ಜಿವಿಕೆ ಗ್ರೂಪ್ ವಿರುದ್ಧ ಸಿಬಿಐ ಪ್ರಕರಣ ದಾಖಲು

ವಿಮಾನನಿಲ್ದಾಣ ಉನ್ನತೀಕರಣ, ನಿರ್ವಹಣೆ ಕುರಿತು ನಡೆದ  705 ಕೋಟಿ ಅವ್ಯವಹಾರ ಸಂಬಂಧ ಜಿವಿಕೆ ಗ್ರೂಪ್‍ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಮತ್ತು ಅವರ ಪುತ್ರನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಉನ್ನತೀಕರಣ ಮತ್ತು ಮೇಲ್ವಿಚಾರಣೆ ಸಂಬಂಧ ಜಿವಿಕೆ ಗ್ರೂಪ್‍ ಭಾಗವಾಗಿರುವ ಜಿವಿ‌ಕೆ ಏರ್ ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್‍ ಜೊತೆಗೆ ಜಂಟಿ ಉದ್ಯಮ ಸ್ಥಾಪಿಸಿತ್ತು. ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಪುತ್ರ ಜಿ.ವಿ.ಸಂಜಯ್ ರೆಡ್ಡಿ ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಜಿವಿಕೆ ಗ್ರೂಪ್‍ ಸಂಸ್ಥೆಯ ಪ್ರವರ್ತಕರು ಹಾಗೂ ಎಎಐ ಅಧಿಕಾರಿಗಳ ಸಹಕಾರದಲ್ಲಿ ಭಿನ್ನ ಮಾರ್ಗಗಳಲ್ಲಿ ಹಣ ವರ್ಗಾವಣೆ, ದುರ್ಬಳಕೆಗೆ ಕಾರಣರಾಗಿದ್ದರು. ಜಿವಿಕೆ ಗ್ರೂಪ್‍ ಸುಮಾರು 395 ಕೋಟಿ ಮೀಸಲು ನಿಧಿಯನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂದು ಸಿಬಿಐ ಆರೋಪಿಸಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಬಂಡವಾಳ ಹಿಂಪಡೆಯಲ್ಲ

Thu Jul 2 , 2020
ಕೋಲ್ ಇಂಡಿಯಾದಿAದ ಬಂಡವಾಳ ಹಿಂತೆಗೆದುಕೊಳ್ಳುವ ಅಥವಾ ಕೋಲ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಸುದ್ದಿ ಸಂಸ್ಥೆಯೊAದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು “೨೦೨೩ರ ವೇಳೆಗೆ ೧ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ಕೋಲ್ ಇಂಡಿಯಾ ಕಂಪೆನಿಗೆ ನೀಡಿದ್ದೇನೆ ಎಂದು ತಿಳಿಸಿದರು. Please follow and like us:

Advertisement

Wordpress Social Share Plugin powered by Ultimatelysocial