ದಯಾಮರಣ ಕಲ್ಪಿಸಿ ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ Medical Students ̤

ಉತ್ತರ ಪ್ರದೇಶದ ಸಹರಾನ್‌ಪುರದ  ವೈದ್ಯಕೀಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅವರಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಸಹರಾನ್‌ಪುರದ ಗ್ಲೋಕಲ್ ಮೆಡಿಕಲ್ ಕಾಲೇಜು   2016 ರಲ್ಲಿ ತನ್ನ ಎಂಬಿಬಿಎಸ್ ಕೋರ್ಸ್  ​​ ಆರಂಭಿಸಿ 66 ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿತು.
ಈ ನಡುವೆ ಭಾರತೀಯ ವೈದ್ಯಕೀಯ ಮಂಡಳಿಯು ಮೂರು ತಿಂಗಳ ನಂತರ ಸಂಸ್ಥೆಯನ್ನು ಅಮಾನ್ಯಗೊಳಿಸಿದೆ. ಇದಾದ ಬಳಿಕವೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ ಕಾಲೇಜು ಆಡಳಿತ ಮಂಡಳಿ ಐದು ವರ್ಷಗಳ ಕಾಲ ಕೋರ್ಸ್ ಮುಂದುವರಿಸಿದೆ. ಈ ವಿಚಾರ ತಿಳಿಯದ ನಾವು ಅಲ್ಲಿಯೇ 5 ವರ್ಷಗಳ ಕಾಲ ವೈದ್ಯಕೀಯ ಪದವಿ ಮುಗಿಸಿದ್ದೇವೆ. ಈಗ ನಮ್ಮ ಭವಿಷ್ಯ ಡೋಲಾಯಮಾನವಾಗಿದ್ದು, ನಮಗೆ ದಯಾಮರಣ ಕಲ್ಪಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.ವಿದ್ಯಾರ್ಥಿಗಳ ಬೆಂಬಲಕ್ಕೆ ಇದ್ದೇವೆ ಎಂದ ಕುಲಪತಿ
66 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ರಾಷ್ಟ್ರಪತಿ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗ್ಲೋಕಲ್ ಯೂನಿವರ್ಸಿಟಿ ಉಪಕುಲಪತಿ ಅಕೀಲ್ ಅಹ್ಮದ್, ಎಂಸಿಐ ನಮ್ಮ ಯೂನಿವರ್ಸಿಟಿಯನ್ನು ಅಮಾನ್ಯ ಮಾಡಿತು. ಆದರೆ, ನಾವು ನಮ್ಮ ವಿದ್ಯಾರ್ಥಿಗಳ ಪದವಿ ಪೂರ್ಣಗೊಳಿಸಲಿ ಎಂದುಕೊಂಡೆವು. ಈ ವಿದ್ಯಾರ್ಥಿಗಳ ಮನವಿ ಮೇರೆಗೆ ಎಂಸಿಐ ನಿರಾಕ್ಷೇಪಣಾ ಪತ್ರವನ್ನು ಕೂಡ ರದ್ದುಗೊಳಿಸಿತು. ವಿದ್ಯಾರ್ಥಿಗಳು ಹೈಕೋರ್ಟ್​​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದರು. ಬಳಿಕ ಸುಪ್ರೀಂಕೋರ್ಟ್​ಗೆ ಹೋದರು. ಅಲ್ಲೆಲ್ಲ ಕಡೆಗಳಲ್ಲೂ ಅರ್ಜಿ ವಜಾಗೊಂಡಿದೆ. ಇಷ್ಟೆಲ್ಲ ಆದರೂ ನಾವು ನಮ್ಮ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದೇವೆ ಎಂದಿದ್ದಾರೆ.ಐದು ವರ್ಷಗಳ ಶ್ರಮ ವ್ಯರ್ಥ
ಇದೀಗ ವಿದ್ಯಾರ್ಥಿಗಳು ಏಕಾಏಕಿ ತಮ್ಮ ವ್ಯಾಸಂಗವನ್ನು ಸ್ಥಗಿತಗೊಳಿಸಿದ್ದರಿಂದ ಕಂಗಾಲಾಗಿದ್ದಾರೆ. ಈ ಹಿನ್ನಲೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ವಿದ್ಯಾರ್ಥಿಗಳು ತಾವು ಅತೃಪ್ತರಾಗಿದ್ದು, ಅಲಹಾಬಾದ್ ಹೈಕೋರ್ಟ್‌ಗೆ ಹೋಗುವುದು ಸೇರಿದಂತೆ ಎಲ್ಲಾ ಕಾರ್ಯಸಾಧ್ಯವಾದ ಪಯತ್ನ ನಡೆಸಿದ್ದೇವು. ಆದರೆ ಯಾವುದೇ ಉಪಯೋಗ ವಾಗಿಲ್ಲ. ಹಲವು ಕನಸನ್ನು ಹೊತ್ತು ಐದು ವರ್ಷಗಳ ಕಾಲ ಹಗಲು ರಾತ್ರಿ ವೈದ್ಯಕೀಯ ಪದವಿ ಪಡೆದಿದ್ದು ವ್ಯರ್ಥವಾಗಿದೆ. ನಮಗೆ ಈಗ ಯಾವುದೇ ಭರವಸೆ ಇಲ್ಲ. ತಮ್ಮ ಜೀವನವನ್ನು ಕೊನೆಗೊಳಿಸಲು ಬಯಸುತ್ತೇವೆ. ಇದಕ್ಕೆ ದಯಾ ಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಕಾದಂಬರಿ ನ್ಯಾನೊಪರ್ಟಿಕಲ್ SARS-CoV-2 ಲಸಿಕೆ ಹೆಚ್ಚು ಪ್ರಬಲವಾದ ರಕ್ಷಣೆ;

Wed Feb 2 , 2022
ಫಿಲಡೆಲ್ಫಿಯಾ (ಪೆನ್ಸಿಲ್ವೇನಿಯಾ) [ಯುಎಸ್], ಫೆಬ್ರವರಿ 2 (ANI): ಮೊದಲ ತಲೆಮಾರಿನ COVID-19 ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿವೆ ಮತ್ತು ಹೆಚ್ಚು ಜನರು ಲಸಿಕೆಯನ್ನು ಪಡೆಯಲು ಪ್ರೋತ್ಸಾಹಿಸಿವೆ. ಆದರೆ ಅವುಗಳು ಮಿತಿಗಳನ್ನು ಹೊಂದಿವೆ: ಬೂಸ್ಟರ್ ಶಾಟ್ ಇಲ್ಲದೆಯೇ ಅವುಗಳ ಪರಿಣಾಮಕಾರಿತ್ವವು ಕ್ಷೀಣಿಸಬಹುದು ಮತ್ತು ಕೆಲವು ರೂಪಾಂತರಗಳ ವಿರುದ್ಧ ಅವು ಕಡಿಮೆ ಪರಿಣಾಮಕಾರಿಯಾಗಬಹುದು. ಆದಾಗ್ಯೂ, ಇತ್ತೀಚಿನ ಅಧ್ಯಯನವು ಕೆಲವು ಸಕಾರಾತ್ಮಕ ಸುದ್ದಿಗಳನ್ನು ಹೊಂದಿದೆ. ಪ್ರತಿರಕ್ಷಣಾ-ಕೇಂದ್ರಿತ SARS-CoV-2 ನ್ಯಾನೊಪರ್ಟಿಕಲ್‌ಗಳ ನ್ಯೂಕ್ಲಿಯಿಕ್ ಆಸಿಡ್ ವಿತರಣೆಯು ಏಕ-ಡೋಸ್ ರಕ್ಷಣೆಯ […]

Advertisement

Wordpress Social Share Plugin powered by Ultimatelysocial