ಡಿ.ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ತಮ್ಮ ಘನತೆ ಕಾಪಾಡುವಂತೆ ಪ್ರಧಾನಿ ಮೋದಿ ಸಲಹೆ ನೀಡಬೇಕು: ಜಗ್ಗೇಶ್

ಬೆಂಗಳೂರು: ಡಿ.ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಇದೀಗ ಭಾರಿ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅಧಿಕಾರಿಗಳಿಬ್ಬರು ತಮ್ಮ ಘನತೆ ಕಾಪಾಡುವಂತೆ ಪ್ರಧಾನಿ ಮೋದಿ ಸಲಹೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಐಪಿಎಸ್ ಮತ್ತು ಐಎಎಸ್ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯುತ ಹುದ್ದೆಗಳು. ಸರ್ಕಾರಕ್ಕಾಗಿ ಸೇತುವೆಯಂತೆ ಕೆಲಸ ಮಾಡಬೇಕು. ಮಾಧ್ಯಮದಲ್ಲಿ ವೈಯಕ್ತಿಕ ದ್ವೇಷವನ್ನು ವ್ಯಕ್ತಪಡಿಸಬಾರದು ಎಂದು ಸಲಹೆ ನೀಡಿದ್ದಾರೆ.

ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ. ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ಅವರಿಬ್ಬರೂ ಸಾರ್ವಜನಿಕವಾಗಿ ತಮ್ಮ ಘನತೆ ಕಾಪಾಡುವಂತೆ ಸಲಹೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಐಪಿಎಸ್ ರೂಪಾ ಮೌದ್ಗಿಲ್ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ನಡುವಿನ ಸೋಷಿಯಲ್ ಮೀಡಿಯಾ ಕಚ್ಚಾಟ ಈಗ ಸರ್ಕಾರದ ಅಂಗಳ ತಲುಪಿದೆ. ರೋಹಿಣಿ ಮತ್ತು ರೂಪಾ ಇಬ್ಬರೂ ಪರಸ್ಪರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮರಿಗೆ ಇಂದು ದೂರು ಕೊಟ್ಟಿದ್ದಾರೆ. ಇದೀಗ ಸರ್ಕಾರದ ನಡೆ ಭಾರೀ ಕುತೂಹಲ ಮೂಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆಗೆ ಅತ್ತ ಸಿಎಂ ಖುರ್ಚಿಯೂ ಇಲ್ಲ.

Tue Feb 21 , 2023
ಉದ್ಧವ್​ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ದಾಳ ಉರುಳಿಸಿ, ಹೊಸ ಸರ್ಕಾರ ರಚಿಸಿ ಸಿಎಂ ಗದ್ದುಗೆ ಏರಿದ್ದ ಏಕ್​ನಾಥ್​ ಶಿಂಧೆಗೆ ಡಬಲ್‌ ಜಯ ಸಿಕ್ಕಿದೆ. ಚುನಾವಣಾ ಆಯೋಗ ಈಗಾಗಲೇ ಶಿಂಧೆ ಬಣಕ್ಕೆ ಶಿವಸೇನೆಯ ಚಿಹ್ನೆಯನ್ನ ಅಧಿಕೃತಗೊಳಿಸಿದೆ. ಅತ್ತ ಅಧಿಕಾರವನ್ನೂ ಕಳ್ಕೊಂಡು ಈಗ ಪಕ್ಷವನ್ನೂ ಕಳಕೊಂಡ ಉದ್ಧವ್‌ ಠಾಕ್ರೆ ಅತಂತ್ರದಲ್ಲಿದ್ದಾರೆ. ಆದ್ರೂ ಇದೆಲ್ಲದಕ್ಕೂ ಅಮಿತ್‌ ಶಾ ಕಾರಣ ಅನ್ನೋದು ಅವರ ಆರೋಪ. ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆಗೆ ಅತ್ತ ಸಿಎಂ ಖುರ್ಚಿಯೂ ಇಲ್ಲ. […]

Advertisement

Wordpress Social Share Plugin powered by Ultimatelysocial