ಛತ್ತಿಸ್‌ಗಢ, ಮಧ್ಯಪ್ರದೇಶದಲ್ಲಿ ಅರವಿಂದ ಕೇಜ್ರಿವಾಲ್‌ ಚುನಾವಣಾ ರ‍್ಯಾಲಿ

ವದೆಹಲಿ: ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು ಛತ್ತಿಸ್‌ಗಢದ ಜಗದಲ್‌ಪುರ ಮತ್ತು ಮಧ್ಯಪ್ರದೇಶದ ರೇವಾದಲ್ಲಿ ರ‍್ಯಾಲಿ ನಡೆಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಸೆಪ್ಟೆಂಬರ್‌ 14ರಂದು ಛತ್ತಿಸ್‌ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದ್ದರು.

ಇದೀಗ ನಾಳೆ (ಸೆಪ್ಟೆಂಬರ್‌ 16) ಛತ್ತಿಸ್‌ಗಢದ ಜಗದಲ್‌ಪುರದಲ್ಲಿ ಮತ್ತು ಸೆಪ್ಟೆಂಬರ್‌ 18 ರಂದು ಮಧ್ಯಪ್ರದೇಶದ ರೇವಾಗೆ ಕೇಜ್ರಿವಾಲ್‌ ಭೇಟಿ ನೀಡಲಿದ್ದಾರೆ.

ರಾಯಗಢದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಛತ್ತಿಸ್‌ಗಢದ ಭೂಪೇಶ್‌ ಬಘೇಲ್‌ ನೇತೃತ್ವದ ಸರ್ಕಾರ ಬಡವರ ಕಲ್ಯಾಣದಲ್ಲಿ ಹಿಂದುಳಿದಿದೆ ಆದರೆ, ಭ್ರಷ್ಟಾಚಾರದಲ್ಲಿ ಮುಂದಿದೆ ಎಂದು ಟೀಕಿಸಿದರು. ಛತ್ತಿಸ್‌ಗಢದ ಕಾಂಗ್ರೆಸ್‌ ಸರ್ಕಾರವು ಹಗರಣಗಳಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.

‘ಛತ್ತಿಸ್‌ಗಢ, ನಕ್ಸಲೀಯರ ದಾಳಿ ಮತ್ತು ಹಿಂಸಾಚಾರಕ್ಕೆ ಮಾತ್ರ ಹೆಸರುವಾಸಿಯಾಗಿದ್ದ ಕಾಲವೊಂದಿತ್ತು. ಆದರೆ, ಬಿಜೆಪಿ ಸರ್ಕಾರದ ಪ್ರಯತ್ನದ ನಂತರ ಇಂದು ಅಭಿವೃದ್ಧಿ ಕಾರ್ಯಗಳಿಂದಾಗಿ ಗುರುತಿಸಿಕೊಳ್ಳುತ್ತಿದೆ ಎಂದು ಮೋದಿ ತಿಳಿಸಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸಿರಬಹುದು: ಚಂದ್ರಯಾನ-1ರ ದತ್ತಾಂಶ

Fri Sep 15 , 2023
ನವದೆಹಲಿ: ಭಾರತದ ಚಂದ್ರಯಾನ-1ರ ದೂರಸಂವೇದಿ ದತ್ತಾಂಶವನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಗಳು ಭೂಮಿಯಿಂದ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಹೇಳಿದ್ದಾರೆ. ಭೂಮಿಯ ಪ್ಲಾಸ್ಮಾ ಶೀಟ್‌ನಲ್ಲಿರುವ ಈ ಎಲೆಕ್ಟ್ರಾನ್‌ಗಳು ಚಂದ್ರನ ಮೇಲ್ಮೈಯಲ್ಲಿ ಬಂಡೆಗಳು ಮತ್ತು ಖನಿಜಗಳನ್ನು ಒಡೆಯುವ ಅಥವಾ ಕರಗಿಸುವ ಪ್ರಕ್ರಿಯೆಗಳಿಗೆ ಕಾರಣವಾಗುತ್ತಿವೆ ಎಂದು ಅಮೆರಿಕದ ಮನೋವಾದ ಹವಾಯಿ ವಿಶ್ವವಿದ್ಯಾಲಯದ (ಯುಹೆಚ್) ಸಂಶೋಧಕರ ನೇತೃತ್ವದ ತಂಡವು ಕಂಡುಹಿಡಿದಿದೆ.   ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯಲ್ಲಿ ಚಂದ್ರನ […]

Advertisement

Wordpress Social Share Plugin powered by Ultimatelysocial