ದಾಖಲೆ ಬೆಲೆಗೆ ಮಾರಾಟವಾದ ಎತ್ತು|Srirangapatna|

ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ವಿನು ಎಂಬುವರಿಗೆ ಸೇರಿದ ಹಳ್ಳಿಕಾರ್ ತಳಿಯ ಎತ್ತೊಂದು 7.75 ಲಕ್ಷ ರೂ ನ ದಾಖಲೆ ಬೆಲೆಗೆ ಮಾರಾಟವಾಗಿದೆ.ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮದ ಮಂಜು ಎಂಬುವರು ವಿನು ಎಂಬುವರ ಈ ಒಂಟಿ ಹಳ್ಳಿಕಾರ್ ತಳಿಯ ಎತ್ತನ್ನ 7.75 ಲಕ್ಷ ರೂಗಳಿಗೆ ಕೊಂಡು‌ಕೊಂಡಿದ್ದಾರೆ.ಎತ್ತುಗಾಡಿಯ ರೇಸ್ ನಲ್ಲಿ ಈ ಎತ್ತು ಸಾಕಷ್ಟು ಹೆಸರು ಗಳಿಸಿದ್ದು ಈ ಕಾರಣದಿಂದ ಈ ಎತ್ತನ್ನ ಚಿಕ್ಕಮಗಳೂರಿನ ಮಂಜು ಅಧಿಕ ಬೆಲೆ ಕೊಟ್ಟು ಖರೀದಿಸಿದ್ದಾರೆ.ಇಂದು ಗ್ರಾಮಕ್ಕೆ ಆಗಮಿಸಿ ಎತ್ತಿನ ಮಾಲೀಕರಿಗೆ ಸ್ಥಳದಲ್ಲೆ ಹಣ ನೀಡಿ ಈ ಎತ್ತನ್ನ ಖರೀದಿಸಿ ತಮ್ಮೂರಿಗೆ ಕೊಂಡೊಯ್ದಿದ್ದಾರೆ.ದಾಖಲೆ ಬೆಲೆ ಮಾರಾಟವಾದ ಈ ಎತ್ತನ್ನ ಮಾಲೀಕರು‌ಪೂಜೆ ಸಲ್ಲಿಸಿ ಭರ್ಜರಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿ ಕಳಿಸಿಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʻರೆಡ್ ವೈನ್ʼ ಕುಡಿಯೋದ್ರಿಂದ ಕೋವಿಡ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ|Red wine|

Mon Jan 24 , 2022
ನವದೆಹಲಿ: ಹೊಸ ಸಂಶೋಧನೆಯ ಪ್ರಕಾರ ರೆಡ್ ವೈನ್ ಕೋವಿಡ್ -19 ಅನ್ನು ತಡೆಯಲು ಸಹಾಯ ಮಾಡುತ್ತದೆ. ವಾರಕ್ಕೆ ಐದು ಗ್ಲಾಸ್‌ಗಿಂತ ಹೆಚ್ಚು ಕುಡಿಯುವ ಜನರು ವೈರಸ್‌ಗೆ ತುತ್ತಾಗುವ ಅಪಾಯವು ಶೇಕಡಾ 17 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನವನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ. ಇದು ಪಾಲಿಫಿನಾಲ್ ಅಂಶದಿಂದಾಗಿ ಎಂದು ತಜ್ಞರು ನಂಬುತ್ತಾರೆ, ಇದು ಜ್ವರ ಮತ್ತು ಉಸಿರಾಟದ ಪ್ರದೇಶಕ್ಕೆ ಸಂಬಂಧಿಸಿದ ಸೋಂಕುಗಳಂತಹ ವೈರಸ್‌ಗಳ ಪರಿಣಾಮವನ್ನು ತಡೆಯುತ್ತದೆ. ವಾರಕ್ಕೆ ಒಂದರಿಂದ […]

Advertisement

Wordpress Social Share Plugin powered by Ultimatelysocial