ಕೊಪ್ಪಳದಲ್ಲಿ: ವಿಮಾನ ನಿಲ್ದಾಣ ನಿರ್ಮಾಣ; ಪರಿಶೀಲಿಸಿದ ಅಧಿಕಾರಿಗಳು

ಕೊಪ್ಪಳ, ಜನವರಿ 30; ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು ಎಂಬ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಸ್ಥಳ ವೀಕ್ಷಣೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಾಗಿದ  ರಾಜ್ಯ ಸಣ್ಣ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಎಂ. ಆರ್.ರವಿ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸ್ಥಳ ಪರಿಶೀಲನೆಗೆ ಸಚಿವ ವಿ. ಸೋಮಣ್ಣ ಸೂಚನೆ ನೀಡಿದ್ದರು.

ಕೊಪ್ಪಳ ವಿಮಾನ ನಿಲ್ದಾಣ; ಸ್ಥಳ ಪರಿಶೀಲಿಸಿ ವರದಿ ತಯಾರಿಕೆಗೆ ಸೂಚನೆ

ಸಭೆಯಲ್ಲಿ ಮಾತನಾಡಿದ ಎಂ. ಆರ್. ರವಿ, “ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಕಾರ್ಯ ಸಾಧ್ಯತೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ” ಎಂದು ಹೇಳಿದರು. ಈ ವರದಿ ಸಲ್ಲಿಕೆಯಾದ ಬಳಿಕ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ದಾವಣಗೆರೆ ಏರ್‌ಪೋರ್ಟ್‌ ಬೇಡಿಕೆಗೆ ಮನ್ನಣೆ, ಅಧಿಕಾರಿಗಳ ಭೇಟಿ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತು ಬೆಂಗಳೂರಿನಲ್ಲಿ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದರು. ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ವರದಿ ನೀಡುವಂತೆ ಸೂಚನೆ ನೀಡಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಡಬ್ಬದಲ್ಲಿರುವ ಬೇಳೆ - ಕಾಳುಗಳಿಗೆ ಹುಳು ಬಾರದಂತೆ ತಡೆಯಲು ಹೀಗೆ ಮಾಡಿ

Sun Jan 30 , 2022
ಮನೆಯಲ್ಲಿ ತಿಂಗಳಿಗೆ ಆಗುವಷ್ಟು ದಿನಸಿ ತಂದಿಟ್ಟುಕೊಳ್ಳುತ್ತೇವೆ. ಎಷ್ಟೇ ಬಿಗಿಯಾದ ಡಬ್ಬದಲ್ಲಿ ಬೇಳೆ, ಕಾಳು, ಸಕ್ಕರೆ ಇವನ್ನೆಲ್ಲಾ ಶೇಖರಿಸಿಟ್ಟರೂ, ಹುಳು, ಇರುವೆಗಳು ಡಬ್ಬದೊಳಗೆ ಹೋಗುತ್ತವೆ ಎಂದು ಚಿಂತೆ ಮಾಡುತ್ತಿದ್ದರಾ.? ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್ ಗಳು.ಸಕ್ಕರೆ ಡಬ್ಬ ಇಟ್ಟಲ್ಲಿ ಇರುವೆಗಳ ಕಾಟ ಇದ್ದೆ ಇರುತ್ತದೆ. ಇದನ್ನು ಸುಲಭವಾಗಿ ನಿವಾರಿಸಿಕೊಳ್ಳಲು ಸಕ್ಕರೆ ಡಬ್ಬಕ್ಕೆ 4 ಲವಂಗ ಹಾಕಿ ಇಡಿ. ಇದರಿಂದ ಇರುವೆಗಳು ಮುತ್ತಿಕೊಳ್ಳುವುದಿಲ್ಲ.ಇನ್ನು ಧನಿಯಾ ಪುಡಿ, ಖಾರದಪುಡಿ, ಗರಂ ಮಸಾಲ ಹಾಕಿಟ್ಟುಕೊಂಡ ಡಬ್ಬಕ್ಕೂ […]

Advertisement

Wordpress Social Share Plugin powered by Ultimatelysocial