ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ?

ನಿದ್ರೆ ಎನ್ನುವುದು ಮನುಷ್ಯನ ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ನಾವು ಆರೋಗ್ಯವಾಗಿರಬೇಕಾದರೆ ಸರಿಯಾದ ನಿದ್ರೆಯ ಅವಶ್ಯಕತೆ ತುಂಬಾನೇ ಇದೆ. ಕೆಲವೊಂದು ಬಾರಿ ನಾವು ನಿದ್ರಾಹೀನತೆಯ ಸಮಸ್ಯೆಯನ್ನು ಅನುಭವಿಸುತ್ತೇವೆ. ಇದಕ್ಕೆಲ್ಲಾ ಕಾರಣ ನಮ್ಮ ಜೀವನ ಶೈಲಿ.

ಹೌದು, ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನ ಶೈಲಿ ಉತ್ತಮವಾಗಿದ್ದಾಗ ಮಾತ್ರ ನಮ್ಮ ನಿದ್ರಾಚಕ್ರವು ಸರಿಯಾಗಿರುತ್ತದೆ. ಹಾಗಾದ್ರೆ ಮಲಗುವ ಮೊದಲು ನಾವು ಎಂತಹ ಆಹಾರವನ್ನು ಸೇವಿಸಬೇಕು? ಯಾವ ರೀತಿಯ ಆಹಾರವು ನಮಗೆ ನೈಸರ್ಗಿಕ ನಿದ್ರೆಗೆ ಸಹಕರಿಸುತ್ತದೆ?ಹಾಗಾದ್ರೆ ರಾತ್ರಿ ಮಲಗುವ ಮುನ್ನ ಸೇವಿಸಲೇಬೇಕಾದ ಆಹಾರ ಯಾವುದು ಅನ್ನೋದನ್ನ ತಿಳಿಯೋಣ.

ಬಾದಾಮಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬಾದಾಮಿಯಲ್ಲಿ ಪ್ರೋಟೀನ್‌ಗಳು, ಫಾಸ್ಫರಸ್ ಮತ್ತು ರೈಬೋಫ್ಲಾವಿನ್‌ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಬಾದಾಮಿಯು ಹೆಚ್ಚಿನ ಪ್ರಮಾಣದ ಮೆಲಟೋನಿನ್ ಅನ್ನು ಹೊಂದಿರುತ್ತದೆ, ಇದು ನಿದ್ರೆ ಮತ್ತು ಎಚ್ಚರದ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಬಾದಾಮಿಯಲ್ಲಿ ಮೆಗ್ನೀಸಿಯಮ್‌ ಸಮೃದ್ಧವಾಗಿದೆ. ಇದು ನಿದ್ರಾಹೀನತೆಯನ್ನು ಹೊಂದಿರುವವರಿಗೆ ನಿದ್ರೆಯ ಅಭ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಬಾದಾಮಿಯನ್ನು ಸೇವಿಸುವುದರಿಂದ ಉತ್ತಮ ನಿದ್ರೆಯ ಗುಣಮಟ್ಟವನ್ನು ಒದಗಿಸುತ್ತದೆ. ಮತ್ತು ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತದೆ.

2. ವಾಲ್ನಟ್‌ವಾಲ್ನಟ್‌ನಲ್ಲಿ ಕೂಡ ನಿದ್ರೆಯನ್ನು ಉತ್ತೇಜಿಸುವ ಕೆಲವೊಂದು ಸಂಯುಕ್ತ ಅಂಶಗಳಿದೆ. ಇದರಲ್ಲಿ ಉತ್ತಮ ನಿದ್ರೆಗೆ ಅಗತ್ಯ ಪ್ರಮಾಣದ ಮೆಲಟೋನಿನ್, ಸಿರೊಟೋನಿನ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿದೆ. ಹಾಗೂ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

3. ಕೀವಿ ಹಣ್ಣುಮಲಗುವ ಮುನ್ನ ಕೀವಿ ಹಣ್ಣು ತಿಂದರೆ ಉತ್ತಮ. ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಹಣ್ಣು. ಇದು ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಫೋಲೇಟ್ ಮತ್ತು ಇತರ ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. ಕೀವಿ ಹಣ್ಣು ನಿದ್ರೆಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಅನೇಕ ನಿದ್ರೆ-ಪ್ರಚೋದಕ ಸಂಯುಕ್ತಗಳನ್ನು ಒಳಗೊಂಡಿದೆ. ಮಲಗುವ ಮುನ್ನ ಪ್ರತಿದಿನ 1-2 ಕೀವಿ ಹಣ್ಣುಗಳನ್ನು ಸೇವಿಸುವುದರಿಂದ ವೇಗವಾಗಿ ನಿದ್ರಿಸಲು ಮತ್ತು ಹೆಚ್ಚು ಸಮಯ ನಿದ್ರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯಿಂದ ಸಾಭೀತಾಗಿದೆ.

4. ಕೊಬ್ಬಿನಾಂಶ ಹೊಂದಿರುವ ಮೀನುಸಾಲ್ಮನ್, ಟ್ಯೂನ ಮತ್ತು ಮ್ಯಾಕೆರೆಲ್‌ನಂತಹ ಕೊಬ್ಬಿನಾಂಶ ಹೊಂದಿರುವ ಮೀನುಗಳು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇವುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಅನ್ನು ಒಳಗೊಂಡಿರುತ್ತವೆ. ಇದು ಆಂತರಿಕ ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಸಂಯೋಜನೆಯು ಉತ್ತಮ ನಿದ್ರೆಗೆ ಸಹಕರಿಸುತ್ತದೆ. ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ದೇಹದಲ್ಲಿನ ಸಿರೊಟೋನಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

5. ಕುಂಬಳಕಾಯಿ ಬೀಜಗಳುಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಮತ್ತು ಟ್ರಿಪ್ಟೊಫಾನ್ ಸಮೃದ್ಧವಾಗಿದೆ. ಇದು ಅಮೈನೋ ಆಮ್ಲವಾಗಿದ್ದು ಅದು ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ನಿಮ್ಮ ದೇಹವು ಅದನ್ನು ಸಿರೊಟೋನಿನ್ ಮತ್ತು ಮೆಲಟೋನಿನ್ ಆಗಿ ಪರಿವರ್ತಿಸುತ್ತದೆ. ಕುಂಬಕಾಯಿಯಲ್ಲಿರುವ ಆರೋಗ್ಯಕಾರಿ ಗುಣಗಳು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

6. ಅನ್ನಅಕ್ಕಿಯು ಕಾರ್ಬೋಹೈಡ್ರೇಟ್‌ಗಳ ಮೂಲವಾಗಿದ್ದರೂ, ಅನ್ನ ಸೇವನೆಯು ನಿದ್ರೆಯ ಮಾದರಿಯನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳಿಂದ ದೃಢಪಟ್ಟಿದೆ. ಬ್ರೆಡ್ ಅಥವಾ ನೂಡಲ್ಸ್ ತಿನ್ನುವುದರ ಬದಲಾಗಿ ಮಲಗುವ ಮುನ್ನ ಅನ್ನವನ್ನು ಸೇವಿಸುವುದು ಒಳ್ಳೆಯದು. ಇದು ಉತ್ತಮ ನಿದ್ರೆಗೆ ಉತ್ತೇಜಿಸುತ್ತದೆ ಎಂದು ಅಧ್ಯಯನದಿಂದ ಸಾಭೀತಾಗಿದೆ.

7. ಮೊಸರು ಅಥವಾ ಯೋರ್ಗಟ್ಮೊಸರು ಅಥವಾ ಯೋರ್ಗಟ್‌ ಅನ್ನು ಮಲಗುವ ಮುನ್ನ ತಿಂದರೆ ಉತ್ತಮ. ಏಕೆಂದರೆ ಇದರಲ್ಲಿ ಬಹಳಷ್ಟು ಪ್ರೋಬಯಾಟಿಕ್‌ಗಳು ಮತ್ತು ಅಮಿನೊ ಟ್ರಿಪ್ಟೊಫಾನ್ ಅಂಶ ಹೊಂದಿದೆ. ಮೊಸರಿನಲ್ಲಿರುವ ಅಮಿನೊ ಟ್ರಿಪ್ಟೊಫಾನ್ ನಿಮ್ಮ ನಿದ್ರೆಯ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

8. ಬಿಸಿ ಹಾಲುರಾತ್ರಿಯಲ್ಲಿ ಒಂದು ಲೋಟ ಹಾಲು ಕುಡಿಯುವುದರಿಂದ ಕಣ್ಣುತುಂಬಾ ನಿದ್ದೆ ಮಾಡಬಹುದು. ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಸೇವಿಸುವುದರಿಂದ ಒಳ್ಳೆಯದು ಏಕೆಂದರೆ ಹಾಲಿನಲ್ಲಿ ಕೆಲವು ನಿದ್ರೆಯನ್ನು ಉತ್ತೇಜಿಸುವ ಸಂಯುಕ್ತಗಳನ್ನು ಒಳಗೊಂಡಿದೆ. ಅವುಗಳೆಂದರೆ ಟ್ರಿಪ್ಟೊಫಾನ್, ಕ್ಯಾಲ್ಸಿಯಂ, ವಿಟಮಿನ್ ಡಿ, ಮೆಲಟೋನಿನ್ ಇದು ನೈಸರ್ಗಿಕವಾಗಿ ನಿದ್ರೆಯನ್ನು ಉತ್ತೇಜಿಸಲು ಉಪಯುಕ್ತವಾಗಿದೆ.

ಒಟ್ಟಿನಲ್ಲಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರಷ್ಟೇ ನಮ್ಮ ದಿನಚರಿ ಚೆನ್ನಾಗಿರೋದಕ್ಕೆ ಸಾಧ್ಯ. ಸರಿಯಾಗಿ ನಿದ್ರೆ ಆಗದೇ ಹೋದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ನಿದ್ರೆಗೂ ಮೊದಲು ನಿಮ್ಮ ಆಹಾರ ಸೇವನೆ ಉತ್ತಮವಾಗಿರಲಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ.

Fri Mar 3 , 2023
  ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ. ಮಾಧುರ್ಯಯುತ ಕನ್ನಡದ ಧ್ವನಿಯ ನಿರೂಪಕಿಯಾಗಿ, ಬರಹಗಾರ್ತಿಯಾಗಿ, ಕವಯತ್ರಿಯಾಗಿ, ಸ್ರೀ ಶಕ್ತಿ ಒಕ್ಕೂಟದ ಸಂಘಟಕರಾಗಿ, ಫೇಸ್ಬುಕ್ ಕಗ್ಗ ಬಳಗದ ಸ್ಥಾಪಕರಾಗಿ ಹೀಗೆ ಹಲವು ರೀತಿಯಲ್ಲಿ ಅವರು ಸಕ್ರಿಯರು.ಭವಾನಿ ಲೋಕೇಶ್ ಅವರ ಜನ್ಮದಿನ ಮಾರ್ಚ್ 3. ಅವರು ಮಂಡ್ಯ ಜಿಲ್ಲೆಯ ಕೆರೆಗೂಡಿನಲ್ಲಿ ಜನಿಸಿದರು. ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್‍ಸಿ ಪದವಿ ಪಡೆದ ಭವಾನಿ ಮುಂದೆ, ಕನ್ನಡ ಎಂ.ಎ., ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಯುಜಿಸಿ ಶಿಕ್ಷಣ […]

Advertisement

Wordpress Social Share Plugin powered by Ultimatelysocial