ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

ಬಾಗಲಕೋಟೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಳಕಲ್ಲು ತಾಲೂಕಿನ ಸಿದ್ದನಕೊಳ್ಳ ಕಿರು ಜಲಪಾತ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಮತ್ತು ಸಿದ್ದನಕೊಳ್ಳದ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡುವ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಧಾರ್ಮಿಕ ಸ್ಥಳ ಸಿದ್ದೇಶ್ವರ ಮಠವು ಐಹೊಳೆಯಿಂದ 10 ಕಿ.ಮೀ. ದೂರದಲ್ಲಿದೆ. ಪಕ್ಕದಲ್ಲೇ ಇರುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮತ್ತು ಭಕ್ತರ ದಂಡೇ ಹರಿದು ಬರುತ್ತದೆ. ಬೆಟ್ಟದ ಮೇಲೆ ಹಸಿರಿನ ಮಧ್ಯೆ ಜಾರಿ ಬರುವ ನೀರನ್ನು ನೋಡಲು ನಯನ ಮನೋಹರವಾಗಿರುತ್ತದೆ.

 

ಕೆಳಗಡೆ ಹಾಸು ಬಂಡೆಗಳಿರುವುದರಿಂದ ಚಾರಣಿಗರಿಗೆ ಸ್ನಾನ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಮಕ್ಕಳು ಆಗದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಸಿಗಲಿದೆ ಎಂಬ ನಂಬಿಕೆ ಇದೆ. ಭಕ್ತರು ಪ್ರತೀ ಅಮಾವಾಸ್ಯೆ ದಿನದಂದು ಬೇರೆ ಬೇರೆ ಪ್ರದೇಶದಿಂದ ಆಗಮಿಸಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಮಠದಲ್ಲಿ ನಿರಂತರ ದಾಸೋಹ ಇರಲಿದೆ. ಸದ್ಯದ ಮಟ್ಟಿಗೆ ಕೊರೊನಾ ಭಯದಿಂದ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಅಪಘಾತದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪೇದೆ ಸಾವು

Sat Aug 1 , 2020
ಬೆಳಗಾವಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೇದೆ ಯಾಗಿ ಕರ‍್ಯ ನರ‍್ವಹಿಸುತಿದ್ದ ಶಿವಪ್ಪ ನಾಮದೇವ್ ಕೋಳಿ ಪೊಲೀಸ್ ಪೇದೆ ಕೋಳಿಗುಡ್ಡ ಗ್ರಾಮದಲ್ಲಿ ಅಪಘಾತವಾದಿಂದ ಗಂಭಿರವಾಗಿ ಗಾಯಗೊಂಡು ಸಾವನಪ್ಪಿದ್ದಾರೆ. ಗೂಡ್ಸ್ ವಾಹನ ರಭಸದಿಂದ ಗುದ್ದಿದ ಪರಿಣಾಮ ಪೇದೆ ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಾಜ್ ಆಸ್ಪತ್ರೆಗೆ ಕರೆದೊಯುತ್ತಿರುವಾಗ ಮರ‍್ಗ ಮಧ್ಯದಲ್ಲಿ ಪೇದೆ ಸಾವನಪ್ಪಿದ್ದು, ಹಾರೂಗೇರಿ ಪೊಲೀಸ ವ್ಯಾಪ್ತಿಯಲ್ಲಿ ಘಟನೆ ನಡೆದ್ದಿದೆ. Please follow and like us:

Advertisement

Wordpress Social Share Plugin powered by Ultimatelysocial