ತಮಿಳುನಾಡು: ಮಹಿಳೆಯರಿಗೆ ಮಾಸಿಕ 1,000 ರೂ. ಒದಗಿಸುವ ಯೋಜನೆಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಚಾಲನೆ

ರ್ನಾಟಕದಲ್ಲಿ ಜಾರಿಯಲ್ಲಿರುವಂತೆಯೇ ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಯೋಜನೆ ಒದಗಿಸುವ ಯೋಜನೆ ನೆರೆಯ ತಮಿಳುನಾಡಿನಲ್ಲಿಯೂ ಚಾಲನೆಗೊಂಡಿದೆ. ದ್ರಾವಿಡ ಐಕಾನ್ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನವಾದ ಇಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಹಿಳೆಯರಿಗೆ ಮಾಸಿಕ 1,000 ರೂ. ಆರ್ಥಿಕ ನೆರವು ಒದಗಿಸುವ ಯೋಜನೆಗೆ ಚಾಲನೆ ನೀಡಿದರು. ಚೆನ್ನೈ: ಕರ್ನಾಟಕದಲ್ಲಿ ಜಾರಿಯಲ್ಲಿರುವಂತೆಯೇ ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಯೋಜನೆ ಒದಗಿಸುವ ಯೋಜನೆ ನೆರೆಯ ತಮಿಳುನಾಡಿನಲ್ಲಿಯೂ ಚಾಲನೆಗೊಂಡಿದೆ. ದ್ರಾವಿಡ ಐಕಾನ್ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನವಾದ ಇಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಹಿಳೆಯರಿಗೆ ಮಾಸಿಕ 1,000 ರೂ.
ಆರ್ಥಿಕ ನೆರವು ಒದಗಿಸುವ ಯೋಜನೆಗೆ ಚಾಲನೆ ನೀಡಿದರು. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿ, ಹಲವಾರು ಫಲಾನುಭವಿಗಳಿಗೆ ಬ್ಯಾಂಕ್ ಡೆಬಿಟ್ ಕಾರ್ಡ್ ಗಳನ್ನು ಸ್ಟಾಲಿನ್ ವಿತರಿಸಿದರು. ರಾಜ್ಯ ಸಚಿವರು ತಮ್ಮ ಜಿಲ್ಲೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಿದರು.ಮಹಿಳೆಯರ ಮೂಲ ಆದಾಯದ ಕಾರ್ಯಕ್ರಮವಾಗಿರುವ ಇದಕ್ಕೆ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಹೆಸರನ್ನು ಇಡಲಾಗಿದೆ. ಇದು ಮಹಿಳೆಯರ ಹಕ್ಕು ಎಂದು ರಾಜ್ಯ ಸರ್ಕಾರ ಹೇಳಿದೆ.

ಯೋಜನೆ ಅಡಿಯಲ್ಲಿ 1.06 ಕೋಟಿ ಮಹಿಳೆಯರನ್ನು (1,06,50,000) ಫಲಾನುಭವಿಗಳೆಂದು ಸರ್ಕಾರ ಗುರುತಿಸಿದೆ ಮತ್ತು 1,000 ರೂ ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

BIGG NEWS: ಸ್ಮಾರ್ಟ್‌ ಫೋನ್‌ಗಳಲ್ಲಿ ದೇಸಿ GPS ನಾವಿಕ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

Fri Sep 15 , 2023
ನವದೆಹಲಿ: 5 ಜಿ ಸ್ಮಾರ್ಟ್ಫೋನ್ಗಳು 2025 ರ ಜನವರಿ 1 ರೊಳಗೆ ನ್ಯಾವಿಗೇಷನ್ಗಾಗಿ ಶಾರ್ಟ್ ಆಗಿರುವ ನಾವಿಕ್ ಮತ್ತು ಡಿಸೆಂಬರ್ 2025 ರೊಳಗೆ ಇತರ ಫೋನ್ಗಳನ್ನು ಬೆಂಬಲಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು. ಅಂದ ಹಾಗೇ ನಾವಿಕ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದೆ.   ಮುಂದಿನ ಸುತ್ತಿನ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕಗಳು ಅಥವಾ ಪಿಎಲ್‌ಐ ಯೋಜನೆಯಲ್ಲಿ ಸಿಸ್ಟಮ್ ವಿನ್ಯಾಸಗಳಲ್ಲಿ ಭಾರತೀಯ ನಿರ್ಮಿತ ಅಥವಾ ವಿನ್ಯಾಸಗೊಳಿಸಿದ […]

Advertisement

Wordpress Social Share Plugin powered by Ultimatelysocial