ಸ್ಯಾಂಟ್ರೋ ರವಿ ಬಂಧನ. ರಾಜಕಾರಣಿಗಳಿಗೆ ಚಿಂತೆ ಶುರು.

ನ್ಯೂಸ್​ ಫಸ್ಟ್​ನ ನಿರಂತರ ಸುದ್ದಿ ಪ್ರಸಾರ ಹಾಗೂ ಚಲಬಿಡದ ಪೊಲೀಸರ ಸತತ ಪರಿಶ್ರಮದಿಂದ ಕೊನೆಗೂ ನಿನ್ನೆ ಸ್ಯಾಂಟ್ರೋ ರವಿ ಅರೆಸ್ಟ್​ ಆಗಿದ್ದಾನೆ. ಹೆಣ್ಮಕ್ಕಳ ಬಾಳು ಹಾಳು ಮಾಡಿ ನಾನಾ ವೇಷಗಳನ್ನು ತೊಟ್ಟು ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಇಂದು ಬೆಂಗಳೂರಿಗೆ ಕರೆತರಲಾಗಿದ್ದು ಕೆಲವರಿಗೆ ಢವಢವ ಶುರುವಾಗಿದೆ.

ಸ್ಯಾಂಟ್ರೋ ರವಿ ಹೀಗೆ ನೋಡ್ಲಿಕ್ಕೆ ಒಳ್ಳೆ ಗೋವಿನಂತೆ ಶ್ವೇತವಸ್ತ್ರಧಾರಿಯಾಗಿ ಕಾಣುವ ಈ ಖತರ್ನಾಕ್​ ಗೋಮುಖ ವ್ಯಾಘ್ರ. ಈಗಾಗ್ಲೇ ನ್ಯೂಸ್​ ಫಸ್ಟ್​ ಇವನ ಕರಾಳ ಮುಖಗಳನ್ನು ರಾಜ್ಯದ ಜನತೆಯ ಮುಂದೆ ಎಳೆಎಳೆಯಾಗಿ ಬಯಲು ಮಾಡಿದೆ. ದಲಿತ ಹೆಣ್ಮಗಳ ಮೇಲೆ ಅತ್ಯಾಚಾರ, ವೇಶ್ಯಾವಾಟಿಕೆ ದಂಧೆ. ವರ್ಗಾವಣೆಯ ನಾಟಕಗಳು ಸೇರಿದಂತೆ ಕಿರಾತಕನ ನಟೋರಿಯಸ್​ ದುಷ್ಕೃತ್ಯಗಳು ಎಲ್ಲರ ಕಣ್ಣು ಕೆಂಪಗಾಗಿಸಿದ್ದವು. 11 ದಿನಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ಎಸ್ಕೇಪ್​ ಆಗಿದ್ದ ಈ ನಸುಗುನ್ನಿಯನ್ನು ನಿನ್ನೆ ಪೊಲೀಸರು ಗುಜರಾತ್​ನಲ್ಲಿ ಹೆಡೆಮುರಿಕಟ್ಟಿದ್ದಾರೆ. ಗೊತ್ತೇ ಆಗದಂತೆ ವಿಗ್​ ಮೀಸೆ ತೆಗೆದಿದ್ದವನನ್ನು ಅರೆಸ್ಟ್ ಮಾಡಿದ್ದಾರೆ.

ಗುಜರಾತ್​ನಿಂದ ಬೆಂಗಳೂರಿಗೆ ಸ್ಯಾಂಟ್ರೋ ರವಿ

ಪಾಪದ ಕೊಡ ತುಂಬಿದ್ಮೇಲೆ ಪಾಪಿ ಸಿಕ್ಕಬೀಳಲೇ ಬೇಕು. ಕರ್ನಾಟಕದಲ್ಲಿ ಸಾಲು ಸಾಲು ದಂಧೆ ಮಾಡಿ ಗುಜರಾತ್‌ನ ಬಿಲದೊಳಗೆ ಇಲಿಯಂತೆ ಅಡಗಿ ಕೂತಿದ್ದ ಕಿರಾತಕನನ್ನ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಕರ್ನಾಟಕ ಪೊಲೀಸರು ಕೊಟ್ಟಿದ್ದ ಮಾಹಿತಿಯಂತೆ ಅಹಮದಾಬಾದ್‌ನಲ್ಲಿ ಟ್ರಾವಲ್ ಮಾಡುತ್ತಿದ್ದ ಸ್ಯಾಂಟ್ರೋ ರವಿಯನ್ನ ಗುಜರಾತ್ ಪೊಲೀಸರು ವಶಕ್ಕೆ ಪಡೆದು ಬಳಿಕ ಮೈಸೂರು ಪೊಲೀಸರಿಗೆ ಹ್ಯಾಂಡ್ ಓವರ್ ಮಾಡಿದ್ದಾರೆ. ಸದ್ಯ ನಿನ್ನೆ ಗುಜರಾತ್​ನಿಂದ ವಿಮಾನದಲ್ಲಿ ಕಿರಾತಕ ಸ್ಯಾಂಟ್ರೋ ರವಿಯನ್ನ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ನ್ಯೂಸ್​​​ಫಸ್ಟ್​​ಗೆ ಎಡಿಜಿಪಿ ಅಲೋಕ್​​ ಕುಮಾರ್ ಅಭಿನಂದನೆ

ಇನ್ನು ಸ್ಯಾಂಟ್ರೋ ರವಿ ಬಗ್ಗೆ ನಿರಂತರವಾಗಿ ಸುದ್ದಿ ಬಿತ್ತರಿಸಿದ ನ್ಯೂಸ್​​​ಫಸ್ಟ್​​ಗೆ ಎಡಿಜಿಪಿ ಅಲೋಕ್​​ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ವೇಷ ಬದಲಿಸಿದ ಸ್ಯಾಂಟ್ರೋ ರವಿ ಸೆರೆಹಿಡಿಯೋದು ಸಾಹಸವಾಗಿತ್ತು. ನಮ್ಮ ಪೊಲೀಸರು 11 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದೇವೆ. ​​​​​

ಸ್ಯಾಂಟ್ರೋ ರವಿ ಸೆರೆಹಿಡಿದ ಪೊಲೀಸರಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಟ್ರೋ, ಆಡಿ, ಬೆಂಜ್ ಜೊತೆ ಆಟ ಆಡಿ ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ಇಂದು ಬೆಂಗಳೂರಿಗೆ ಕರೆತಂದಿದ್ದು ಕೋರ್ಟ್​ಗೆ ಒಪ್ಪಿಸುವ ಸಾಧ್ಯತೆ ಇದೆ. ಆದ್ರೆ ಇಷ್ಟು ದಿನ ಕಷ್ಟಪಟ್ಟು ಹಿಡಿದ ಪೊಲೀಸರು ಈಗ ನಿಟ್ಟುಸಿರು ಬಿಟ್ರೆ ಇವನಿಂದ ಡೀಲ್‌ ಮಾಡ್ತಿದ್ದ ರಾಜಕಾರಣಿಗಳಿಗೆ ಕುಳಿತಲ್ಲೇ ಚಳಿ ಶುರುವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ.

Sat Jan 14 , 2023
ಧಾರವಾಡ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಲಾಗಿದೆ. ಧಾರವಾಡದ ಯು.ಬಿ. ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್ ಪೋಸ್ಟ್ ಕಛೇರಿಯಲ್ಲಿ 15 ವರ್ಷಗಳ ಅವಧಿಯ ಹೆಚ್.ಯು.ಎಫ್/ಪಿ.ಪಿ.ಎಫ್ ಅಕೌಂಟ್ ತೆರೆದು ಸದರಿ ಯೋಜನೆಯಡಿ ಹಣವನ್ನು ತೊಡಗಿಸಿದ್ದರು. ಯೋಜನೆಯು ದಿ:31/03/2015 ರಂದು ಮುಕ್ತಾಯವಾಗಿತ್ತು. ತದನಂತರ ದೂರುದಾರ ಸದರಿ ಯೋಜನೆಯನ್ನು ಮತ್ತೆ 5 ವರ್ಷಗಳ ಅವಧಿಗೆ ಅಂದರೆ 01/04/2015 ರಿಂದ 31/03/2020 ರವರೆಗೆ ಮುಂದುವರೆಸಿದ್ದರು. […]

Advertisement

Wordpress Social Share Plugin powered by Ultimatelysocial