ದಾಖಲೆಗಳನ್ನು ಸೃಷ್ಟಿಸುತ್ತಿರುವ ಶಾರುಖ್‌ ಅಭಿನಯದ “ಜವಾನ್” ಸಿನೆಮಾ

ಪಠಾಣ್‌ನ ಯಶಸ್ಸಿನ ನಂತರ, ಶಾರುಖ್ ಖಾನ್ ಕಾಲಿವುಡ್‌ ಡೈರೆಕ್ಟರ್‌ ಅಟ್ಲೀ ಅವರೊಂದಿಗೆ  ಜವಾನ್‌ ಚಿತ್ರದೊಂದಿಗೆ ದೊಡ್ಡ ಪರದೆಗೆ ಮರಳಿದ್ದಾರೆ. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಮತ್ತು ವಿಜಯ್ ಸೇತುಪತಿ ಖಳನಟನಾಗಿ  ನಟಿಸಿದ್ದಾರೆ .  ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರವು ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ   200 ಕೋಟಿ  ಗಳಿಸಿದೆ ಹಾಗು ದಾಖಲೆಗಳನ್ನು ಉರುಳಿಸುತ್ತಲೇ  ಇದೆ.

2ನೇ ದಿನ ಥಿಯೇಟರ್‌ಗಳಲ್ಲಿ ಜವಾನ್ 100 ಕೋಟಿ ರೂ.ಗಳ ಗಡಿ ದಾಟಿದೆ. ಆಕ್ಷನ್-ಡ್ರಾಮಾದ ಮೂಲಕ  ಎರಡನೇ ದಿನದಲ್ಲಿ 53 ಕೋಟಿ ಗಳಿಸಿದೆ. ಮೊದಲನೇ ದಿನಕ್ಕೆ ಹೋಲಿಸಿದರೆ  ಚಿತ್ರದ ಆದಾಯ  ಕಡಿಮೆಯಾಗಿದೆ. ಆದರೂ  ಮೂಲಗಳ ಪ್ರಕಾರ ಜವಾನ್‌ನ ಒಟ್ಟು ಗಳಿಕೆಯು 127.50 ಕೋಟಿ ಆಗಿದೆ.  ಮೊದಲ ದಿನದಂದು  ಜವಾನ್‌ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕ್ರಮವಾಗಿ 74.5 ಕೋಟಿ  65.5 ಕೋಟಿ,  5.3 ಕೋಟಿ  ಮತ್ತು 3.7 ಕೋಟಿ ಸಂಗ್ರಹಿಸಿದೆ.

 

 

Please follow and like us:

tmadmin

Leave a Reply

Your email address will not be published. Required fields are marked *

Next Post

ದೇಶದ್ರೋಹ ಕಾನೂನಿನ ಸಿಂಧುತ್ವ: 12ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ

Sat Sep 9 , 2023
ನವದೆಹಲಿ: ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಸೆಪ್ಟೆಂಬರ್‌ 12ರಂದು ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿರುವ ತ್ರಿಸದಸ್ಯ ಪೀಠವು, ಈ ವಿಚಾರಣೆ ನಡೆಸಲಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ (ದೇಶದ್ರೋಹ) ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು 2022ರ ಮೇ 1ರಂದು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿತ್ತು. ಅತ್ಯಂತ ಹಳೆಯದಾದ […]

Advertisement

Wordpress Social Share Plugin powered by Ultimatelysocial