ್ನ ಮಾವಂದಿರು ನೀಡಬೇಕಾಗಿದ್ದ ಆಸ್ತಿ ನೀಡಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಅಕ್ಕನಿಗೆ ಮಕ್ಕಳಿಲ್ಲ ಎಂದು ಈತನನ್ನು ದತ್ತು ನೀಡಲಾಗಿತ್ತು. ಅಕ್ಕನ ಗಂಡ ಮೃತಪಟ್ಟ ಬಳಿಕ ಅಕ್ಕನ ಮೈದುನರು ಆಸ್ತಿಯಲ್ಲಿ ಪಾಲು ನೀಡುವುದಿಲ್ಲ ಎಂದು ಕುಳಿತುಕೊಂಡಿದ್ದರು. ಈ ಹಿಂದೆ ಅಕ್ಕ ವಿಧವೆಯಾದಾಗ ಮಗಳನ್ನು ಕೊಟ್ಟು ಮದುವೆ ಮಾಡ್ತಿವಿ, ನಾಲ್ಕು ಎಕರೆ ಆಸ್ತಿ ಕೊಡ್ತೀವಿ ಎಂದಿದ್ದರು. ಆದರೆ ಈಗ ಅವರು […]

Advertisement

Wordpress Social Share Plugin powered by Ultimatelysocial